ನಿನ್ನೆ ಬಿಡುಗಡೆ ಆದ ದಕ್ಷಿಣ ಭಾರತದ ಬಹು ನಿರೀಕ್ಷಿತ ಪೊನ್ನಿಯನ್ ಸೆಲ್ವನ್ ಚಿತ್ರ ಮೊದಲ ದಿನ ಗಳಿಸಿದ್ದೆಷ್ಟು

ಭಾರತೀಯ ಚಿತ್ರರಂಗದ ಬಹು ನಿರೀಕ್ಷಿತ ಐತಿಹಾಸಿಕ ಕಾದಂಬರಿ ಆಧಾರಿತ ಸಿನಿಮಾ ಆಗಿರೋ ಪೊನ್ನಿಯನ್ ಸೆಲ್ವನ್ ಭಾಗ1 ಚಿತ್ರ ಇದೇ ಸೆಪ್ಟೆಂಬರ್ 30ರಂದು ವರ್ಲ್ಢ್ ವೈಡ್ ಪ್ಯಾನ್ ಇಂಡಿಯಾ ಪಂಚಭಾಷೆಗಳಲ್ಲಿ ಅದ್ದೂರಿಯಾಗಿ ರಿಲೀಸ್ ಆಗಿದೆ.ಮಣಿರತ್ನಂ ಅವರ ನಿರ್ದೇಶನದಲ್ಲಿ ಮೂಡಿ ಬಂದ ಈ ದೃಶ್ಯ ಕಾವ್ಯ ಪೊನ್ನಿಯನ್ ಸೆಲ್ವನ್ ಭಾಗ1 ಸಿನಿಮಾ ನೋಡಿದ ಸಿನಿಪ್ರಿಯರು ಚಿತ್ರಕ್ಕೆ ಫುಲ್ ಮಾರ್ಕ್ಸ್ ಕೊಟ್ಟಿದ್ದಾರೆ. ರಿಲೀಸ್ಗೂ ಮುನ್ನವೇ ಪೊನ್ನಿಯನ್ ಸೆಲ್ವನ್ ಚಿತ್ರದ ಟ್ರೇಲರ್ ಸಖತ್ ಕ್ಯೂರಿಯಾಸಿಟಿ ಹುಟ್ಟು ಹಾಕಿತ್ತು. ಇದೀಗ ಪೊನ್ನಿಯನ್ ಸೆಲ್ವನ್ ಭಾಗ1ರ ಸೊಗಸಾದ ಸಂಭಾಷಣೆ, ನಿರೂಪಣೆಯ ಶೈಲಿ, ಖ್ಯಾತ ನಟ ನಟಿಯರು ಪಾತ್ರಕ್ಕೆ ಜೀವ ತುಂಬಿರೋ ನಟನೆ ಕಂಡು ಸಿನಿ ಪ್ರೇಕ್ಷಕರು ಮನ ಸೋತಿದ್ದಾರೆ.

ಕಲ್ಕಿ ಕೃಷ್ಣಮೂರ್ತಿ ಅವರ ಕಾದಂಬರಿಯನ್ನ ಮಣಿರತ್ನಂ ಅವರು ಪೊನ್ನಿಯನ್ ಸೆಲ್ವನ್ ಸಿನಿಮಾ ಮಾಡಿ ಗೆದ್ದಿದ್ದಾರೆ. ಪ್ರಮುಖ ತಾರಾಗಣದಲ್ಲಿ ಚಿಯಾನ್ ವಿಕ್ರಮ, ಕಾರ್ತಿ, ಜಯಂರವಿ, ಐಶ್ವರ್ಯ ರೈ, ತ್ರಿಷಾ, ಐಶ್ವರ್ಯ, ಶೋಭಿತಾ ಧೂಳಿಪಾಲ, ಪ್ರಕಾಶ್ ರಾಜ್ ನಟಿಸಿದ್ದಾರೆ. ಪೊನ್ನಿಯನ್ ಸೆಲ್ವನ್ ಸಿನಿಮಾ ಬರೋಬ್ಬರಿ ಐನೂರು ಕೋಟಿ ವೆಚ್ಚದಲ್ಲಿ ತಯಾರಾಗಿರೋ ಸಿನಿಮಾ. ಚೋಳ ಸಾಮ್ರಾಜ್ಯದ ಅಂತರಿಕ ಮತ್ತು ಬಾಹ್ಯ ಶಕ್ತಿಗಳಿಂದ ಅಪಾಯದಲ್ಲಿ ಇರುತ್ತದೆ. ಆಗ ರಾಜಕುಮಾರ ಆದಿತ ಕರಿಕಾಳನ್, ಅವನ ಕಿರಿಯ ತಮ್ಮ ಅರುಣ್ಮೋಳಿ ವರ್ಮನ್ ಮತ್ತು ಚಕ್ರವರ್ತಿ ಸುಂದರ ಚೋಳರನ್ನ ಸನ್ನಿವೇಶಗಳಿಂದ ಬೇರೆ ಮಾಡಲಾಗುತ್ತದೆ.

ಇಡೀ ಚೋಳ ಸಾಮ್ರಾಜ್ಯವನ್ನ ನಾಶ ಮಾಡಲು ಕರಿಕಾಲನ್ ತನ್ನ ಮಾಜಿ ಪ್ರೇಯಸಿ ನಂದಿನಿಯೊಟ್ಟಿಗೆ ಸಕ್ಸಸ್ ಕಾಣ್ತಾನಾ ಅನ್ನೋದನ್ನ ನಿರ್ದೇಶಕ ಮಣಿರತ್ನಂ ಅವರ ನಿರೂಪಣೆಯಲ್ಲಿ ನೀವು ಥಿಯೇಟರ್ ನಲ್ಲಿ ಈ ದೃಶ್ಯ ಕಾವ್ಯವನ್ನು ಕಣ್ತುಂಬಿಕೊಳ್ಳಬಹುದಾಗಿದೆ. ಪೊನ್ನಿಯನ್ ಸೆಲ್ವನ್ ಚಿತ್ರಕ್ಕೆ ಜಯಮೋಹನ್ ಅವರ ಸಂಭಾಷಣೆ, ರವಿವರ್ಮನ್ ಅವರ ಛಾಯಾಗ್ರಹಣ ಪ್ಲಸ್ ಪಾಯಿಂಟ್ ಆಗಿದೆ ಅಂದರೆ ತಪ್ಪಾಗಲಾರದು. ಅದರ ಜೊತೆಗೆ ಎಆರ್ ರೆಹಮಾನ್ ಅವರ ಸಂಗೀತ ಮೋಡಿ ಮಾಡಿದ್ದು, ಚಿತ್ರದ ಮೇಕಿಂಗ್ ಮತ್ತೊಂದು ಮೈಲೇಜ್ ನೀಡಿದೆ. ಒಟ್ಟಾರೆಯಾಗಿ ಮಣಿರತ್ನಂ ಅವರ ಪೊನ್ನಿಯನ್ ಸೆಲ್ವನ್ ಭಾಗ1 ಸಿನಿಮಾ ಸಿನಿಪ್ರಿಯರಿಗೆ ಇಷ್ಟವಾಗಿದೆ. ವರ್ಲ್ಡ್ ವೈಡ್ ರಿಲೀಸ್ ಆಗಿರೋ ಈ ಚಿತ್ರ ಬಾಕ್ಸ್ ಆಫೀಸ್ ನಲ್ಲಿಯೂ ಕೂಡ ಉತ್ತಮ ಕಲೆಕ್ಷನ್ ಮಾಡುತ್ತಿದೆ ಎಂದು ತಿಳಿದು ಬಂದಿದೆ. ಮೊದಲ ದಿನವೇ ಈ ಚಿತ್ರ 82.3 ಕೋಟಿ ಗಳಿಕೆ ಮಾಡಿ ಅತೀ ಹೆಚ್ಚು ಗಳಿಕೆ ಮಾಡಿದ ತಮಿಳು ಚಿತ್ರ ಎಂಬ ದಾಖಲೆಗೆ ಸಾಕ್ಷಿಯಾಗಿದೆ.