ನಿಲ್ಲುತ್ತಿಲ್ಲ ಬ್ರಹ್ಮಾಸ್ತ್ರದ ಓಟ, ಎರಡೇ ದಿನಕ್ಕೆ ಚಿತ್ರ ಗಳಿಸಿರುವ ಹಣ ಎಷ್ಟು ಗೊತ್ತೇ

ಎರಡೇ ದಿನದಲ್ಲಿ ಬಾಕ್ಸ್ ಆಫೀಸ್ ನಲ್ಲಿ ಭರ್ಜರಿ ಕಲೆಕ್ಷನ್ ಮಾಡಿದ ಬ್ರಹ್ಮಾಸ್ತ್ರ ಸಿನಿಮಾ. ಆಲಿಯಾ ಭಟ್ ಮತ್ತು ರಣ್ ಬೀರ್ ಕಪೂರ್ ಜೋಡಿಯ ಈ ಬ್ರಹ್ಮಾಸ್ತ್ರ ಪ್ಯಾನ್ ಇಂಡಿಯಾ ಸಿನಿಮಾ ಬಗ್ಗೆ ಇಡೀ ಭಾರತೀಯ ಚಿತ್ರರಂಗ ಅಪಾರ ನಿರೀಕ್ಷೆ ಇಟ್ಟುಕೊಳ್ಳಲಾಗಿತ್ತು. ಅದರಲ್ಲಿಯೂ ಬಾಲಿವುಡ್ ರಂಗಕ್ಕೆ ಬ್ರಹ್ಮಾಸ್ತ್ರ ಸಿನಿಮಾ ಗೆಲ್ಲಲೇಬೇಕಾಗಿದ್ದ ಸಿನಿಮಾ ಆಗಿತ್ತು. ಯಾಕಂದ್ರೆ ಬಾಲಿವುಡ್ನ ಸಾಲು ಸಾಲು ಸ್ಟಾರ್ ನಟರ ಸಿನಿಮಾಗಳೇ ಮಕಾಡೆ ಮಲಗಿದ್ದವು‌. ಹಾಗಾಗಿ ಬಾಲಿವುಡ್ ರಂಗಕ್ಕೆ ಈ ಬ್ರಹ್ಮಾಸ್ತ್ರ ಸಿನಿಮಾದ ಗೆಲುವು ಅನಿವಾರ್ಯವಾಗಿತ್ತು. ಅದರಂತೆ ನಿಜಕ್ಕೂ ಕೂಡ ಬ್ರಹ್ಮಾಸ್ತ್ರ ಸಿನಿಮಾ ಗೆದ್ದಿದೆ ಎಂದು ಹೇಳಬಹುದು. ಬಹುತೇಕರು ಈ ಚಿತ್ರದ ಹಾಡು ಮತ್ತು ಟ್ರೇಲರ್ ನೋಡಿ ಕೊಂಚ ಮಿಶ್ರ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದರು. ಆದರೆ ಬ್ರಹ್ಮಾಸ್ತ್ರ ಸಿನಿಮಾ ನೋಡಿದ ಪ್ರೇಕ್ಷಕರು ಅಪಾರ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಬ್ರಹ್ಮಾಸ್ತ್ರ ಸಿನಿಮಾ ಗೆಲ್ಲುವ ಮೂಲಕ ಸಕ್ಸಸ್ ಫುಲ್ ನಟಿ ಆಗಿರೋ ಆಲಿಯಾ ಭಟ್ ಅವರ ಸಕ್ಸಸ್ ಲಿಸ್ಟ್ಗೆ ಈ ಚಿತ್ರವೂ ಕೂಡ ಸೇರ್ಪಡೆಗೊಂಡಿದೆ. ಪಂಚ ಭಾಷೆಗಳಲ್ಲಿ ರಿಲೀಸ್ ಆದ ಬ್ರಹ್ಮಾಸ್ತ್ರ ಸಿನಿಮಾ ಬರೋಬ್ಬರಿ 400 ಕೋಟಿಗೂ ಅಧಿಕ ವೆಚ್ಚದಲ್ಲಿ ಅದ್ದೂರಿಯಾಗಿ ನಿರ್ಮಾಣ ಆಗಿತ್ತು. ಸ್ಟಾರ್ ಸ್ಟೂಡಿಯೋಸ್, ಧರ್ಮ ಪ್ರೊಡಕ್ಷನ್, ಪ್ರೈಮ್ ಫೋಕಸ್ ಅಂಡ್ ಸ್ಟಾರ್ಲೈಟ್ ಪಿಕ್ಚರ್ಸ್ ಜಂಟಿಯಾಗಿ ಬ್ರಹ್ಮಾಸ್ತ್ರ ಸಿನಿಮಾ ನಿರ್ಮಾಣ ಮಾಡಿದ್ದಾರೆ. ಕರಣ್ ಜೋಹರ್, ಅಯನ್ ಮುಖರ್ಜಿ, ಅಪೂರ್ವ ಮೆಹ್ತಾ ಮತ್ತು ನಮಿತ್ ಮಲ್ಹೋತ್ರಾ ಜೊತೆಗೆ ನಾಯಕ ನಟ ರಣ್ ಬೀರ್ ಕಪೂರ್ ಕೂಡ ಬಂಡವಾಳ ಹೂಡಿಕೆ ಮಾಡಿದ್ದರು. ಬ್ರಹ್ಮಾಸ್ತ್ರ ಚಿತ್ರಕ್ಕೆ ಪ್ಲಸ್ ಪಾಯಿಂಟ್ ಅಂದ್ರೆ ಬ್ರಹ್ಮಾಸ್ತ್ರ ಸಿನಿಮಾದಲ್ಲಿ ಬಾಲಿವುಡ್ ಬಿಗ್ ಬಿ ಅಮಿತಾಬ್ ಬಚ್ಚನ್, ಶಾರುಖ್ ಖಾನ್, ಅಕ್ಕಿನೇನಿ ನಾಗಾರ್ಜುನ, ಮೌನಿ ರಾಯ್, ಡಿಂಪಲ್ ಕಪಾಡಿಯಾ ಸೇರಿದಂತೆ ಮುಂತಾದವರು ಕಾಣಿಸಿಕೊಂಡಿದ್ದಾರೆ.

ಈ ಕಾರಣದಿಂದ ಬ್ರಹ್ಮಾಸ್ತ್ರ ಸಿನಿಮಾಗೆ ಮತ್ತಷ್ಟು ಮೈಲಜ್ ಸಿಕ್ಕಿತ್ತು. ಅದರ ಜೊತೆಗೆ ಈಗ ಚಿತ್ರ ಕೂಡ ಒಳ್ಳೆಯ ಪ್ರಶಂಸೆ ಗಿಟ್ಟಿಸಿಕೊಂಡಿರೋದ್ರಿಂದ ಬಾಕ್ಸ್ ಆಫೀಸ್ ಕಲೆಕ್ಷನ್ ನಲ್ಲಿ ಸಹಜವಾಗಿಯೇ ಸೌಂಡ್ ಮಾಡುತ್ತಿದೆ. ಬ್ರಹ್ಮಾಸ್ತ್ರ ಸಿನಿಮಾ ಸೆಪ್ಟೆಂಬರ್ 9ರಂದು ದೇಶಾದ್ಯಂತ ಅದ್ದೂರಿಯಾಗಿ ರಿಲೀಸ್ ಆಯಿತು. ಮೊದಲನೇ ದಿನವೇ ಬ್ರಹ್ಮಾಸ್ತ್ರ ಸಿನಿಮಾ ಬರೋಬ್ಬರಿ 75 ಕೋಟಿ ಕಲೆಕ್ಷನ್ ಮಾಡಿತ್ತು. ಹಾಗೇ ಎರಡನೇ ದಿನ ಕೂಡ 85 ಕೋಟಿ ಕಲೆಕ್ಷನ್ ಮಾಡಿ ಬಾಕ್ಸ್ ಆಫೀಸ್ ನಲ್ಲಿ ಭರ್ಜರಿಯಾಗಿ ಧೂಳೆಬ್ಬಿಸಿದೆ. ಭಾನುವಾರದ ಕಲೆಕ್ಷನ್ ಕೂಡ ಉತ್ತಮವಾಗಿ ಆಗಿರೋದ್ರಿಂದ ಮೂರೇ ದಿನಕ್ಕೆ ಬ್ರಹ್ಮಾಸ್ತ್ರ ಚಿತ್ರ 250 ಕೋಟಿ ಗಡಿ ದಾಟಲಿದೆ ಎಂಬ ಅಭಿಪ್ರಾಯ ಮಾಹಿತಿ ತಿಳಿದು ಬರುತ್ತಿದೆ. ಒಟ್ಟಾರೆಯಾಗಿ ಎಲ್ಲರ ನಿರೀಕ್ಷೆಗೂ ಮೀರಿ ಬ್ರಹ್ಮಾಸ್ತ್ರ ಸಿನಿಮಾ ಅಪಾರ ಮೆಚ್ಚುಗೆ ಗಳಿಸಿ ಬಾಕ್ಸ್ ಆಫೀಸ್ ನಲ್ಲಿ ಸಖತ್ ರೋಲ್ ಮಾಡ್ತಿದೆ.

Leave a Reply

%d bloggers like this: