ನೋಡಕ್ಕೆ ಚಿಕ್ಕ ಮಕ್ಕಳ ಮದುವೆ! ಆದ್ರೆ ಇವರ ವಯಸ್ಸು ಎಷ್ಟು ಗೊತ್ತಾ? ಮದುವೆಗಳು ಸ್ವರ್ಗದಲ್ಲಿ ನಿಶ್ಚಯವಾಗಿರತ್ತವೆ ಅನ್ನೋದಕ್ಕೆ ಇದೆ ಸಾಕ್ಷಿ

ಇತ್ತೀಚೆಗೆ ಸೋಶಿಯಲ್ ಮೀಡಿಯಾದಲ್ಲಿ ಪುಟ್ಟ ಹುಡುಗ-ಹುಡುಗಿಯಂತಿರುವ ಜೋಡಿಗಳು ಮದುವೆ ಆಗಿರುವ ಫೋಟೋಗಳು ಸಖತ್ ವೈರಲ್ ಆಗಿವೆ. ಈ ಫೋಟೋ ನೋಡಿದ ಬಹುತೇಕರು ಅರೇ ಇದೆನಿದು ಇಷ್ಟು ಚಿಕ್ಕ ವಯಸ್ಸಿಗೆ ಮದುವೆ ಆಗುತ್ತಿದ್ದಾರಲ್ಲ. ಬಾಲ್ಯ ವಿವಾಹ ಕಾನೂನಿನ ಪ್ರಕಾರ ಅಪರಾಧ ಅದಕ್ಕೆ ಇಡೀ ಕುಟುಂಬವೇ ಸಾಕ್ಷಿಯಾಗಿದೆಯಲ ಎಂದು ನೆಟ್ಟಿಗರು ಅಚ್ಚರಿ ಕೂಡ ವ್ಯಕ್ತಪಡಿಸಿದ್ದರು. ಆದರೆ ಅಸಲಿ ಕಹಾನಿಯೇ ಬೇರೆಯದ್ದಾಗಿದೆ. ಹೌದು ಇವರನ್ನು ನೋಡಿ ನೀವು ಮಕ್ಕಳು ಎಂದು ಭಾವಿಸಬಹುದು. ಆದರೆ ಈ ಪುಟ್ಟ ಜೋಡಿ ಮದುವೆ ವಯಸ್ಸಿನ ಕುಬ್ಜದೇಹ ಹೊಂದಿರುವವರು.ಇವರು ಒಟ್ಟಿಗೆ ವಿಧ್ಯಾಭ್ಯಾಸ ಮಾಡುವುದರ ಜೊತೆಗೆ ಒಂದೇ ಕಂಪನಿಯಲ್ಲಿ ಕೆಲಸ ಮಾಡುತ್ತಿರುವ ಜೋಡಿಗಳು.

ಯಾರು ಯಾರಿಗೆ ಸಿಗಬೇಕು ಎಂಬುದನ್ನ ಸ್ವರ್ಗದಲ್ಲೇ ನಿಶ್ಚಯವಾಗಿರುತ್ತದೆಯಂತೆ ಅಂತೆಯೇ ಋಣಾನುಬಂಧ ರೂಪೇಣ ಪಶುಪತಿ ಸುತಾಲಯ ಅನ್ನುವ ಹಾಗೇ ಒಂದು ಹೆಣ್ಣೆಗೆ ಒಂದು ಗಂಡು ಎಂದು ಇದ್ದೇ ಇರುತ್ತಾರೆ.ಹಾಗೇ ಈ ಜೋಡಿಗಳಿಗೂ ಇವರವರೇ ಎಂದು ಬರೆದಿತ್ತೇನೋ ಎಂಬಂತೆ ಒಂದಾಗಿದ್ದಾರೆ. ಹೌದು ಈ ಕುಬ್ಜ ದೇಹವೊಂದಿರುವ ವಿಷ್ಣು ಮತ್ತು ಜ್ಯೋತಿ ಇಬ್ಬರು ಕೂಡ ಒಂದೇ ಕಾಲೇಜಿನಲ್ಲಿ ಒದಿದವರು. ಇಬ್ಬರ ಮನೆಯಲ್ಲಿಯೂ ಕೂಡ ಇವರಿಗೆ ಮದುವೆ ಮಾಡಲು ಪ್ರಯತ್ನ ಮಾಡುತ್ತಿದ್ದರು‌. ಆದರೆ ಎಲ್ಲಿಯೂ ಕೂಡ ಎರಡು ಕೂಟುಂಬಗಳಿಗೆ ಸೂಕ್ತವಾದಂತಹ ವ್ಯಕ್ತಿ ಸಿಗುತ್ತಿರಲಿಲ್ಲ. ಇದೇ ಸಂಧರ್ಭದಲ್ಲಿ ವಿಷ್ಣು ಅವರು ಜ್ಯೋತಿ ಅವರ ಬಳಿ ನಾವಿಬ್ಬರು ಒಟ್ಟಿಗೆ ಓದಿದ್ದೇವೆ, ನಮ್ಮ ನಿನಗೆ ಸಂಪೂರ್ಣ ಮಾಹಿತಿ ಇದೆ.

ನಿಮ್ಮ ಬಗ್ಗೆಯೂ ಕೂಡ ನನಗೆ ತಿಳಿದಿದ್ದೇನೆ. ಪರಸ್ಪರ ಅರ್ಥ ಮಾಡಿಕೊಂಡಿರುವ ನಾವಿಬ್ಬರು ಏಕೆ ಮದುವೆ ಆಗಬಾರದು ಎಂದು ಕೇಳಿ ಮದುವೆ ಪ್ರಪೋಸಲ್ ಕೂಡ ಮಾಡಿದ್ದಾರೆ. ವಿಷ್ಣು ಅವರ ಈ ಪ್ರಪೋಸಲ್ ಗೆ ಒಪ್ಪಿಗೆ ಸೂಚಿಸಿದ ಜ್ಯೋತಿಯವರು ತಮ್ಮ ಮನೆಯವರನ್ನು ಕೂಡ ಕೇಳಿದರು. ಕೈವಾರದ ವಿಷ್ಣು ಮತ್ತು ಜ್ಯೋತಿ ಅವರ ಎರಡೂ ಕುಟುಂಬಗಳು ಪರಸ್ಪರ ಒಪ್ಪಿ ಮಾತಾಡಿಕೊಂಡು ಇವರಿಬ್ಬರ ಮದುವೆಯನ್ನು ಕಲ್ಯಾಣಗಿರಿ ಶ್ರೀ ಕ್ಷೇತ್ರದಲ್ಲಿ ಸರಳವಾಗಿ ಮಾಡಿ ಮುಗಿಸಿದ್ದಾರೆ. ಈ ಮದುವೆಯ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದ್ದು ಆರಂಭದಲ್ಲಿ ಒಂದಷ್ಟು ಜನರು ಹಾಸ್ಯಮಾಡಿದರು ಕೂಡ ತದ ನಂತರ ನಿಜಾಂಶ ಅರಿತು ನವ ಜೋಡಿಗಳಿಗೆ ಶುಭ ಹಾರೈಸಿದ್ದಾರೆ.

Leave a Reply

%d bloggers like this: