ನಿರ್ಮಾಪಕಿಯಾಗಿ ಮತ್ತೆ ಕನ್ನಡಕ್ಕೆ ರಮ್ಯಾ ಅವರು, ಅವರ ಮೊದಲ ಚಿತ್ರದಲ್ಲಿ ಕನ್ನಡದ ಈ ಖ್ಯಾತ ನಟನಿಗೆ ಅವಕಾಶ

ಇತ್ತೀಚಿಗಷ್ಟೇ ಕೆಲವು ದಿನಗಳ ಹಿಂದೆ ಚಂದನವನದ ಮಿನುಗುತಾರೆ ನಟಿ ರಮ್ಯಾ ಅವರು ಏಳೆಂಟು ವರ್ಷಗಳ ನಂತರ ಸ್ಯಾಂಡಲ್ ವುಡ್ಗೆ ನಿರ್ಮಾಪಕಿಯಾಗಿ ರೀ ಕೊಟ್ಟಿದ್ದಾರೆ. ರಾಜಕೀಯ ಕ್ಷೇತ್ರಕ್ಕೆ ಹೋದ ನಂತರ ನಟಿ ರಮ್ಯಾ ಅವರು ಚಿತ್ರರಂಗದಿಂದ ದೂರ ಉಳಿದುಕೊಂಡಿದ್ದರು. ತದ ನಂತರ ಸೋಶಿಯಲ್ ಮೀಡಿಯಾಗಳಲ್ಲಿ ಸಖತ್ ಆಕ್ಟೀವ್ ಆದ ರಮ್ಯಾ ಅವರು ಮತ್ತೇ ತಮ್ಮ ಅಭಿಮಾನಿಗಳ ಸಂಪರ್ಕಕ್ಕೆ ಸಿಕ್ಕರು. ತಮ್ಮ ದೈನಂದಿನ ಅಪ್ ಡೇಟ್ಸ್ ನೀಡುತ್ತಾ ಹೊಸ ಸಿನಿಮಾ ತಂಡಕ್ಕೆ ಪ್ರೋತ್ಸಾಹ ನೀಡುತ್ತಾ ಬಂದರು. ಈ ಮೂಲಕ ಮತ್ತೆ ತಾನು ಚಿತ್ರರಂಗಕ್ಕೆ ರೀಎಂಟ್ರಿ ಕೊಡುವ ಮುನ್ಸೂಚನೆ ನೀಡಿದರು. ಇದು ಅವರ ಅಸಂಖ್ಯಾತ ಅಭಿಮಾನಿಗಳಿಗೆ ಖುಷಿಯಾಗಿ, ಯಾವಾಗ ತಮ್ಮ ನೆಚ್ಚಿನ ನಟಿ ಸಿನಿಮಾ ಮಾಡ್ತಾರೆ ಅಂತ ಕಾತುರದಲ್ಲಿ ಕಾಯುತ್ತಿದ್ದರು.

ಅದರಂತೆ ಬ್ಯೂಟಿ ಕ್ವೀನ್ ರಮ್ಯಾ ಎಲ್ಲರ ಅಭಿಲಾಶೆಯಂತೆ ಸಿನಿಮಾರಂಗಕ್ಕೆ ಮತ್ತೇ ರೀಎಂಟ್ರಿ ಕೊಟ್ಟಿದ್ದಾರೆ. ಆದರೆ ನಟಿಯಾಗಿ ಅಲ್ಲ. ನಿರ್ಮಾಪಕಿಯಾಗಿ ಅನ್ನೋದು ವಿಶೇಷ. ಮೋಹಕ ತಾರೆ ನಟಿ ರಮ್ಯಾ ಅವರು ಗುಡ್ ನ್ಯೂಸ್ ತಿಳಿಸಿದ್ರು. ಆಪಲ್ ಬಾಕ್ಸ್ ಸ್ಟೂಡಿಯೋಸ್ ಎಂಬ ನಿರ್ಮಾಣ ಸಂಸ್ಥೆಯನ್ನ ರಮ್ಯಾ ಅವರು ಆರಂಭಿಸುವ ಮೂಲಕ ಕನ್ನಡ ಚಿತ್ರರಂಗಕ್ಕೆ ನಿರ್ಮಾಪಕಿಯಾಗಿ ರೀ ಎಂಟ್ರಿ ಪಡೆದುಕೊಳ್ಳುತ್ತಿರೋ ಬಗ್ಗೆ ಪೋಸ್ಟ್ ವೊಂದನ್ನ ಹಂಚಿಕೊಂಡಿದ್ದರು. ತಮ್ಮ ಆಪಲ್ ಬಾಕ್ಸ್ ಸಂಸ್ಥೆ ಈಗ ಎರಡು ಚಿತ್ರಗಳನ್ನ ನಿರ್ಮಾಣ ಮಾಡಲು ಸಜ್ಜಾಗಿದೆ ಅಂತಾನೂ ಕೂಡ ತಿಳಿಸಿದ್ರು. ಆದ್ರೇ ಈಗಾಗಲೇ ಸಿದ್ದತೆಯಲ್ಲಿರೋ ಆ ಎರಡು ಸಿನಿಮಾಗಳು ಯಾವುದು ಮತ್ತು ಆ ಚಿತ್ರಗಳ ನಾಯಕ ನಟರು, ನಿರ್ದೇಶಕರು ಯಾರು ಎಂಬ ಸ್ಪಷ್ಟ ಮಾಹಿತಿ ನೀಡಿರಲಿಲ್ಲ.

ಆದರೆ ಇದೀಗ ಒಂದು ಚಿತ್ರ ಯಾರು ಮಾಡುತ್ತಿದ್ದಾರೆ ಎಂಬ ಮಾಹಿತಿ ಹೊರ ಬಿದ್ದಿದೆ. ಹೌದು ಕನ್ನಡ ಚಿತ್ರರಂಗದ ವಿಭಿನ್ನ ನಟ, ನಿರ್ದೇಶಕ ಬಹುಮುಖ ಪ್ರತಿಭೆ ಆಗಿರೋ ರಾಜ್.ಬಿ.ಶೆಟ್ಟಿ ಅವರಿಗೆ ರಮ್ಯಾ ಅವರು ಸಿನಿಮಾ ನಿರ್ಮಾಣ ಮಾಡುತ್ತಿದ್ದಾರಂತೆ. ರಾಜ್.ಬಿ.ಶೆಟ್ಟಿ ಅವರ ಗರುಡ ಗಮನ ವೃಷಭ ವಾಹನ ಸಿನಿಮಾ ನೋಡಿ ಥ್ರಿಲ್ ಆಗಿ ನಟಿ ರಮ್ಯಾ ಅವರು ರಾಜ್.ಬಿ.ಶೆಟ್ಟಿ ಅವರನ್ನ ಭೇಟಿ ಮಾಡಿ ಮೆಚ್ಚುಗೆ ವ್ಯಕ್ತಪಡಿಸಿದ್ದರಂತೆ. ಅದರ ಜೊತೆಗೆ ಒಂದು ಸಿನಿಮಾ ಮಾಡುವ ಭರವಸೆ ಕೂಡ ನೀಡಿದ್ದರಂತೆ. ಅದರಂತೆ ಇದೀಗ ರಮ್ಯಾ ಅವರು ತಮ್ಮ ಆಪಲ್ ಬಾಕ್ಸ್ ಸ್ಟೂಡಿಯೋಸ್ ಮುಖಾಂತರ ರಾಜ್.ಬಿ.ಶೆಟ್ಟಿ ಅವರಿಗೆ ಒಂದು ಚಿತ್ರ ಮಾಡಲು ಅವಕಾಶ ನೀಡಿದ್ದಾರೆ. ಈಗಾಗಲೇ ಈ ಹೊಸ ಚಿತ್ರದ ಕೆಲಸಗಳು ಆರಂಭವಾಗಿವೆ ಎಂದು ತಿಳಿದು ಬಂದಿದೆ. ರಮ್ಯಾ ಅವರು ನಿರ್ಮಾಣ ಮಾಡುತ್ತಿರೊ ಇನ್ನೊಂದು ಸಿನಿಮಾದ ಬಗ್ಗೆ ಸದ್ಯಕ್ಕೆ ಮಾಹಿತಿ ಸಿಕ್ಕಿಲ್ಲ. ಒಟ್ಟಾರೆಯಾಗಿ ರಾಜ್.ಬಿ.ಶೆಟ್ಟಿ ಅವರು ರಮ್ಯಾ ಅವರ ಬ್ಯಾನರಡಿಯ ಚೊಚ್ಚಲ ಸಿನಿಮಾ ಮಾಡುವ ಅವಕಾಶ ಪಡೆದುಕೊಂಡಿದ್ದಾರೆ.

Leave a Reply

%d bloggers like this: