ನಿತ್ಯಾನಂದನ ಆಶ್ರಮ ಸೇರಿದ ಮತ್ತೊಬ್ಬ ಖ್ಯಾತ ನಟಿ ಈ ನಟಿಯರಿಗೆ ಏನಾಗಿದೆ

ಭಾರತದಾದ್ಯಂತ ಸಿಕ್ಕಾಪಟ್ಟೆ ಪ್ರಸಿದ್ಧವಾದವನು ನಿತ್ಯಾನಂದ ಸಾವ್ಮೀಜಿ.ಸ್ವಯಂಘೋಷಿತ ದೇವಮಾನವ ನಿತ್ಯಾನಂದ ಏನೇ ಮಾಡಿದರೂ ಟ್ರೋಲ್ ಆಗುವ ಸಲುವಾಗಿಯಾದರೂ ಸುದ್ದಿಯಲ್ಲಿ ಇರುತ್ತಾನೆ.ಕೈಲಾಸ ಅನ್ನುವ ದೇಶವನ್ನೇ ಮಾಡಿಕೊಂಡರೂ ಬಿಡದಿಯ ಇವನ ಆಶ್ರಮದಲ್ಲಿ ವಿಭಿನ್ನ ರೀತಿಯ ಚಟುವಟಿಕೆಗಳು ಹೆಚ್ಚುತ್ತಲೇ ಇವೆ. ಕಳೆದ ವರ್ಷವಷ್ಟೇ ಇವನ ಆಶ್ರಮದ ಮೇಲೆ ಸಾಕಷ್ಟು ಆರೋಪಗಳು ಕೇಳಿ ಬಂದಿದ್ದು,ಅವು ಬೆಳಕಿಗೆ ಕೂಡ ಬಂದಿದ್ದವು.ಆದರೂ ಕೂಡ ಇವನನ್ನು ದೇವಮಾನವನೆಂದು ನಂಬಿರುವ ಅನೇಕ ವಿದೇಶಿ ಭಕ್ತಾದಿಗಳು ಇವನ ಆಶ್ರಮಕ್ಕೆ ಬಂದು ಇವನ ಆಶೀರ್ವಾದ ಪಡೆದು ದಿನವೆಲ್ಲಾ ಆಶ್ರಮದಲ್ಲಿ ಇದ್ದು ಭಜನೆ ಮಾಡಿ ಹೋಗುತ್ತಾರೆ.

ವಿದೇಶದವರಷ್ಟೇ ಅಲ್ಲದೇ ಭಾರತದ ಹಲವು ಭಾಗಗಳಿಂದ ಇವನ ಆಶ್ರಮಕ್ಕೆ ಬರುವವರು ಇದ್ದಾರೆ.ಇವನ ಕೈಲಾಸ ಅನ್ನುವ ದೇಶಕ್ಕೆ ಧ್ವಜ,ಲಾಂಛನ, ಪಾಸ್ ಪೋರ್ಟ್ ಕೂಡ ಸಿದ್ಧಪಡಿಸಿದ್ದಾನೆ.ಅದರ ಪೌರತ್ವ ಪಡೆಯುವುದೇ ಒಂದು ಪುಣ್ಯ ಸದಾವಕಾಶ ಎಂದು ಅದರ ಕುರಿತು ಒಂದು ಅಧಿಕ್ಱುತ ವೆಬ್ ಸೈಟ್ ತಯಾರಿಸಿ ಅದರಲ್ಲಿ ಆ ದೇಶದ ಬಗ್ಗೆ ವಿವರಿಸಿದ್ದಾನೆ.ಕೈಲಾಸ ರಾಜಕೀಯೇತಾರ ದೇಶವಂತೆ.ಎಲ್ಲಾ ಮಾನವರು ಪ್ರಬುದ್ಧರಾಗಿ ಬದುಕುವುದು ಅದರ ಗುರಿಯಂತೆ.ಈಗ ನಿತ್ಯಾನಂದ ಮತ್ತೆ ಹಳೇ ರೀತಿಯ ವಿಚಾರದಿಂದ ಸುದ್ದಿಯಲ್ಲಿದ್ದಾನೆ.

ನಟಿ ರಂಜಿತಾ ನಂತರ ಮತ್ತೊಬ್ಬ ನಟಿಯ ಹೆಸರು ನಿತ್ಯಾನಂದನ ಜೊತೆ ತಳುಕು ಹಾಕಿಕೊಂಡಿದೆ.ಆ ನಟಿ ಕೂಡ ಕನ್ನಡದವರೇ ಎಂದು ತಿಳಿದುಬಂದಿದೆ.ಅವರ ಹೆಸರು ಕೌಸಲ್ಯ.ಬೆಂಗಳೂರಿನಲ್ಲೇ ಹುಟ್ಟಿ ಬೆಳೆದಿದ್ದ ಕೌಶಲ್ಯ ಮಾಡೆಲಿಂಗ್ ಮೂಲಕ ಮಲಯಾಳಂ ಚಿತ್ರರಂಗಕ್ಕೆ ಎಂಟ್ರಿಯಾಗಿ ನಂತರ ತಮಿಳು ಕನ್ನಡದಲ್ಲೂ ಪ್ರಸಿದ್ಧರಾದರು.ಇಂಥಾ ಕೌಶಲ್ಯಾರಿಗೆ ನಿತ್ಯಾನಂದನ ಆಶ್ರಮ ಸೇರುವ ಕರ್ಮ ಏನಪ್ಪಾ ಅಂದ್ರೆ ಹಿಮ್ಮಡಿ ನೋವು.

ಎಷ್ಟೇ ಆಸ್ಪತ್ರೆ ಅಲೆದಾಡಿದರೂ ವಾಸಿಯಾಗಲಿಲ್ಲ ಇವರ ಹಿಮ್ಮಡಿ ನೋವು.ಕೆಲವು ಆಪ್ತರು ಇವರಿಗೆ ನಿತ್ಯಾನಂದನ ಆಶ್ರಮದಲ್ಲಿ ಇದು ಗುಣವಾಗುತ್ತದೆ ಎಂದು ತಿಳಿಸಿದ್ದಾರೆ.ತಕ್ಷಣ ಕೌಸಲ್ಯ ನಿತ್ಯಾನಂದನ ಆಶ್ರಮ ಸೇರಿದ್ದಾರೆ.ಚಿಕಿತ್ಸೆಯಾದ ಕೆಲವೇ ದಿನಗಳಲ್ಲಿ ಇವರ ನೋವು ಗುಣವಾಗಿದೆ.ಹೀಗಾಗಿ ಕೌಸಲ್ಯ ಅಲ್ಲೇ ನಿತ್ಯಾನಂದನ ಸನ್ಯಾಸಿನಿಯಾಗಿ ದೀಕ್ಷೆ ಪಡೆದು ಸೇವನಿರತರಾಗಿದ್ದಾರಂತೆ.ಈ ವಿಷಯ ಇಡೀ ದಕ್ಷಿಣ ಭಾರತದ ಚಿತ್ರರಂಗದಲ್ಲಿ ಚರ್ಚೆಗೆ ಗ್ರಾಸವಾಗಿದೆ.

Leave a Reply

%d bloggers like this: