ನಿನ್ ಸೋಪ್ ಸ್ಲೋನಾ ಜಾಹೀರಾತಿನ ಹುಡುಗಿ ಹೇಗಿದ್ದಾಳೆ ನೋಡಿ ಈಗ, ಈಕೆ ಬಗ್ಗೆ ತಿಳಿದರೆ ಶಾಕ್ ಆಗುತ್ತೀರಾ

ಟಿವಿಯನ್ನು ಹೆಚ್ಚಾಗಿ ನೋಡುವವರು ಕಾರ್ಯಕ್ರಮದ ನಡುವೆ ಬರುವ ಜಾಹೀರಾತುಗಳನ್ನು ಸಾಮಾನ್ಯವಾಗಿ ನೋಡಿರುತ್ತಾರೆ.
ಕೆಲ ವರ್ಷಗಳ ನಂತರ ಬಂದ ಲೈಫ್ ಬಾಯ್ ಆಡ್ ಒಂದು ಬಹಳ ಜನಪ್ರಿಯತೆ ಪಡೆದಿತ್ತು. ಶಾಲಾ ಮಕ್ಕಳ ನಡುವೆ ನಡೆಯುವ ಸಂಭಾಷೆಣೆಯಾಗಿತ್ತು ಆ ಆಡ್. ಒಂದು ಹಡುಗ ಬಹಳ ನಿಧಾನವಾಗಿ ಕೈ ತೊಳೆಯುತ್ತಿರುವಾಗ “ಬಂಟಿ ನಿನ್ನ ಸಾಬೂನು ಸ್ಲೋ ನಾ..?” ಎಂದು ಹೇಳುವ ಲೈಫ್ ಬಾಯ್ ಆಡ್ ಅನ್ನು ಬಹುತೇಕ ನೀವೆಲ್ಲರೂ ನೋಡಿರುತ್ತೀರಿ. ಕರೊನಾ ಶುರುವಾದ ಮೇಲಂತೂ ಈ ಆಡ್ ಅನ್ನು ಮೀಮ್ ಆಗಿ ಉಪಯೋಗಿಸಿ ಇನ್ನಷ್ಟು ಜನಪ್ರಿಯತೆ ಪಡೆದಿತ್ತು. 2013 ರಲ್ಲಿ ಅಂದರೆ 7 ವರ್ಷದ ಹಿಂದೆ ಈ ಜಾಹಿರಾತು ಚಿತ್ರೀಕರಣವಾಗಿತ್ತು. ಬಂಟಿಯನ್ನು ತಮಾಷೆ ಮಾಡಿದ್ದ ಹುಡುಗಿ 7 ವರ್ಷದ ನಂತರ ಈ ಹುಡುಗಿ ನಂತರ ಹೇಗಿದ್ದಾಳೆ ಗೊತ್ತಾ ? 7 ವರ್ಷದ ಸಮಯದಲ್ಲಿ ಬಹಳ ಬದಲಾಗಿದ್ದಳೆ ಆ ಜಾಹೀರಾತಿನ ಹುಡುಗಿ.

ಈಗ ಆಕೆ ಶಾಲಾ ಬಾಲಕಿಯಲ್ಲ, 20 ವರ್ಷದ ಬೆಡಗಿ. ಈಕೆಗೆ ಸಾಮಾಜಿಕ ಜಾಲತಾಣಗಳಲ್ಲಿ 1ಕೋಟಿಗೂ ಹೆಚ್ಚು ಅಭಿಮಾನಿಗಳಿದ್ದಾರೆ. ಈಕೆಯ ಹೆಸರು ಅವನೀತ್ ಕೌರ್. 2002 ರಲ್ಲಿ ಜಲಂಧರ್ ನಲ್ಲಿ ಜನಿಸಿದರು. ಅತಿಚಿಕ್ಕ ವಯಸ್ಸಿನಲ್ಲೇ ಲಿಟ್ಲ್ ಮಾಸ್ಟರ್ಸ್ ಸೇರಿದಂತೆ ಕೆಲವು ಡ್ಯಾನ್ಸ್ ರಿಯಾಲಿಟಿ ಶೋ ಗಳಲ್ಲಿ ಭಾಗವಹಿಸಿದ್ದರು. ಕೆಲವು ಹಿಂದಿ ಸಿನಿಮಾಗಳಲ್ಲಿ ಸಹ ಅವನೀತ್ ಕೌರ್ ನಟಿಸಿದ್ದಾರೆ.  ಇದೀಗ ಅವನೀತ್ ಕೌರ್ ಸಿನಿಮಾ ಹೀರೋಯಿನ್  ಆಗಿದ್ದಾರೆ. ಈಕೆ ನಟಿಸುತ್ತಿರುವ ಸಿನಿಮಾ ಹೆಸರು ಟಿಕು ವೆಡ್ಸ್ ಷೇರು. ಈ ಸಿನಿಮಾದ ಫಸ್ಟ್ ಲುಕ್ ಇತ್ತೀಚಿಗೆ ಬಿಡುಗಡೆಯಾಗಿದ್ದು, ಅವನೀತ್ ಟಿಕು ಪಾತ್ರದಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾವನ್ನು ನಟಿ ಕಂಗನಾ ರಣಾವತ್ ನಿರ್ಮಾಣ ಮಾಡುತ್ತಿದ್ದು, ನವಾಜುದ್ದೀನ್ ಸಿದ್ದಿಕಿ ಅವರು ನಾಯಕನಾಗಿ ನಟಿಸಿದ್ದಾರೆ.

ಈ ಪುಟ್ಟ ನಟಿ ಈಗ ದೊಡ್ಡದಾದ ಕೆಲಸ ಒಂದನ್ನೇ ಮಾಡಿದ್ದಾಳೆ. ಅದೇನು ಅಂದ್ರೆ, ಬರೋಬ್ಬರಿ 1 ಕೋಟಿ ಬೆಲೆ ಬಾಳುವ ಕಾರ್ ಖರೀದಿ ಮಾಡಿದ್ದಾರೆ ನಟಿ ಅವನೀತ್ ಕೌರ್. 83 ಲಕ್ಷ ಬೆಲೆ ಬಾಳುವ ರೇಂಜ್ ರೋವರ್ ಕಾರ್ ಖರೀದಿ ಮಾಡಿದ್ದಾರೆ, ಇದರ ಆನ್ ರೋಡ್ ಬೆಲೆ ಸುಮಾರು 1 ಕೋಟಿ ರೂಪಾಯಿ ಆಗಿದೆ. ಈ ಸಂತೋಷದ ವಿಚಾರವನ್ನು ನಟಿ ಅವನೀತ್ ಕೌರ್ ಇನ್ಸ್ಟಾಗ್ರಾಮ್ ಮೂಲಕ ಅಭಿಮಾನಿಗಳ ಜೊತೆ ಶೇರ್ ಮಾಡಿಕೊಂಡಿದ್ದಾರೆ. 20ವರ್ಷಕ್ಕೆ ಇಷ್ಟು ದುಬಾರಿ ಕಾರ್ ಖರೀದಿ ಮಾಡಿರುವುದು ನಿಜಕ್ಕುಒಳ್ಳೆಯ ವಿಷಯ ಆಗಿದೆ.

Leave a Reply

%d bloggers like this: