ನಿಮ್ಮ ಜಮೀನಿನ ಪಹಣಿ ಅಜ್ಜ ಅಥವಾ ತಂದೆಯ ಹೆಸರಿನಲ್ಲಿ ಇದ್ರೆ ನಿಮ್ಮ ಹೆಸರಿಗೆ ಮಾಡಿಸೋದು ಹೇಗೆ ಗೊತ್ತಾ?ಇಲ್ಲಿದೆ ಸಂಪೂರ್ಣ ಮಾಹಿತಿ

ದೇಶದ ಬೆನ್ನೆಲುಬು ರೈತ. ಭಾರತದಲ್ಲಿ ಶೇಕಡಾ 70 ರಷ್ಟು ಕೃಷಿಯನ್ನೇ ನಂಬಿ ಬದುಕು ನಡೆಸುತ್ತಿದ್ದಾರೆ ಎಂದು ವರದಿಯಲ್ಲಿ ಹೇಳಿದರು ಕೂಡ ರೈತನ ಬದುಕು ಅಂದುಕೊಂಡಷ್ಟು ಸುಲಭವಲ್ಲ. ರೈತನಿಗೆ ಕೇವಲ ಬೆಳೆ ಕೈಗೆ ಬರದೇ ಮಾತ್ರ ನಷ್ಟ ಅನುಭವಿಸುತ್ತಿಲ್ಲ,ಸಣ್ಣ ಪುಟ್ಟ ದಾಖಲೆಗಳನ್ನು ಪಡೆಯುವುದಕ್ಕಾಗಿ ಸರ್ಕಾರಿ ಇಲಾಖೆಗಳಿಗೆ ಅಲೆದು ಅಲೆದು,ನಿರ್ಲಕ್ಷ್ಯ ಅಧಿಕಾರಿಗಳ ಕಿರುಕುಳದಿಂದ ಅನೇಕ ರೈತರು ಸಂಕಷ್ಟ ಅನುಭವಿಸುತ್ತಿದ್ದಾರೆ. ಅದರಲ್ಲಿಯೂ ಪೂರ್ವಿಕರ ಜಮೀನಿಗೆ ಸಂಬಂಧಪಟ್ಟಂತಹ ಪಹಣೆ,ಖಾತೆ ಬದಲಾವಣೆಗೆ ದಿನ ನಿತ್ಯ ನೂರಾರು ರೈತರು ತಾಲ್ಲೂಕು ಕಛೇರಿಗಳಲ್ಲಿ ಸರತಿ ಸಾಲಿನಲ್ಲಿ ಸಾಲುಗಟ್ಟಿ ನಿಂತಿರುತ್ತಾರೆ.ಇಂದಿಗೂ ಕೂಡ ಹಳ್ಳಿಗಳಲ್ಲಿ ಅನೇಕ ಅನಕ್ಷರಸ್ಥ ರೈತಾಪಿಗಳು ಒದ್ದಾಡುವುದು ಹಕ್ಕು ಪತ್ರಗಳಿಗಾಗಿ,ಭೂಮಿ ಪಹಣೆಗಾಗಿ.ತಮ್ಮ ಪೂರ್ವಿಕರ ಜಮೀನಿನಲ್ಲಿ ಅನುಭವ ಹೊಂದಿದ್ದರು ಕೂಡ ಅವರಿಗೆ ತಮ್ಮ ತಾತ ಮುತ್ತಾತ ಅವರ ಹೆಸರಿನಿಂದ ತಮ್ಮ ಹೆಸರಿಗೆ ಖಾತೆ ಆಗದೇ ತೊಂದರೆ ಅನುಭವಿಸುತ್ತಿರುತ್ತಾರೆ. ಪೂರ್ವಜರ ಹೆಸರಿನಿಂದ ಖಾತೆ ಬದಲಾವಣೆ ಮಾಡಿಕೊಳ್ಳಲು ಪ್ರಮುಖವಾಗಿ ಬೇಕಾಗಿರುವುದು ಅವರ ಮರಣ ಪ್ರಮಾಣ ಪತ್ರ.

ಸಾಮಾನ್ಯವಾಗಿ ಸರ್ಕಾರ ರೈತರ ಅನುಕೂಲಕ್ಕಾಗಿ ಎಲ್ಲಾ ರೀತಿಯ ಸೌಲಭ್ಯ ಸಹಕಾರ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿರುತ್ತದೆ. ಪೂರ್ವಜರ ಮರಣ ಪ್ರಮಾಣ ಪತ್ರಗಳನ್ನು ಪಡೆಯುವುದಕ್ಕೆ ಸರ್ಕಾರ ಕಾನೂನು ಸಲಹೆಗಾರರನ್ನು ಉಚಿತವಾಗಿ ನೇಮಿಸಲಾಗಿರುತ್ತದೆ.ರಾಜ್ಯದಲ್ಲಿ ಇದುವರೆಗೆ ತಮ್ಮ ಪತಿ ಅಥವಾ ಪೂರ್ವಿಕರ ಹೆಸರಿನಿಂದ ತಮ್ಮ ಹೆಸರಿಗೆ ಖಾತೆ ಬದಲಾಯಿಸಿಕೊಳ್ಳುವ ಪೌತಿ ಖಾತೆ ಮಾಡಿಸಿಕೊಳ್ಳಲು ಬರೋಬ್ಬರಿ ಎರಡು ಲಕ್ಷದ ಎಪ್ಪತ್ತು ಸಾವಿರ ಅರ್ಜಿಗಳು ಬಂದಿವೆ ಎಂದು ಇಲಾಖೆಯ ಮಾಹಿತಿಯಲ್ಲಿದೆ.ನಿಯಮದ ಅನುಸಾರ ಗ್ರಾಮದಲ್ಲಿ ಯಾವುದೇ ವ್ಯಕ್ತಿ ಸತ್ತ ನಂತರ ಇಪ್ಪತ್ತೆಂಟು ದಿನಗಳ ಒಳಗಾಗಿ ಅಲ್ಲಿನ ಗ್ರಾಮ ಲೆಕ್ಕಿಗರೇ ಮರಣ ಪ್ರಮಾಣ ಪತ್ರವನ್ನು ನೀಡಬೇಕಾಗಿರುತ್ತದೆ.ಒಂದು ವೇಳೆ ವ್ಯಕ್ತಿಯು ನಿಧನರಾಗಿ ಒಂದು ವರ್ಷದ ಅವಧಿ ಒಳಗಿದ್ದರೆ ಆಯಾ ತಾಲ್ಲೂಕಿನ ತಹಶೀಲ್ದಾರ್ ಅವರು ಮರಣ ಪ್ರಮಾಣ ಪತ್ರವನ್ನು ನೀಡುವ ಅವಕಾಶ ಇರುತ್ತದೆ.

ಒಂದು ವರ್ಷ ಮೇಲ್ಪಟ್ಟ ಪ್ರಕರಣಗಳಾಗಿದ್ದರೆ ಸ್ಥಳೀಯ ಜೆಎಂಎಫ್ ಕೋರ್ಟ್ ಗಳಲ್ಲಿ ಕೇಸ್ ದಾಖಲಾಗಿಸಿ ಈ ಮೂಲಕ ಪೌತಿ ಖಾತೆ ಮಾಡಿಸಿಕೊಳ್ಳುವ ಅವಕಾಶ ಇರುತ್ತದೆ.ಇದೀಗ ರಾಜ್ಯ ಸರ್ಕಾರದಿಂದ ರೈತರಿಗೆ ಬಂಪರ್ ಆಫರ್ ಒಂದನ್ನು ನೀಡಿದೆ.ರಾಜ್ಯದ ಯಾವುದೇ ರೈತರು ತಮ್ಮ ಪಹಣೆಯಲ್ಲಿ ಪೂರ್ವಜರ ಹೆಸರಿದ್ದು ತಮ್ಮ ಸ್ವಾನುಭವ ಹೊಂದಿರುವ ರೈತರು ತಮ್ಮ ಹೆಸರಿಗೆ ನೇರವಾಗಿ ಖಾತೆ ಮಾಡಿಕೊಳ್ಳಲು ಅವಕಾಶ ಮಾಡಿಕೊಡುತ್ತಿದೆ .ಸಕಾಲ ಯೋಜನೆಯಡಿಯಲ್ಲಿ ರೈತರಿಗೆ ಪೌತಿ ಖಾತೆಯನ್ನು ಇಪ್ಪತ್ತೊಂದು ದಿನಗಳ ಒಳಗೆ ಮಾಡಿಕೊಡಬೇಕು ಎಂಬ ನಿಯಮವಿದೆ.ಆಯಾಯ ಹೋಬಳಿ ಮಟ್ಟದಲ್ಲಿರುವ ನಾಡ ಕಛೇರಿಗಳಲ್ಲಿ ಅರ್ಜಿ ಹಾಕಿ ಪೌತಿ ಖಾತೆ ಮಾಡಿಸಿಕೊಳ್ಳಬಹುದಾಗಿದೆ.

Leave a Reply

%d bloggers like this: