ನಿಮಗಿದು ಗೊತ್ತಾ? ಭಾರತದ ಲೈಸೆನ್ಸ್ ಇದ್ರೆ ಸಾಕು ಈ ಎಲ್ಲ ದೇಶಗಳಲ್ಲಿ ಧೈರ್ಯವಾಗಿ ವಾಹನ ಓಡಿಸಬಹುದು

ಯಾವುದೇ ಒಬ್ಬ ವ್ಯಕ್ತಿ ದ್ವಿಚಕ್ರ,ನಾಲ್ಕು ಚಕ್ರ ಅಥವಾ ಇನ್ಯಾವುದೇ ಬೃಹತ್ ವಾಹನಗಳನ್ನು ಚಲಾಯಿಸಬೇಕಾದರೆ ಅದಕ್ಕೆ ಕಡ್ಡಾಯವಾಗಿ ವಾಹನ ಚಾಲನಾ ಪರವಾನಿಗೆಯನ್ನು ಹೊಂದಿರಲೇಬೇಕಾಗುತ್ತದೆ.ಅಂತೆಯೇ ಪ್ರತಿಯೊಂದು ದೇಶದಲ್ಲಿಯೂ ಕೂಡ ಅವರದೇ ಆದಂತಹ ಸಂಚಾರಿ ನಿಯಮಗಳನ್ನು ಪಾಲಿಸಬೇಕಾಗಿರುತ್ತದೆ.ಆ ನಿಯಮಗಳಂತೆ ಚಾಲನಾ ಪರವಾನಿಗೆಯನ್ನು ಹೊಂದಿರಬೇಕಾಗಿರುತ್ತದೆ.ಆ ಚಾಲನಾ ಪರವಾನಿಗೆ ಗರಿಷ್ಟ ಇಂತಿಷ್ಟು ವರ್ಷಗಳ ಕಾಲ ಮಾನ್ಯತೆಯ ಅವಧಿಯನ್ನು ಹೊಂದಿರುತ್ತದೆ. ಅಂತೆಯೇ ವಿವಿಧ ದೇಶಗಳಲ್ಲಿಯೂ ಕೂಡ ವಾಹನಾ ಚಾಲನಾ ಪರವಾನಿಗೆಯನ್ನು ನೀಡಿರುತ್ತಾರೆ.ಆದರೆ ನಮ್ಮ ಭಾರತದಲ್ಲಿ ನೀಡುವಂತಹ ಡ್ರೈವಿಂಗ್ ಲೈಸೆನ್ಸ್ ವಿಶೇಷವಾದ ಅವಕಾಶವನ್ನು ಹೊಂದಿರುತ್ತದೆ.ಏಕೆಂದರೆ ಭಾರತದಲ್ಲಿ ಪ್ರಾದೇಶಿಕ ರಸ್ತೆ ಸಾರಿಗೆ ಇಲಾಖೆ ನೀಡುವ ಚಾಲನಾ ಪರವಾನಿಗೆ ಯನ್ನು ಬಳಸಿ ಹೊರ ದೇಶದಲ್ಲಿಯೂ ಕೂಡ ವಾಹನಗಳನ್ನು ಚಲಾಯಿಸಬಹುದಾಗಿರುತ್ತದೆ.

ಭಾರತದಲ್ಲಿ ಸಾಮಾನ್ಯವಾಗಿ ಎಡ ಭಾಗದಲ್ಲಿ ವಾಹನ ಚಾಲನೆ ಮಾಡುತ್ತೇವೆ.ಇದೇ ರೀತಿಯಾಗಿ ಆಸ್ಟ್ರೇಲಿಯಾ ದೇಶದಲ್ಲಿಯೂ ಕೂಡ ಎಡ ಭಾಗದಲ್ಲಿಯೇ ವಾಹನ ಚಲಾಯಿಸುವ ರೂಢಿಯಿದೆ.ಆದರೆ ಅಮೇರಿಕಾದಲ್ಲಿ ರಸ್ತೆಯ ಬಲಭಾಗಕ್ಕೆ ವಾಹನ ಚಲಾಯಿಸಬೇಕಾಗಿರುತ್ತದೆ.ಇಲ್ಲಿ ಭಾರತದಲ್ಲಿ ಪಡೆದ ಲೈಸೆನ್ಸ್ ಇಂಗ್ಲೀಷ್ ಭಾಷೆಯಲ್ಲಿ ಇದ್ದರೆ ಯಾವುದೇ ಅಡೆತಡೆಯಿಲ್ಲದೆ ನೀವು ವಾಹನ ಚಾಲನೆ ಮಾಡಬಹುದಾಗಿರುತ್ತದೆ. ಕ್ವೀನ್ಸ್ ಲ್ಯಾಂಡ್,ಸೌತ್ ಆಸ್ಟ್ರೇಲಿಯಾ ಸೇರಿದಂತೆ ಇತರೆ ದೇಶಗಳಲ್ಲಿ ಮೂರು ತಿಂಗಳ ಅವಧಿಯವರೆಗೆ ಯಾವುದೇ ರೀತಿಯ ವಾಹನಗಳನ್ನು ಚಾಲನೆ ಮಾಡಬಹುದಾಗಿರುತ್ತದೆ.ಇನ್ನು ಅಮೇರಿಕಾದಲ್ಲಿ ಭಾರತದಲ್ಲಿ ಪಡೆದ ಇಂಗ್ಲೀಷ್ ಭಾಷೆಯಲ್ಲಿ ಮುದ್ರಿತವಾದ ಡ್ರೈವಿಂಗ್ ಲೈಸೆನ್ಸ್ ಹೊಂದಿದ್ದರೆ ಒಂದು ವರ್ಷಗಳ ಕಾಲ ಯಾವುದೇ ರೀತಿಯಾದ ವಾಹನಗಳನ್ನು ಚಲಾಯಿಸಬಹುದಾಗಿದೆ.

ಒಂದು ವೇಳೆ ಡ್ರೈವಿಂಗ್ ಲೈಸೆನ್ಸ್ ನಲ್ಲಿ ಇಂಗ್ಲೀಷ್ ಭಾಷೆ ಮುದ್ರಿತವಾಗದ್ದಿದ್ದರೆ ಅಂತಹ ವ್ಯಕ್ತಿಗಳು ಆರ್‌.ಟಿ.ಓ ದಲ್ಲಿ ಅಂತರಾಷ್ಟ್ರೀಯ ವಾಹನ ಚಾಲನಾ ಪರವಾನಿಗೆ ಪರ್ಮಿಟ್ ಫಾರ್ಮ್ |-94 ನಕಲನ್ನ ನಿಮ್ಮ ಬಳಿ ಇರಿಸಿಕೊಳ್ಳಬೇಕಾಗಿರುತ್ತದೆ. ಭಾರತೀಯ ನಾಗರೀಕರಾಗಿದ್ದು 21.ವರ್ಷ ಮೇಲ್ಪಟ್ಟಿದ್ದರೆ ಈ ವ್ಯಕ್ತಿಗಳು ತಮ್ಮ ಡ್ರೈವಿಂಗ್ ಲೈಸೆನ್ಸ್ ಬಳಸಿ ಹೊರ ದೇಶಗಳಲ್ಲಿ ವಾಹನಗಳನ್ನು ಚಲಾಯಿಸಬಹುದಾಕಗಿರುತ್ತದೆ. ಈ ನಮ್ಮ ಲೇಖನ ನಿಮಗೆ ಇಷ್ಟವಾದರೆ ಶೇರ್ ಮಾಡಿ ಅತ್ತು ಲೈಕ್ ಮಾಡಿ. ಮತ್ತಷ್ಟು ಹೊಸ ಹೊಸ ಸುದ್ದಿಗಳಿಗಾಗಿ ನಮ್ಮ ಪೇಜ್ ನ್ನು ತಪ್ಪದೆ ಲೈಕ್ ಮಾಡಿ.

Leave a Reply

%d bloggers like this: