ನಿರ್ಮಾಪಕ ಉಮಾಪತಿ ಅವರ ಒಟ್ಟು ಆಸ್ತಿ ಮೌಲ್ಯ ಎಷ್ಟು ಗೊತ್ತಾ

ಮೊದಲ ಚಿತ್ರದ ನಿರ್ಮಾಣದಲ್ಲಿ ಭಾರಿ ಯಶಸ್ಸು ಕಂಡ ನಿರ್ಮಾಪಕ ಉಮಾಪತಿ ಶ್ರೀನಿವಾಸ್ ಗೌಡ ಸ್ಟಾರ್ ನಟರೊಂದಿಗೆ ಉತ್ತಮ ಭಾಂಧವ್ಯ ಹೊಂದಿದ್ದಾರೆ. ಹಾಗಾಗಿ ನಿರ್ದೇಶಕ ಜೋಗಿ ಪ್ರೇಮ್ ನಿರ್ದೇಶನದಲ್ಲಿ ದರ್ಶನ್ ಅವರ ಒಟ್ಟಿಗೆ ಚಿತ್ರವೊಂದನ್ನು ನಿರ್ಮಾಣ ಮಾಡುವ ಆಸೆ ಇಟ್ಟಿಕೊಂಡಿದ್ದರು.ಆದರೆ ಪ್ರೇಮ್ ಅವರ ಡೇಟ್ ಸಮಸ್ಯೆಯಿಂದಾಗಿ ಪ್ರೇಮ್ ಅವರ ಜಾಗಕ್ಕೆ ತರುಣ್ ಸುಧೀರ್ ಎಂಟ್ರಿ ಆಗಿ ರಾಬರ್ಟ್ ಸಿನಿಮಾ ಸಟ್ಟೇರಿತು.ಚಾಲೆಂಜಿಂಗ್ ಸ್ಟಾರ್ ದರ್ಶನ್ ನಾಯಕತ್ವದಲ್ಲಿ ಮೂಡಿ ಬಂದ ರಾಬರ್ಟ್ ಚಿತ್ರ ಕನ್ನಡ ಮತ್ತು ತೆಲುಗಿನಲ್ಲಿ ತೆರೆಕಂಡು ಯಶಸ್ವಿ ಪ್ರದರ್ಶನ ಕಂಡಿತು.ದರ್ಶನ್ ಸಿನಿಮಾಗಳು ಅಂದಮೇಲೆ ಬಾಕ್ಸ್ ಆಫೀಸ್ ನಲ್ಲಿ ಸೌಂಡ್ ಮಾಡೇ ಮಾಡುತ್ತವೆ.

ಉಮಾಪತಿ ಶ್ರೀನಿವಾಸ್ ಗೌಡ ಅವರು ಮೂಲತಃ ಬೆಂಗಳೂರಿನವರೇ ಆಗಿದ್ದಾರೆ ಆಗರ್ಭ ಶ್ರೀಮಂತ ಕುಟುಂಬ ಹಿನ್ನೆಲೆಯನ್ನು ಹೊಂದಿರುವ ಉಮಾಪತಿ ಅವರು ಇತ್ತೀಚೆಗೆ ಖಾಸಗಿ ವಾಹಿನಿಯಲ್ಲಿ ಅವರೇ ತಿಳಿಸಿರುವ ಹಾಗೆ ಬೆಂಗಳೂರು ನಗರದಲ್ಲಿ ತಮಗೆ ನೂರಾರು ಎಕರೆ ಆಸ್ತಿ ಇದೆ ಎಂದು ಸಹ ಹೇಳಿದ್ದಾರೆ. ಅವರು ಹತ್ತು ಹಲವು ಪ್ರಾಪರ್ಟಿಗಳ ಮಾಲೀಕರಾಗಿದ್ದಾರೆ ಎಂಬ ವಿಚಾರ ಕೂಡ ತಿಳಿದುಬಂದಿದೆ. ಯಶಸ್ವಿ ಉದ್ಯಮಿ ಹಾಗೂ ನಿರ್ಮಾಪಕರಾಗಿ ಗುರುತಿಸಿಕೊಂಡಿರುವ ಉಮಾಪತಿ ಅವರು ಇದರಿಂದಲೇ ತಿಳಿಯುತ್ತದೆ ಅಗರ್ಭ ಶ್ರೀಮಂತರು ಎಂದು.

ಇವರು ಲಕ್ಕಿ ಪ್ರೊಡ್ಯೂಸರ್ ಅಂತಾನೆ ಹೇಳಬಹುದು ಹಾಗೂ ಇವರ ವೈಯಕ್ತಿಕ ಜೀವನದ ಬಗ್ಗೆ ಹೇಳುವುದಾದರೆ ಇವರಿಗೆ ಒಬ್ಬ ಗಂಡು ಮಗು ಹೆಣ್ಣು ಮಗು ಇದ್ದು ಮುಂದಿನ ದಿವಸ ದಲ್ಲಿಯೂ ಕೂಡ ಭಾರೀ ಯಶಸ್ಸು ನಿರ್ಮಾಪಕರಗಲಿದ್ದಾರೆ ಎಂದು ಹೇಳಲಾಗಿದೆ. ಉಮಾಪತಿ ಶ್ರೀನಿವಾಸ್‌, ಕನ್ನಡ ಚಿತ್ರರಂಗದಲ್ಲಿ ಹಿಟ್‌ ಸಿನಿಮಾಗಳನ್ನು ನೀಡಿದ್ದಾರೆ. ಉದ್ಯಮಿಯಾಗಿ, ಸಿನಿಮಾ ನಿರ್ಮಾಪಕನಾಗಿ ಗುರುತಿಸಿಕೊಂಡಿರುವ ಉಮಾಪತಿ ಶ್ರೀನಿವಾಸ್‌, ಕಳೆದ ವರ್ಷ ದರ್ಶನ್‌ ವಿಚಾರಕ್ಕೆ ಸುದ್ದಿಯಾಗಿದ್ದರು. ಇದೀಗ ಅವರ ವಿರುದ್ಧ ಸರ್ಕಾರಿ ಭೂಮಿ ಕಬಳಿಸಿದ ಆರೋಪ ಕೇಳಿ ಬಂದಿದೆ.

ಉಮಾಪತಿ ಶ್ರೀನಿವಾಸ್‌ ಬೆಂಗಳೂರು ದಕ್ಷಿಣ, ತಾವರೆಕೆರೆ, ಸೂಲಿವಾರ, ಚಿಕ್ಕನಹಳ್ಳಿ ಹಾಗೂ ಇನ್ನಿತರ ಕಡೆ ನಕಲಿ ಕ್ರಯಪತ್ರವನ್ನು ಸೃಷ್ಟಿಸಿ ನೂರಾರು ಕೋಟಿ ರೂಪಾಯಿ ಬೆಲೆ ಬಾಳುವ ಸರ್ಕಾರಿ ಜಾಗವನ್ನು ಒತ್ತುವರಿ ಮಾಡಿಕೊಂಡಿದ್ದಾರೆ ಎಂದು ಸಾಮಾಜಿಕ ಹೋರಾಟಗಾರ ಹೇಮಂತ್‌ ರಾಜು ಎನ್ನುವವರು ಆರೋಪಿಸಿದ್ದಾರೆ. ಉಮಾಪತಿ ತಾವು ಒತ್ತುವರಿ ಮಾಡಿಕೊಂಡಿರುವ ಜಾಗದಲ್ಲಿ ಗಣಿಗಾರಿಕೆ ಇಲಾಖೆಯಿಂದ ಪರವಾನಗಿ ಪಡೆಯದೆ ಅಕ್ರಮ ಗಣಿಗಾರಿಕೆ ಕೂಡಾ ಆರಂಭಿಸಿದ್ದಾರೆ ಎಂದು ಹೇಮಂತ್‌, ನಿರ್ಮಾಪಕ ಉಮಾಪತಿ ವಿರುದ್ಧ ಕಂದಾಯ ಇಲಾಖೆ ಹಾಗೂ ಡಿಸಿ ಕಚೇರಿಗೆ ದೂರು ನೀಡಿದ್ದಾರೆ. ತಮ್ಮ ಮೇಲಿನ ಆರೋಪವನ್ನು ನಿರ್ಮಾಪಕ ಉಮಾಪತಿ ನಿರಾಕರಿಸಿದ್ದಾರೆ. ”ತಾತನ ಕಾಲದಿಂದಲೂ ನಾವು ಜಮೀನುದಾರರು.

ಭೂಮಿ ಕಬಳಿಸಿದ್ದಾರೆ, ಒತ್ತುವರಿ ಮಾಡಿಕೊಂಡಿದ್ದಾರೆ ಎಂಬ ಆರೋಪ ಶುದ್ಧ ಸುಳ್ಳು. ಬಹಳ ವರ್ಷಗಳ ಹಿಂದೆಯೇ ನಮ್ಮ ತಂದೆ ಈ ಸ್ಥಳವನ್ನು ಖರೀದಿಸಿದ್ದಾರೆ. ಇದಕ್ಕೆ ಸಂಬಂಧಿಸಿದ ದಾಖಲೆಗಳು ನಮ್ಮ ಬಳಿ ಇವೆ. ಅವಶ್ಯಕತೆ ಬಂದಾಗ ಆ ದಾಖಲೆಗಳನ್ನು ನೀಡುತ್ತೇನೆ. ಹೇಮಂತ್‌ ಅವರು 6 ತಿಂಗಳಿನಿಂದ ಈ ಆರೋಪ ಮಾಡುತ್ತಲೇ ಬಂದಿದ್ದಾರೆ. ನಾನು ಇದರ ಬಗ್ಗೆ ತಲೆ ಕೆಡಿಸಿಕೊಂಡಿಲ್ಲ. ಇನ್ನೊಬ್ಬರ ಭೂಮಿಯನ್ನು ಕಬಳಿಸುವ ಪರಿಸ್ಥಿತಿ ನಮಗೆ ಬಂದಿಲ್ಲ. ಹೇಮಂತ್‌ ನನ್ನ ವಿರುದ್ಧ ದೂರು ನೀಡಿದ್ದಾರೆ. ಅವರು ಕಾನೂನಿನ ಮುಖಾಂತರ ಹೋರಾಡಲಿ, ನಾನೂ ಕಾನೂನು ಹೋರಾಟಕ್ಕೆ ಸಿದ್ದನಿದ್ದೇನೆ” ಎಂದು ಉಮಾಪತಿ ಹೇಳಿದ್ದಾರೆ.

Leave a Reply

%d bloggers like this: