ನೂರು ಕೋಟಿ ಕ್ಲಬ್ ಸೇರಿದ ಈ ವರ್ಷದ ಐದನೇ ಕನ್ನಡ ಚಿತ್ರ ಕಾಂತಾರ, ಹೊಸ ದಾಖಲೆ ಬರೆದ ರಿಶಬ್ ಶೆಟ್ಟಿ ಅವರು

ಸ್ಯಾಂಡಲ್ ವುಡ್ ನಲ್ಲಿ ಕೆಜಿಎಫ್ ಸಿನಿಮಾದ ನಂತರ ಮತ್ತೆ ಸುವರ್ಣಯುಗ ಆರಂಭವಾಗಿದೆ ಅನಿಸುತ್ತೆ‌. ಯಾಕಪ್ಪಾ ಅಂದರೆ ಕನ್ನಡ ಚಿತ್ರರಂಗದಲ್ಲಿ ರಿಲೀಸ್ ಆಗುತ್ತಿರೋ ಬಹುತೇಕ ಸಿನಿಮಾಗಳು ರಿಲೀಸ್ ಆಗುತ್ತಿವೆ. ಅವುಗಳ ಜೊತೆಗೆ ಮತ್ತೊಂದು ಸಂತಸದ ವಿಚಾರ ಅಂದರೆ ನಮ್ಮ ಕನ್ನಡ ಸಿನಿಮಾಗಳು ಕರ್ನಾಟಕ ಮಾತ್ರ ಅಲ್ಲದೆ ದೇಶ ಹೊರ ದೇಶಗಳಲ್ಲಿ ಯೂ ಕೂಡ ರಿಲೀಸ್ ಆಗಿ ಅಲ್ಲಿಯೂ ಸಹ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಅದರ ಜತೆಗೆ ಬಾಕ್ಸ್ ಆಫೀಸ್ ನಲ್ಲಿ ಭಾರಿ ಕಲೆಕ್ಷನ್ ಮಾಡುತ್ತಿವೆ. ಕೆಜಿಎಫ್, ಕೆಜಿಎಫ್2, ವಿಕ್ರಾಂತ್ ರೋಣ, 777 ಚಾರ್ಲಿ, ಈಗ ಕಾಂತಾರ. ಇನ್ನೂ ಕೆಲವೇ ತಿಂಗಳಲ್ಲಿ ಈ ಪಟ್ಟಿಗೆ ಉಪೇಂದ್ರ ಅವರ ಕಬ್ಜ ಸಿನಿಮಾ ಕೂಡ ಸೇರಿಕೊಳ್ಳಲಿದೆ ಎಂದು ಹೇಳಲಾಗ್ತಿದೆ‌. ಈಗಾಗಲೇ ಈ ಕಬ್ಜ ಸಿನಿಮಾದ ಕ್ರೇಜ಼್ ಸಖತ್ ಆಗಿಯೇ ಶುರುವಾಗಿದೆ.

ಇದೀಗ ಸದ್ಯಕ್ಕೆ ಇಡೀ ಭಾರತೀಯ ಚಿತ್ರರಂಗದಾದ್ಯಂತ ಸಖತ್ ಸೌಂಡ್ ಆಗುತ್ತಿರೋದು ಅಂದರೆ ಅದು ರಿಷಬ್ ಶೆಟ್ಟಿ ಅವರ ಕಾಂತಾರ ಸಿನಿಮಾ. ಕಾಂತಾರ ಸಿನಿಮಾ ನಮ್ಮ ಕರ್ನಾಟಕದ ಕರಾವಳಿ ಭಾಗದ ಸಂಸ್ಕೃತಿ ಅಲ್ಲಿನ ಜನರ ನಂಬಿಕೆ ಆಗಿರೋ ದೈವ ಕೋಲ ಇವುಗಳ ಆಚರಣೆಯನ್ನ ಕಥಾ ವಸ್ತುವನ್ನಾಗಿ ಮಾಡಿಕೊಂಡು ತಯಾರಾಗಿರೋ ಸಿನಿಮಾ. ಇದರಲ್ಲಿ ಪ್ರಮುಖವಾಗಿ ಗಮನಿಸಬೇಕಾದ ಅಂಶ ಅಂದರೆ ಅದು ಕಾಂತಾರ ಸಿನಿಮಾದ ಕ್ಲೈಮ್ಯಾಕ್ಸ್ ನಲ್ಲಿ ಪಂಜುರ್ಲಿ ದೈವದ ಪಾತ್ರದಲ್ಲಿ ಕಾಣಿಸಿಕೊಳ್ಳುವ ನಟ ರಿಷಬ್ ಶೆಟ್ಟಿ ಅವರ ಪರಾಕಾಯ ಪ್ರವೇಶದ ನಟನೆ ನಿಜಕ್ಕೂ ಕೂಡ ಅದ್ಭುತ ಅಂತಾನೇ ಹೇಳ್ಭೋದು. ಸಿನಿಮಾ ನೋಡಿದ ಪ್ರತಿಯೊಬ್ಬರು ಕೂಡ ರಿಷಬ್ ಶೆಟ್ಟಿ ಅವರ ನಟನೆಯನ್ನ ಹೊಗಳೇ ಹೊಗಳ್ತಾರೆ. ಅಷ್ಟರ ಮಟ್ಟಿಗೆ ರಿಷಬ್ ಶೆಟ್ಟಿ ಅವರು ತಮ್ಮ ಪಾತ್ರದಲ್ಲಿ ಜೀವಿಸಿದ್ದಾರೆ. ಕಾಂತಾರ ಸಿನಿಮಾ ಈಗ ಕನ್ನಡ ಸೇರಿದಂತೆ ತೆಲುಗು, ತಮಿಳು, ಮಲೆಯಾಳಂ ಮತ್ತು ಹಿಂದಿ ಭಾಷೆಯಲ್ಲಿ ಸೇರಿದಂತೆ ಸರಿ ಸುಮಾರು ಎರಡೂವರೆ ಸಾವಿರ ಬೆಳ್ಳಿಪರದೆಯಲ್ಲಿ ಪ್ರದರ್ಶನ ಆಗುತ್ತಿದೆ.

ಮೊದಲು ಕಾಂತಾರ ಸಿನಿಮಾ ರಾಜ್ಯಾದ್ಯಂತ ಕನ್ನಡ ಭಾಷೆಯೊಂದರಲ್ಲಿಯೇ ಇನ್ನೂರೈವತ್ತಕ್ಕೂ ಹೆಚ್ಚು ಸಿನಿಮಾ ಮಂದಿರಗಳಲ್ಲಿ ರಿಲೀಸ್ ಆಯ್ತು. ಟ್ರೇಲರ್ ಮೂಲಕ ನಿರೀಕ್ಷೆ ಹುಟ್ಟು ಹಾಕಿದ್ದ ಕಾಂತಾರ ಸಿನಿಮಾ ಮೊದಲ ದಿನವೇ ಸರಿ ಸುಮಾರು ಐದರಿಂದ ಆರು ಕೋಟಿ ಕಲೆಕ್ಷನ್ ಮಾಡಿತು. ಮೊದಲ ದಿನ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡ ಕಾರಣ ಎರಡನೇ ದಿನದಲ್ಲಿ ಅದರ ಕಲೆಕ್ಷನ್ ಕೊಂಚ ದುಪ್ಪಾಟ್ಟಾಯ್ತು ಅಂತ ಹೇಳ್ಭೋದು. ಇದೀಗ ಒಟ್ಟಾರೆಯಾಗಿ ಕಾಂತಾರ ಸಿನಿಮಾ ಎರಡೇ ವಾರದಲ್ಲಿ ಬರೋಬ್ಬರಿ ನೂರು ಕೋಟಿ ಬಾಚಿದೆ. ಈ ಮೂಲಕ ಮತ್ತೊಂದು ಕನ್ನಡ ಸಿನಿಮಾ ನೂರು ಕೋಟಿ ಕ್ಲಬ್ ಸೇರಿದೆ. ಹೊಂಬಾಳೆ ಫಿಲಂಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾದ ಕಾಂತಾರ ಸಿನಿಮಾ ನಿರ್ಮಾಪಕ ವಿಜಯ್ ಕಿರಗಂದೂರ್ ಮತ್ತು ನಟ, ನಿರ್ದೇಶಕ ರಿಷಬ್ ಶೆಟ್ಟಿ ಅವರಿಗೆ ಒಂದೊಳ್ಳೆ ಹೆಸರು ತಂದುಕೊಟ್ಟಿದೆ.

Leave a Reply

%d bloggers like this: