ನಿನ್ ಸೋಪ್ ಸ್ಲೋನಾ ಜಾಹೀರಾತಿನ ಹುಡುಗಿ ಹೇಗಿದ್ದಾಳೆ ನೋಡಿ ಈಗ

ಟಿವಿ ಕಾರ್ಯಕ್ರಮಗಳ ಮಧ್ಯೆ ನುಸುಳುವ ಅನೇಕ ಜಾಹೀರಾತುಗಳ ನಡುವೆ ಕೆಲವೇ ಕೆಲವು ಪ್ರೇಕ್ಷಕರಿಗೆ ಮೆಚ್ಚುಗೆಯಾಗಿ ಪ್ರಭಾವಿಯಾಗಿ ಆ ಪ್ರಾಡಕ್ಟಿನ ವ್ಯಾಪಾರವನ್ನು ಹೆಚ್ಚಿಸಲು ಗೆಲ್ಲುತ್ತವೆ.ಅದರಲ್ಲಿ ಲೈಫ್ ಬಾಯ್ ಸೋಪ್ ಜಾಹೀರಾತು ಒಂದು.ಆಕಾಶವಾಣಿ ರೇಡಿಯೋ ಕಾಲದಿಂದ ಹಿಡಿದು ಎಲ್‌ಇಡಿ ಟಿವಿಯಲ್ಲೂ ಲೈಫ್ ಬಾಯ್ ಭಾರೀ ಸದ್ದು ಮಾಡಿದೆ.ಈ ಜಾಹೀರಾತಿನ ಮೂಲಕ ಸಿಕ್ಕಾಪಟ್ಟೆ ಸೋಪುಗಳ ನಡುವೆಯೂ ಲೈಫ್ ಬಾಯ್ ಬೇಡಿಕೆ ಹೆಚ್ಚಿಸಿಕೊಂಡಿದೆ.ಹೌದು,ಸಖತ್ ಮುದ್ದಾದ ಮಕ್ಕಳು ನಟಿಸಿದ್ದ ಜಾಹೀರಾತು ಅದು.

ಒಬ್ಬ ಶಾಲೆಯ ಹುಡುಗ ಕೊಳೆಯೆಲ್ಲ ಸಂಪೂರ್ಣವಾಗಿ ಹೋಗಲಿ ಎಂದು ತುಂಬಾ ಸಮಯ ಕೈತೊಳಿಯುತ್ತಿರುತ್ತಾನೆ ಅದನ್ನು ನೋಡಿದ ಆ ಹುಡುಗನ ಸ್ನೇಹಿತೆ ಏ ಬಂಟಿ ನಿನ್ ಸೋಪ್ ಸ್ಲೋನಾ ಅಂತ ರೇಗಿಸಿ ನಗುವ ಜಾಹೀರಾತು ‌ಭಾರೀ ಜನಪ್ರಿಯವಾಗಿತ್ತು,ಅದರ ಯಶಸ್ಸು ಲೈಫ್ ಬಾಯ್ ಸೋಪಿನ ವ್ಯಾಪಾರದ ಮೇಲೆ ದೊಡ್ಡ ಪ್ರಮಾಣದ ಪ್ರಭಾವ ಉಂಟುಮಾಡಿತ್ತು.ಅದಿರಲಿ ಆ ಜಾಹೀರಾತಿನ ಪ್ರಮುಖ ಆಕರ್ಷಣೆಯಾಗಿದ್ದ ಆ ಹುಡುಗಿ ಈಗ ಮಾಡೆಲ್.ಹೌದು, ಆಕೆಯ ಹೆಸರು ಅವನೀತ್ ಕೌರ್.

ಏಳು ವರ್ಷದ ಹಿಂದೆ ಜನಪ್ರಿಯ ಆದ ಜಾಹೀರಾತಿನ ಹುಡುಗಿ ಈಗ ಹದಿನೆಂಟು ವರ್ಷದ ಮಾಡೆಲ್‌.ಅವನೀತ್ ಆಗ ಲಿಟ್ಲ್‌ ಮಾಸ್ಟರ್ಸ್ ಸೇರಿದಂತೆ ಹಲವಾರು ಡ್ಯಾನ್ಸ್ ರಿಯಾಲಿಟಿ ಶೋಗಳಲ್ಲಿ ಕೂಡ ಮಿಂಚಿದ್ದವಳು.ಸಿನಿಮಾದಲ್ಲಿ ನಟಿಸುವುದರ ಜೊತೆಗೆ ವ್ಯಾಸಂಗದ ಕಡೆಗೂ ಗಮನ ಕೊಟ್ಟಿರುವ ಅವನೀತ್ ಕೌರ್ ಸಾಮಾಜಿಕ ಜಾಲತಾಣದಲ್ಲಿ ತನ್ನದೇ ಆದ ಕೋಟ್ಯಾಂತರ ಹಿಂಬಾಲಕರನ್ನು ಪಡೆದಿದ್ದಾಳೆ.ಯೂಟ್ಯೂಬ್ ಚಾನಲ್ ಕೂಡ ಮಾಡಿಕೊಂಡಿದ್ದಾಳೆ.ಅವನೀತ್ ಕೌರ್ ಮುಂದಿನ ವೃತ್ತಿ ಜೀವನಕ್ಕೆ ಶುಭವಾಗಲಿ ಎಂದು ಹಾರೈಸೋಣ.

Leave a Reply

%d bloggers like this: