ಒಂದು ಕಾಲದಲ್ಲಿ ಮಿಂಚಿ ಮರೆಯಾದ ಖ್ಯಾತ ನಟಿ ನಿಕಿತಾ ಈಗ ಸಿಕ್ಕಿಬಿದ್ದಿರೋದು ಎಲ್ಲಿ ಗೊತ್ತಾ

ಸ್ಯಾಂಡಲ್ ವುಡ್ ನಲ್ಲಿ ಸ್ಟಾರ್ ನಟರ ಜೊತೆ ಮಿಂಚಿದ ಈ ನಟಿ ಇದೀಗ ಎಲ್ಲಿದ್ದಾರೆ.ಏನು ಮಾಡುತ್ತಿದ್ದಾರೆ ಎಂದು ಅವರ ಅಭಿಮಾನಿಗಳನ್ನು ಕಾಡುತ್ತಿದೆ.ತಮ್ಮ ಬ್ಯೂಟಿ ಮತ್ತು ತಮ್ಮ ನಟನೆಯಿಂದ ಕನ್ನಡ ಸಿನಿ ಪ್ರೇಕ್ಷಕರನ್ನ ರಂಜಿಸಿದ ಈ ಸ್ಟಾರ್ ನಟಿಯರು ಮದುವೆಯಾಗಿ ಸುಂದರವಾದ ಬದುಕನ್ನ ಕಟ್ಟಿಕೊಂಡಿದ್ದಾರೆ.ಅಂತಹ ನಟಿಯರಲ್ಲಿ ಪಂಚಭಾಷಾ ತಾರೆ ಆಗಿರುವ ನಟಿ ನಿಕಿತಾ ತುಕ್ರವಾಲ್ ಕೂಡ ಒಬ್ಬರು. ಒಂದು ಸಮಯದಲ್ಲಿ ಸ್ಯಾಂಡಲ್ ವುಡ್ ನ ಜನಪ್ರಿಯತೆಯ ಉತ್ತುಂಗದಲ್ಲಿದ್ದ ನಿಖಿತಾ ಕೆಲವೇ ವರ್ಷಗಳಲ್ಲಿ ಬಣ್ಣದ ಲೋಕದಿಂದ ಕಣ್ಮರೆಯಾದರು.ಕನ್ನಡ,ತಮಿಳು,ತೆಲುಗು,ಮಲೆಯಾಳಂ ಹೀಗೆ ದಕ್ಷಿಣ ಭಾರತದ ಎಲ್ಲಾ ಭಾಷೆಗಳಲ್ಲಿ ಸ್ಟಾರ್ ನಟರ ಜೊತೆ ನಟಿಸಿ ಸೈ ಎನಿಸಿಕೊಂಡಿರುವ ನಿಖಿತಾ ಸ್ಯಾಂಡಲ್ ವುಡ್ ನಲ್ಲಿ ಚಾಲೇಂಜಿಂಗ್ ಸ್ಟಾರ್ ಅವರೊಟ್ಟಿಗೆ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ.

ಈ ಜೋಡಿ ಸಿನಿ ಪ್ರೇಕ್ಷಕರಿಗೆ ಮೋಡಿ ಮಾಡಿತ್ತು.ಕಿಚ್ಚ ಸುದೀಪ್ ಅಭಿನಯದ ಮಹಾರಾಜ ಚಿತ್ರದ ಮೂಲಕ ಚಂದನವನಕ್ಕೆ ಎಂಟ್ರಿ ಕೊಟ್ಟ ನಿಖಿತಾ ತದ ನಂತರ ದರ್ಶನ್,ಉಪೇಂದ್ರ,ಪುನೀತ್ ರಾಜ್ ಕುಮಾರ್,ರವಿ ಚಂದ್ರನ್ ,ಜಗ್ಗೇಶ್ ಸೇರಿದಂತೆ ಕನ್ನಡದ ಬಹುತೇಕ ಸ್ಟಾರ್ ನಟರೊಂದಿಗೆ ತೆರೆ ಹಂಚಿಕೊಂಡಿದ್ದಾರೆ.ದರ್ಶನ್ ಅಭಿನಯಧ ಯೋಧ,ಕ್ರಾಂತಿವೀರ ಸಂಗೋಳ್ಳಿ ರಾಯಣ್ಣ,ಪ್ರಿನ್ಸ್,ಪುನೀತ್ ರಾಜ್ ಕುಮಾರ್ ಅವರ ವಂಶಿ ಸಿನಿಮಾಗಳು ನಿಖಿತಾ ಅವರಿಗೆ ಉತ್ತಮ ಹೆಸರು ತಂದು ಕೊಟ್ಟಿದ್ದವು.ನಟ ದರ್ಶನ್ ಅವರ ದಾಂಪತ್ಯ ವಿಚಾರದಲ್ಲಿ ನಿಖಿತಾ ಅವರ ಹೆಸರು ತಳುಕು ಹಾಕಿಕೊಂಡು ಕೊಂಚ ವಿವಾದಕ್ಕೂ ಕೂಡ ಒಳಗಾಗಿದ್ದರು ನಟಿ ನಿಖಿತಾ.ಇನ್ನು ರಿಯಾಲಿಟಿ ಶೋ ಆದ ಕನ್ನಡ ಬಿಗ್ ಬಾಸ್ ಸೀಸನ್ ಒಂದರ ಸ್ಪರ್ಧಿಯಾಗಿ ಭಾಗವಹಿಸಿದರು.

ಸೀರಿಯಲ್ ನಿಂದ ಬಣ್ಣದ ಲೋಕಕ್ಕೆ ಹೆಜ್ಜೆ ಇಟ್ಟ ನಿಖಿತಾ ಸೌತ್ ಸಿನಿ ರಂಗವನ್ನು ಒಂದಷ್ಟು ವರ್ಷಗಳ ಕಾಲ ಆಳಿದ್ದರು ಅಂದರೆ ತಪ್ಪಾಗಲಾರದು.2016 ರಲ್ಲಿ ಗಗನ್ ದೀಪ್ ಸಿಂಗ್ ಎಂಬುವರೊಟ್ಟಿಗೆ ದಾಂಪತ್ಯ ಜೀವನಕ್ಕೆ ಪ್ರವೇಶ ಪಡೆದ ನಟಿ ನಿಖಿತಾ ತುಕ್ರಾಲ್ ಸದ್ಯಕ್ಕೆ ಒಂದು ಮಗುವಿನ ತಾಯಿಯಾಗಿ ಸುಂದರ ಬದುಕನ್ನ ನಡೆಸುತ್ತಿದ್ದಾರೆ.ಮುಂಬೈನಲ್ಲಿ ತಮ್ಮ ಪತಿ ಗಗನ್ ದೀಪ್ ಅವರೊಟ್ಟಿಗೆ ನೆಲೆಸಿರುವ ನಿಖಿತಾ ಆಗಾಗ ಸೋಶಿಯಲ್ ಮೀಡಿಯಾಗಳಲ್ಲಿ ಒಂದಷ್ಟು ಉತ್ತಮ ಕ್ಷಣಗಳ ಪೋಟೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ.