ನಿಮ್ಮ ದೇಹದಲ್ಲಿ ಎಷ್ಟು ಮಚ್ಚೆಗಳಿವೆ ಎಂದು ಕೇಳಿದ ಪತ್ರಕರ್ತಾ! ನಟಿ ನೇಹಾ ಶೆಟ್ಟಿ ಕೊಟ್ಟ ಉತ್ತರವೇನು ಗೊತ್ತಾ? ಉತ್ತರ ಕೇಳಿ ಶಾಕ್ ಆದ ಪತ್ರಕರ್ತ

ಕನ್ನಡದ ನಟಿಗೆ ಮುಜುಗರ ಆಗುವಂತಹ ಪ್ರಶ್ನೆ ಕೇಳಿದ ಪರಭಾಷಾ ಸಿನಿಮಾ ಪತ್ರಕರ್ತ…! ಕನ್ನಡದ ಅನೇಕ ನಟ-ನಟಿಯರು ಇತ್ತೀಚಿನ ದಿನ ಮಾನಗಳಲ್ಲಿ ಪರಭಾಷಾ ಸಿನಿಮಾ ಮತ್ತು ಕಿರುತೆರೆ ಧಾರಾವಾಹಿಗಳಲ್ಲಿ ಮಿಂಚುತ್ತಿದ್ದಾರೆ. ಅದೇ ರೀತಿಯಾಗಿ ಕನ್ನಡದ ನಟಿ ಕಮ್ ರೂಪದರ್ಶಿ ನೇಹಾ ಶೆಟ್ಟಿ ಅವರು ಇದೀಗ ತೆಲುಗು ಸಿನಿ ರಂಗದಲ್ಲಿ ಹೆಜ್ಜೆ ಇಟ್ಟಿದ್ದಾರೆ. ಹೌದು ಸ್ಯಾಂಡಲ್ ವುಡ್ ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ ಮುಂಗಾರು ಮಳೆ 2 ಸಿನಿಮಾದಲ್ಲಿ ನಾಯಕಿಯಾಗಿ ನಟಿಸಿದ ನೇಹಾ ಶೆಟ್ಟಿ ತನ್ನ ನಟನೆಯ ಮೂಲಕ ಕನ್ನಡ ಸಿನಿ ರಸಿಕರ ಮನ ಗೆದ್ದಿದ್ದಾರೆ. ಇನ್ನು ನಟಿ ನೇಹಾ ಶೆಟ್ಟಿ ಅವರಿಗೆ ಪರಭಾಷಾ ಸಿನಿಮಾ ಪತ್ರಕರ್ತನಿಂದ ಎದುರಾದ ಮುಜುಗರದ ಪ್ರಶ್ನೆಯ ಬಗ್ಗೆ ತಿಳಿದುಕೊಳ್ಳುವ ಮುನ್ನ ನಟಿ ನೇಹಾ ಶೆಟ್ಟಿ ಅವರ ಬಗ್ಗೆ ತಿಳಿಯುವುದಾದರೆ ಇವರು ಕರ್ನಾಟಕದ ಮಂಗಳೂರಿನವರು. 2014 ರಲ್ಲಿ ನೇಹಾ ಶೆಟ್ಟಿ ಅವರು ಮಿಸ್ ಮಂಗಳೂರು ಆಗಿ ವಿಜೇತರಾಗುತ್ತಾರೆ. ಜೊತೆಗೆ 2016 ರಲ್ಲಿ ಮಿಸ್ ಸೌಥ್ ರೂಪದರ್ಶಿ ಸ್ಪರ್ಧೆಯಲ್ಲಿ ವಿಜೇತರಾಗದಿದ್ದರು ಕೂಡ ರನ್ನರ್ ಅಪ್ ಆಗುತ್ತಾರೆ.

ಹೀಗೆ ಮಾಡೆಲಿಂಗ್ ಕ್ಷೇತ್ರದಲ್ಲಿ ಮಿಂಚುತ್ತಿದ್ದ ನೇಹಾ ಶೆಟ್ಟಿ ಅವರಿಗೆ ಕನ್ನಡದ ಸ್ಟಾರ್ ನಟ ಗಣೇಶ್ ಅವರೊಟ್ಟಿಗೆ ಅಭಿನಯಿಸುವ ಅವಕಾಶ ಸಿಗುತ್ತದೆ. ಖ್ಯಾತ ನಿರ್ದೇಶಕ ಶಶಾಂಕ್ ನಿರ್ದೇಶನದಲ್ಲಿ ಮೂಡಿಬಂದ ಮುಂಗಾರು ಮಳೆ 2 ಚಿತ್ರದಲ್ಲಿ ಗಣೇಶ್ ಅವರೊಟ್ಟಿಗೆ ಅಭಿನಯಿಸುತ್ತಾರೆ. ಈ ಚಿತ್ರ ತಕ್ಕ ಮಟ್ಟಿಗೆ ನಟಿ ನೇಹಾ ಶೆಟ್ಟಿ ಅವರಿಗೆ ಹೆಸರು ತಂದು ಕೊಡುತ್ತದೆ. ನಟಿ ನೇಹಾ ಶೆಟ್ಟಿ ಅವರಿಗೆ ಈ ಮುಂಗಾರು ಮಳೆ 2 ಸಿನಿಮಾ ಯಶಸ್ಸಿನ ನಂತರವೂ ಕೂಡ ಅವರಿಗೆ ಹೇಳಿಕೊಳ್ಳುವಂತಹ ಅವಕಾಶಗಳು ಸಿಗುವುದಿಲ್ಲ. ತದ ನಂತರ ರ್ಯಾಪರ್ ಚಂದನ್ ಶೆಟ್ಟಿ ಅವರ ಚಾಕ್ಲೇಟ್ ಗರ್ಲ್ ಎಂಬ ಆಲ್ಬಂ ಸಾಂಗ್ ನಲ್ಲಿ ಕಾಣಿಸಿಕೊಳ್ಳುತ್ತಾರೆ. ಈ ಚಾಕ್ಲೇಟ್ ಗರ್ಲ್ ಸಾಂಗ್ ಯೂ ಟ್ಯೂಬ್ ನಲ್ಲಿ ಮಿಲಿಯನ್ ಗಟ್ಟಲೇ ವೀಕ್ಷಣೆ ಪಡೆದು ಅಪಾರ ಜನಪ್ರಿಯತೆ ಪಡೆದುಕೊಳ್ಳುತ್ತದೆ. ಆದರು ಕೂಡ ಕನ್ನಡ ಸಿನಿಮಾಗಳಲ್ಲಿ ಅವಕಾಶದ ಬಾಗಿಲು ತೆರೆಯುವುದಿಲ್ಲ. ಇದೀಗ ನಟಿ ನೇಹಾ ಶೆಟ್ಟಿ ತೆಲುಗಿನ ಡಿ.ಜೆ.ತಿಲ್ಲು ಎಂಬ ಚಿತ್ರದಲ್ಲಿ ನಟಿಸಿದ್ದಾರೆ.

ಈ ಚಿತ್ರದ ಟ್ರೇಲರ್ ಲಾಂಚ್ ಕಾರ್ಯಕ್ರಮದಲ್ಲಿ ನೇಹಾ ಶೆಟ್ಟಿ ಭಾಗವಹಿಸಿರುತ್ತಾರೆ. ಇದೇ ಸಂಧರ್ಭ ಹೀರೋ ಮತ್ತು ಹೀರೋಯಿನ್ ತಮ್ಮ ತಮ್ಮ ಪಾತ್ರಗಳ, ಸಿನಿಮಾ ಚಿತ್ರೀಕರಣ ಸಂಧರ್ಭದ ಒಂದಷ್ಟು ಅನುಭವಗಳನ್ನು ಹಂಚಿಕೊಂಡಿರುತ್ತಾರೆ. ಇದೇ ಮಾತುಕತೆಯ ಆಧಾರದ ಮೇಲೆ ಪತ್ರಕರ್ತರೊಬ್ಬರು ನಟಿ ನೇಹಾಶೆಟ್ಟಿಗೆ ನಿಮ್ಮ ಬಾಡಿಯಲ್ಲಿ ಎಷ್ಟು ಮಚ್ಚೆಗಳಿವೆ ಎಂದು ತಿಳಿಸಿದ್ದಾರೆ. ಇದಕ್ಕೆ ನಟ ನಕ್ಕು ಸುಮ್ಮನಾದರು. ಆದರೆ ನಟಿ ನೇಹಾ ಶೆಟ್ಟಿ ಅವರಿಗೆ ಕೊಂಚ ಮುಜುಗರ ಉಂಟು ಮಾಡಿತು. ಇದನ್ನ ಕಾರ್ಯಕ್ರಮದಲ್ಲಿ ತೋರಿಸಿಕೊಳ್ಳದೆ, ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಪತ್ರಕರ್ತ ಕೇಳಿದ ಆ ಪ್ರಶ್ನೆ ನಿಜಕ್ಕೂ ಕೂಡ ದುರದೃಷ್ಟವಾಗಿತ್ತು. ಆತ ತನ್ನ ಜೊತೆಯಲ್ಲಿ ಕೆಲಸ ಮಾಡುವ ಮತ್ತು ಮನೆಯಲ್ಲಿ ಇರುವ ಹೆಣ್ಣು ಮಕ್ಕಳ ಬಗ್ಗೆ ಯಾವ ಅಭಿಪ್ರಾಯ ಎಷ್ಟು ಗೌರವ ಹೊಂದಿದ್ದಾನೆ ಎಂಬುದು ಅವರ ಪ್ರಶ್ನೆಯಿಂದ ಅವರ ವ್ಯಕ್ತಿತ್ವ ತಿಳಿಸಿದೆ ಎಂದು ಮನನೊಂದು ಆ ಪತ್ರಕರ್ತನ ಪ್ರಶ್ನೆಗೆ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.

Leave a Reply

%d bloggers like this: