ನಿಲ್ಲುತ್ತಿಲ್ಲ ರಶ್ಮಿಕಾ ಅವರಿಗೆ ಬೇಡಿಕೆ, ದಿಗ್ಗಜ ಅಮಿತಾಬ್ ಬಚ್ಚನ್ ಅವರ ಹೊಸ ಚಿತ್ರದಲ್ಲಿ ರಶ್ಮಿಕಾ ಅವರು, ಬಿಡುಗಡೆ ದಿನಾಂಕ ಘೋಷಣೆ

ಸದ್ಯಕ್ಕೆ ನಟಿ ರಶ್ಮಿಕಾ ಮಂದಣ್ಣ ಸೌತ್ ಸಿನಿರಂಗ ಮಾತ್ರ ಅಲ್ಲದೇ ಇಡೀ ಭಾರತೀಯ ಚಿತ್ರರಂಗದಲ್ಲೇ ಅಪಾರ ಜನಪ್ರಿಯತೆ ಮತ್ತು ಬಹು ಬೇಡಿಕೆ ಹೊಂದಿರೋ ನಟಿ. ಕನ್ನಡ ಸೇರಿದಂತೆ ತೆಲುಗು, ತಮಿಳು, ಹಿಂದಿ ಭಾಷೆಯಲ್ಲಿ ಸಾಲು ಸಾಲು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಅದರಂತೆ ಹಿಂದಿ ಚಿತ್ರರಂಗಕ್ಕೂ ಭಾಷೆಗೂ ಎಂಟ್ರಿ ಕೊಟಿರೋ ರಶ್ಮಿಕಾ ಮಂದಣ್ಣ ‘ಗುಡ್ ಬಾಯ್’ ಅನ್ನೋ ಸಿನಿಮಾದಲ್ಲಿ ಅಮಿತಾಬ್ ಬಚ್ಚನ್ ಅವರಿಗೆ ಮಗಳ ಪಾತ್ರದಲ್ಲಿ ನಟಿಸಿದ್ದಾರೆ ಎಂಬ ಸುದ್ದಿ ಸಿನಿಮಾ ತಂಡದ ಮೂಲಗಳಿಂದ ತಿಳಿದು ಬಂದಿದೆ. ಕನ್ನಡತಿ ರಮ್ಯಾ ಅವರು ಅಮೃತಧಾರೆ ಸಿನಿಮಾದಲ್ಲಿ ಬಿಗ್ ಬಿ ಅಮಿತಾಬ್ ಅವರೊಟ್ಟಿಗೆ ಕಾಣಿಸಿಕೊಂಡಿದ್ದರು. ಇದೀಗ ಅವರ ನಂತರ ಕನ್ನಡದ ನಟಿ ರಶ್ಮಿಕಾ ಮಂದಣ್ಣ ಅವರು ಬಿಗ್ ಬಿ ಅಮಿತಾಬ್ ಬಚ್ಚನ್ ಅವರ ಜೊತೆ ತೆರೆ ಹಂಚಿಕೊಂಡಿದ್ದಾರೆ.

ಹಾಗಾಗಿ ಇದು ರಶ್ಮಿಕಾ ಮಂದಣ್ಣ ಅವರ ಅಭಿಮಾನಿಗಳಿಗೆ ಸಖತ್ ಎಕ್ಸೈಟ್ ಆಗಿದೆ. ಗುಡ್ ಬೈ ಸಿನಿಮಾ ರಶ್ಮಿಕಾ ಮಂದಣ್ಣ ಅವರಿಗೆ ಎರಡನೇ ಸಿನಿಮಾ. ಬಾಲಾಜಿ ಮೋಶನ್ ಪಿಕ್ಚರ್ಸ್ ಮತ್ತು ರಿಲಯನ್ಸ್ ಎಂಟರ್ಟೈನ್ ಮೆಂಟ್ ಸಂಸ್ಥೆ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗಿರುವ ವಿಕಾಸ್ ಬಹ್ಲ್ ನಿರ್ದೇಶನ ಮಾಡಿರುವ ಗುಡ್ ಬಾಯ್ ಸಿನಿಮಾ ಇದೇ ಅಕ್ಟೋಬರ್ 7ರಂದು ದೇಶಾದ್ಯಂತ ಬಿಡುಗಡೆಯಾಗಲಿದೆ. ಇದೊಂದು ಪಕ್ಕಾ ಫ್ಯಾಮಿಲಿ ಡ್ರಾಮಾ ಸಿನಿಮಾವಾಗಿದ್ದು ಕೌಟುಂಬಿಕ ಸಂಬಂಧಗಳ ಭಾಂಧವ್ಯದ ಸುತ್ತ ಎಣೆಯಲಾಗಿರುವ ಕಥೆಯಾಗಿದಂತೆ. ಇದೀಗ ಈ ಗುಡ್ ಬಾಯ್ ಚಿತ್ರದ ಫಸ್ಟ್ ಲುಕ್ ಪೋಸ್ಟರನ್ನ ಚಿತ್ರ ತಂಡ ರಿವೀಲ್ ಮಾಡಿದೆ.

ಈ ಫಸ್ಟ್ ಲುಕ್ ಪೋಸ್ಟರ್ ನಲ್ಲಿ ಅಮಿತಾಬ್ ಬಚ್ಚನ್ ಅವರು ಗಾಳಿಪಟ ದಾರ ಹಿಡಿದಿದ್ದು, ಅವರ ಹಿಂದೆ ಸ್ಮೈಲ್ ಮಾಡುತ್ತಾ ರಶ್ಮಿಕಾ ನಿಂತಿದ್ದಾರೆ. ಗುಡ್ ಬೈ ಚಿತ್ರದಲ್ಲಿ ಬಿಗ್ ಬಿ ಜೊತೆ ರಶ್ಮಿಕಾ ಮಂದಣ್ಣ ಯಾವ ರೀತಿ ಕಾಣಿಸಿಕೊಂಡಿರಬಹುದು ಎಂಬ ಕುತೂಹಲಕ್ಕೆ ಇದೀಗ ತೆರೆ ಬಿದ್ದಿದೆ. ಇನ್ನು ಇದರ ನಡುವೆಯೇ ರಶ್ಮಿಕಾ ಮಂದಣ್ಣ ಬಾಲಿವುಡ್ ನಲ್ಲಿ ಇನ್ನೊಂದಷ್ಟು ಅವಕಾಶಗಳನ್ನು ಪಡೆದುಕೊಂಡು ಮಿಂಚಲಿದ್ದಾರೆ. ಅದಕ್ಕೆ ಪೂರಕವಾಗಿ ಇದೀಗ ರಣ್ ಬೀರ್ ಕಪೂರ್ ಅವರ ಸಿನಿಮಾ ವೊಂದರಲ್ಲಿ ನಟಿಸಲಿದ್ದಾರಂತೆ. ಅದರ ಜೊತೆಗೆ ಬಾಲಿವುಡ್ ಎಂಗ್ ಅಂಡ್ ಎನರ್ಜೆಟಿಕ್ ಹೀರೋ ಟೈಗರ್ ಶ್ರಾಫ್ ಅವರೊಟ್ಟಿಗೆ ಕೂಡ ನಾಯಕಿಯಾಗಿ ನಟಿಸಲಿದ್ದಾರೆ ಎಂದು ತಿಳಿದು ಬಂದಿದೆ.