ನಿರ್ಮಾಪಕನ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಖ್ಯಾತ ನಿರೂಪಕಿ

ಖ್ಯಾತ ನಿರ್ಮಾಪಕ ರವೀಂದ್ರ ಅವರನ್ನ ನಿರೂಪಕಿ ಕಮ್ ನಟಿಯಾಗಿರೋ ಮಹಾಲಕ್ಷ್ಮಿ ಅವರು ಎರಡನೇ ಮದುವೆ ಆಗಿದ್ದಾರೆ. ಹೌದು ಆರಂಭದಲ್ಲಿ ಇದು ಎಲ್ಲರಿಗೂ ಗೊಂದಲ ಆಗಿತ್ತು. ಯಾಕಪ್ಪಾ ಅಂದರೆ ರವೀಂದ್ರ ಅವರು ಸಿನಿಮಾ ನಿರ್ಮಾಪಕ. ಮಹಾಲಕ್ಷ್ಮಿ ನಟಿ. ಹಾಗಾಗಿ ಇದು ಯಾವುದೋ ಸಿನಿಮಾವೊಂದರ ಪ್ರಚಾರ ಇರಬಹುದು ಎಂದು ಎಲ್ಲರೂ ಕೂಡ ಅಂದುಕೊಂಡಿದ್ದರು. ಆದರೆ ಇದು ನಿಜವಾಗಿಯೂ ಕೂಡ ನಡೆದ ಮದುವೆ. ತಿರುಪತಿಯಲ್ಲಿ ನಿರ್ಮಾಪಕ ರವೀಂದ್ರ ಅವರು ನಟಿ ಮಹಾಲಕ್ಷ್ಮಿ ಅವರನ್ನ ತಮ್ಮ ಬಾಳ ಸಂಗಾತಿಯಾಗಿ ಸ್ವೀಕರಿಸಿದ್ದಾರೆ. ತಿರುಮಲ ತಿರುಪತಿಯಲ್ಲಿ ಇಬ್ಬರು ಮದುವೆ ಆಗಿದ್ದು, ಚೆನ್ನೈನಲ್ಲಿ ಅದ್ದೂರಿಯಾಗಿ ರಿಸೆಪ್ಶನ್ ಕೂಡ ಮಾಡಿಕೊಂಡಿದ್ದಾರೆ. ಮಹಾಲಕ್ಷ್ಮಿ ಅವರು ತಮಿಳಿನ ಸನ್ ಮ್ಯೂಸಿಕ್ ನಲ್ಲಿ ನಿರೂಪಕಿಯಾಗಿ ಅಪಾರ ಜನಪ್ರಿಯತೆ ಪಡೆದಿದ್ದರು.

ಅದರ ಜೊತೆಗೆ ವಾಣಿ ರಾಣಿ, ಆಫೀಸ್, ಚೆಲ್ಲಮೇ ಉಥಿರಿಪೊಕ್ಕಳ್, ಒರಕೈ ಒಸೈ ಸೇರಿದಂತೆ ಒಂದಷ್ಟು ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ಸದ್ಯಕ್ಕೆ ಮಹಾಲಕ್ಷ್ಮಿ ಅವರು ನಟಿಸಿರೋ ಮಹಾರಸಿ ಎಂಬ ಧಾರಾವಾಹಿ ಇಂದಿಗೂ ಕೂಡ ಯಶಸ್ವಿಯಾಗಿ ಪ್ರಸಾರವಾಗುತ್ತಿದೆ. ಇನ್ನು ನಟಿ ಮಹಾಲಕ್ಷ್ಮಿ ಅವರಿಗೆ ಇದು ಎರಡನೇ ಮದುವೆ. ಈಗಾಗಲೇ ಮದುವೆಯಾಗಿ ಇವರಿಗೆ ಎಂಟು ವರ್ಷದ ಮಗ ಕೂಡ ಇದ್ದಾನೆ. ಕೆಲವು ಕಾರಾಣಾಂತರಗಳಿಂದ ತಮ್ಮ ಪತಿಯಿಂದ ವಿಚ್ಚೇದನ ಪಡೆದು ಇದೀಗ ತಮಿಳಿನ ಖ್ಯಾತ ನಿರ್ದೇಶಕ ರವೀಂದ್ರ ಅವರನ್ನ ಕೈ ಹಿಡಿದಿದ್ದಾರೆ. ಸದ್ಯಕ್ಕೆ ಕಾಲಿವುಡ್ ನಲ್ಲಿ ಇವರಿಬ್ಬರ ಮದುವೆ ಸಖತ್ ಸುದ್ದಿಯಾಗಿದೆ.

ಸೋಶಿಯಲ್ ಮೀಡಿಯಾದಲ್ಲಿ ರವೀಂದ್ರ ಅವರು ತಮ್ಮ ಮದುವೆಯ ಫೋಟೋಗಳನ್ನ ಶೇರ್ ಮಾಡಿಕೊಂಡಿದ್ದಾರೆ. ಈ ಮದುವೆಯ ಫೋಟೋಗಳನ್ನ ಕಂಡು ಅವರ ಹಿತೈಷಿಗಳು ಮತ್ತು ಕುಟುಂಬ ವರ್ಗದವರು ಮೆಚ್ಚುಗೆ ವ್ಯಕ್ತಪಡಿಸಿ ನವ ದಂಪತಿಗಳಿಗೆ ಶುಭ ಹಾರೈಸುತ್ತಿದ್ದಾರೆ. ಆದರೆ ಒಂದಷ್ಟು ಮಂದಿ ಇವರಿಬ್ಬರ ಜೋಡಿಯ ಬಗ್ಗೆ ಅಪಹಾಸ್ಯ ಮಾಡುತ್ತಿರೋದು ಕೂಡ ನಡೆಯುತ್ತಿದೆ. ಆದರೆ ಅವರವರ ಬದುಕು ಅವರವರ ಇಚ್ಚೆ ಇರೋವಾಗ ಮತ್ತೊಬ್ಬರು ಅವರನ್ನ ಛೇಡಿಸೋದು ಮುಠ್ಠಾಳ್ತನದ ಪರಮಾವಧಿ ಎಂದು ಒಂದಷ್ಟು ಕಮೆಂಟ್ ಕೂಡ ಬರುತ್ತಿದೆ. ಒಟ್ಟಾರೆಯಾಗಿ ನಟಿ ಮಹಾಲಕ್ಷ್ಮಿ ಮತ್ತು ನಿರ್ಮಾಪಕ ರವೀಂದ್ರ ಅವರ ಮದುವೆಯ ಸುದ್ದಿ ಮತ್ತು ಈ ದಂಪತಿಯ ಫೋಟೋಗಳು ಇದೀಗ ಸೋಶಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗುತ್ತಿವೆ.

Leave a Reply

%d bloggers like this: