ನಿರ್ಮಾಪಕರಿಗೆ ದೊಡ್ಡ ಯಶಸ್ಸು ತಂದುಕೊಟ್ಟ ಗಾಳಿಪಟ2 ಸಿನಿಮಾದ ಒಟ್ಟು ಗಳಿಕೆ ಎಷ್ಟು

ಇವ್ಯಾವು ಕೂಡ ಬಿಗ್ ಬಜೆಟ್ ಸಿನಿಮಾಗಳಲ್ಲ. ಆದರೆ ಈ ಸಿನಿಮಾಗಳು ಬಾಕ್ಸ್ ಆಫೀಸ್ ನಲ್ಲಿ ಭರ್ಜರಿ ಕಲೆಕ್ಷನ್ ಮಾಡಿ ಕೋಟಿ ಕೋಟಿ ಲೂಟಿ ಮಾಡಿವೆ. ಅದರಲ್ಲಿಯೂ ಕೂಡ ಕಳೆದ ತಿಂಗಳು ಆಗಸ್ಟ್ ನಲ್ಲಿ ಬಿಡುಗಡೆಯಾದ ಕೆಲವು ತೆಲುಗು ಸಿನಿಮಾಗಳು ಸೂಪರ್ ಡೂಪರ್ ಹಿಟ್ ಆಗಿ ಬಾಕ್ಸ್ ಆಫೀಸ್ ಚಿಂದಿ ಉಡಾಯಿಸಿದ್ದಾವೆ. ಅವುಗಳಲ್ಲಿ ದುಲ್ಖರ್ ಸಲ್ಮಾನ್ ಮತ್ತು ಮೃಣಲಾ ಠಾಕೂರ್, ರಶ್ಮಿಕಾ ಮಂದಣ್ಣ ನಟನೆಯ ಸೀತಾ ರಾಮಂ, ತಮಿಳಿನ ಸ್ಟಾರ್ ನಟ ಧನುಷ್ ನಟನೆಯ ತಿರುಚಿತ್ರಾಂಬಲಂ ಚಿತ್ರ, ಬಿಂಬಿಸಾರಾ, ಕಾರ್ತಿಕೇಯ2 ಸಿನಿಮಾಗಳು ಬಾಕ್ಸ್ ಆಫೀಸ್ ನಲ್ಲಿ ಜೋರಾಗಿ ಸದ್ದು ಮಾಡಿವೆ. ಅಸಲಿಗೆ ವಿಚಾರ ಏನಪ್ಪಾ ಅಂದರೆ ಈ ಸಿನಿಮಾಗಳು ಯಾವುದೇ ರೀತಿ ಬಿಗ್ ಬಜೆಟ್ ಸಿನಿಮಾಗಳಲ್ಲ. ಅದರಲ್ಲೂ ಕನ್ನಡದಲ್ಲಿ ತೆರೆಕಂಡ ಗಾಳಿಪಟ2 ಸಿನಿಮಾ ನಿರೀಕ್ಷೆಗೂ ಮೀರಿ ಬಾಕ್ಸ್ ಆಫೀಸ್ ನಲ್ಲಿ ಕಲೆಕ್ಷನ್ ಮಾಡಿ ಧೂಳೆಬ್ಬಿಸಿತು.

ಅದೂ ಕೂಡ ಅಮೀರ್ ಖಾನ್ ಅವರ ಲಾಲ್ ಸಿಂಗ್ ಚಡ್ಡಾ ಸಿನಿಮಾ ರಿಲೀಸ್ ಆಗಿದ್ರು ಕೂಡ ಗಾಳಿಪಟ2. ಸಿನಿಮಾ ಬಾನೆತ್ತರ ಮಟ್ಟಕ್ಕೆ ಹಾರಾಡಿತು. ಗಾಳಿಪಟ2 ಸಿನಿಮಾ ಯೋಗರಾಜ್ ಭಟ್ ಮತ್ತು ಗಣೇಶ್ ಕಾಂಬಿನೇಶನ್ ನಲ್ಲಿ ಮೂಡಿಬಂದ ಸಿನಿಮಾ. ಹಾಗಾಗಿ ಈ ಗಾಳಿಪಟ2 ಚಿತ್ರದ ಮೇಲೆ ಅಪಾರ ನಿರೀಕ್ಷೆ ಹುಟ್ಟಿಸಿತ್ತು. ದಶಕದ ಹಿಂದೆ ಗಾಳಿಪಟ ಪಾರ್ಟ್1 ಸಿನಿಮಾ ಸೂಪರ್ ಹಿಟ್ ಆಗಿ ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ದಾಖಲೆ ನಿರ್ಮಿಸಿತ್ತು. ಹಾಗಾಗಿ ಸಾಮಾನ್ಯವಾಗಿ ಗಾಳಿಪಟ2 ಸಿನಿಮಾ ಬಗ್ಗೆ ಪ್ರೇಕ್ಷಕರಲ್ಲಿ ಭಾರಿ ಕುತೂಹಲ ನಿರೀಕ್ಷೆ ಹುಟ್ಟು ಹಾಕಿತ್ತು. ಅದ್ರಂತೆ ಗಾಳಿಪಟ2 ಸಿನಿಮಾ ಸಿನಿ ಪ್ರೇಕ್ಷಕರಿಂದ ಅಪಾರ ಮೆಚ್ಚುಗೆ ಪಡೆದುಕೊಂಡಿತು. ಈ ಚಿತ್ರ ಕಲೆಕ್ಷನ್ ವಿಚಾರದಲ್ಲಿ ನಿಜಕ್ಕೂ ಕೂಡ ಅಚ್ಚರಿ ಮೂಡಿಸಿತು ಅಂತಾನೇ ಹೇಳ್ಬೋದು. ಗಾಳಿಪಟ2 ಸಿನಿಮಾ ತಯಾರಾಗಿದ್ದು ಕೇವಲ ಹತ್ತು ಕೋಟಿಯಲ್ಲಿ. ಆದ್ರೇ ಈ ಚಿತ್ರ ಒಟ್ಟು ಗಳಿಸಿದ್ದು ನಲವತ್ತೈದು ಕೋಟಿಗೂ ಅಧಿಕ.

ಭಾವನಾತ್ಮಕ ಕಥಾಹಂದರ ಹೊಂದಿರೋ ಗಾಳಿಪಟ2 ಸಿನಿಮಾ ಎಲ್ಲಾ ವರ್ಗದ ಪ್ರೇಕ್ಷಕರ ಮನ ಗೆಲ್ಲುವಲ್ಲಿ ಯಶಸ್ವಿ ಆಯಿತು. ನಿರ್ಮಾಪಕರಾಗಿದ್ದ ರಮೇಶ್ ರೆಡ್ಡಿ ಅವರು ಗಾಳಿಪಟ2 ಸಿನಿಮಾ ಗೆದ್ದ ಖುಷಿಗೆ ಇದೀಗ ಮತ್ತೊಂದಷ್ಟು ಸಿನಿಮಾ ಮಾಡಲು ಮುಂದಾಗಿದ್ದಾರೆ. ಅದ್ರರಂತೆ ತೆಲುಗಿನ ಸೀತಾರಾಮಂ ಸಿನಿಮಾ ಮೂವತ್ತು ಕೋಟಿಯಲ್ಲಿ ತಯಾರಾಗಿ ಬರೋಬ್ಬರಿ 94 ಕೋಟಿ ಕಲೆ ಹಾಕಿತು. ಬಿಂಬಿಸಾರ ಚಿತ್ರ 40 ಕೋಟಿಯಲ್ಲಿ ತಯಾರಾಗಿ 70 ಕೋಟಿ ಗಳಿಕೆ ಮಾಡಿತು. ಕಾರ್ತಿಕೇಯ2 ಸಿನಿಮಾ ಕೂಡ 25 ಕೋಟಿಯಲ್ಲಿ ನಿರ್ಮಾಣವಾಗಿ 120 ಕೋಟಿ ಕಲೆಕ್ಷನ್ ಬಾಚಿತು. ಇನ್ನು ಧನುಷ್ ನಟನೆಯ ತಿರುಚಿತ್ರಾಂಬಲಂ ಚಿತ್ರ ಮೂವತ್ತು ಕೋಟಿಯಲ್ಲಿ ತಯಾರಾಗಿ ಬಾಕ್ಸ್ ಆಫೀಸ್ ನಲ್ಲಿ ಬರೋಬ್ಬರಿ 110 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿ ಭರ್ಜರಿ ಸದ್ದು ಮಾಡಿತು. ಹೀಗೆ ಕನ್ನಡದ ಗಾಳಿಪಟ2 ಸಿನಿಮಾ ಸೇರಿದಂತೆ ಇವೆಲ್ಲ ಸಿನಿಮಾಗಳು ಕೂಡ ಕನಿಷ್ಟ ಬಜೆಟ್ ನಲ್ಲಿ ತಯಾರಾಗಿ 100 ಕೋಟಿ ಕ್ಲಬ್ ಸೇರಿರೋದು ನಿಜಕ್ಕೂ ಕೂಡ ಸಂತಸದ ವಿಚಾರವಾಗಿದೆ.

Leave a Reply

%d bloggers like this: