ನವೆಂಬರ್ 1 ರಂದು ಅಪ್ಪು ಕಾರ್ಯಕ್ರಮಕ್ಕೆ ಯಾವ ಯಾವ ನಟ ನಟಿಯರು ಬರುತ್ತಿದ್ದಾರೆ

ಕನ್ನಡ ಚಿತ್ರರಂಗದ ಧೃವತಾರೆ ನಗುವಿನ ರಾಯಭಾರಿ ಅಭಿಮಾನಿಗಳ ಪ್ರೀತಿಯ ರಾಜಕುಮಾರ ನಟ ಪುನೀತ್ ರಾಜ್ ಕುಮಾರ್ ನಮ್ಮನ್ನಗಲಿ ಒಂದು ವರ್ಷಗಳು ಉರುಳುತ್ತಿದೆ. ಅಪ್ಪು ಅವರು ಕೇವಲ ನಮ್ಮನ್ನ ದೈಹಿಕವಾಗಿ ಮಾತ್ರ ಬಿಟ್ಟು ಹೋಗಿರಬಹುದು. ಆದರೆ ಅವರು ನಟಿಸಿದ ಸಿನಿಮಾಗಳು, ಅವರ ಸಾಮಾಜಿಕ ಸೇವೆಗಳು, ಅವರ ಆದರ್ಶಮಯ ಬದುಕು, ಅವರ ವ್ಯಕ್ತಿತ್ವ ಗುಣ ಇಂದು ಅವರನ್ನ ಕರ್ನಾಟಕ ಮಾತ್ರ ಅಲ್ಲದೆ ಜಗತ್ತಿನಾದ್ಯಂತ ಸ್ಮರಿಸಿಕೊಳ್ಳುವಂತಾಗಿದೆ. ಇಂದು ಕರ್ನಾಟಕದಲ್ಲಿ ಅಪ್ಪು ಅವರನ್ನ ನೆನೆಪಿಸಿಕೊಳ್ಳದ ದಿನವೇ ಇಲ್ಲ. ಪ್ರತಿ ದಿನ ಒಂದಲ್ಲ ಒಂದು ರೀತಿಯಲ್ಲಿ ಪ್ರತಿಯೊಬ್ಬರು ಅಪ್ಪು ಅವರನ್ನ ಸ್ಮರಿಸುವಂತಹ ಕೆಲಸ ಆಗ್ತಾನೆ ಇದೆ.

ಅಪ್ಪು ಅವರು ಅಕಾಲಿಕ ನಿಧನರಾದಾಗ ಅವರು ಮಾಡಿದ ಅದೆಷ್ಟೋ ನಿಸ್ವಾರ್ಥ ಸೇವೆಗಳು ಬೆಳಕಿಗೆ ಬಂದವು. ಅದುವರೆಗೆ ಅವರು ತಾವು ಮಾಡಿದ ದಾನ ಧರ್ಮ , ಸಹಾಯಗಳನ್ನ ಯಾರೊಂದಿಗೂ ಕೂಡ ಹಂಚಿಕೊಂಡಿರಲಿಲ್ಲ. ಸಾರ್ವಜನಿಕವಾಗಿ ಎಲ್ಲಿಯೂ ಕೂಡ ತಮ್ಮ ಸೇವೆಗೆ ಪ್ರಚಾರವನ್ನ ಕೂಡ ಬಯಸಿರಲಿಲ್ಲ. ಅವರ ನಿಧನದ ನಂತರ ಅವರ ಸಾಮಾಜಿಕ ಕಳಕಳಿ ಕೆಲಸಗಳು ನಿಜಕ್ಕೂ ಕೂಡ ಎಲ್ಲರನ್ನ ನಿಬ್ಬೆರಗಾಗಿಸಿತು. ಅಪ್ಪು ಅವರ ಸಾಮಾಜಿಕ ಸೇವೆಗೆ ಗೌರವಿಸಿ ಮರಣೋತ್ತರವಾಗಿ ಅವರಿಗೆ ಗೌರವ ಡಾಕ್ಟರೇಟ್ ಪದವಿ ಲಭಿಸಿದೆ. ಅದೇ ರೀತಿಯಾಗಿ ಕರ್ನಾಟಕ ಸರ್ಕಾರ ಕೂಡ ಅಪ್ಪು ಅವರಿಗೆ ಕರ್ನಾಟಕ ರತ್ನ ಗೌರವ ನೀಡೋದಾಗೆ ತಿಳಿಸಿತ್ತು. ಹಾಗಾಗಿ ನವೆಂಬರ್1 ಕರ್ನಾಟಕ ರಾಜ್ಯೋತ್ಸವದಂದು ಪುನೀತ್ ರಾಜ್ ಕುಮಾರ್ ಅವರಿಗೆ ಮರಣೋತ್ತರವಾಗಿ ಕರ್ನಾಟಕ ರತ್ನ ಪ್ರಶಸ್ತಿ ಗೌರವವನ್ನ ನೀಡಲಾಗ್ತಿದೆ.

ಈ ಸಮಾರಂಭ ವಿಧಾನಸೌಧದ ಮುಂದೆ ಅದ್ದೂರಿಯಾಗಿ ನಡೆಯುತ್ತಿದ್ದು, ಈ ಕಾರ್ಯಕ್ರಮಕ್ಕೆ ಅನೇಕ ಗಣ್ಯಾತಿಗಣ್ಯರು ಆಗಮಿಸಲಿದ್ದಾರಂತೆ. ವಿಶೇಷ ಅತಿಥಿಗಳಾಗಿ ಭಾರತೀಯ ಚಿತ್ರರಂಗದ ಸೂಪರ್ ಸ್ಟಾರ್ ನಟ ರಜಿನಿಕಾಂತ್, ಬಾಲಿವುಡ್ ಬಿಗ್ ಬಿ ಅಮಿತಾಬ್ ಬಚ್ಚನ್, ಐಶ್ವರ್ಯ ರೈ ಬಚ್ಚನ್, ದೀಪಿಕಾ ಪಡುಕೋಣೆ, ಜ್ಯೂನಿಯರ್ ಎನ್.ಟಿ.ಆರ್ ಸೇರಿದಂತೆ ಖ್ಯಾತ ನಟ ನಟಿಯರು ಆಗಮಿಸಲಿದ್ದಾರೆ ಎಂದು ಮೂಲಗಳು ತಿಳಿಸಿದೆ. ಅಂದು ಪುನೀತ್ ರಾಜ್ ಕುಮಾರ್ ಅವರಿಗೆ ಕರ್ನಾಟಕ ರತ್ನ ಪ್ರಶಸ್ತಿ ನೀಡುತ್ತಿರುವುದು ಅಪ್ಪು ಅಭಿಮಾನಿಗಳಿಗೆ ಮಾತ್ರ ಅಲ್ಲದೆ ನಾಡಿನ ಜನರಿಗೆ ಅಪ್ಪು ಅವರು ನಮ್ಮೊಂದಿಗೆ ಇಲ್ಲ ಅನ್ನೋ ದುಃಖದ ನಡುವೆ ಸಂತಸದ ವಿಚಾರವಾಗಿದೆ.

Leave a Reply

%d bloggers like this: