ನಿಖಿಲ್ ಪತ್ನಿ ರೇವತಿ ತಂಗಿ ನಾಯಕಿಯಾಗಿ ಚಿತ್ರರಂಗಕ್ಕೆ ಪಾದಾರ್ಪಣೆ, ಹೇಗಿದ್ದಾರೆ ನೋಡಿ

ಸ್ಯಾಂಡಲ್ ವುಡ್ ನ ಖ್ಯಾತ ನಟ ಕಮ್ ರಾಜಕಾರಣಿಯ ನಾದಿನಿ ಚಂದನವನಕ್ಕೆ ಹೆಜ್ಜೆ ಇಡುವುದು ಬಹುತೇಕ ಖಚಿತ ಎನ್ನುತ್ತಿದ್ದಾರೆ ಆಪ್ತ ಬಳಗ.ಹೌದು ಸಿನಿಮಾ ರಾಜಕೀಯ ಕುಟುಂಬ ಹಿನ್ನೆಲೆಯುಳ್ಳವರು ತಮ್ಮ ಮಕ್ಕಳನ್ನು ಬಣ್ಣದ ಲೋಕಕ್ಕೆ ಪರಿಚಯಿಸುವುದು ಹೊಸ ಸಮಾಚಾರವೇನಲ್ಲ.ಆದರೆ ಈ ಕುಟುಂಬದಿಂದ ಬರುತ್ತಿರುವ ಈ ಚೆಲುವೆ ಉದ್ಯಮಿಯ ಮಗಳು. ಆದರೂ ಕೂಡ ಈ ಸೌಂದರ್ಯವತಿಗೆ ರಾಜಕೀಯ ಕುಟುಂಬ ಮತ್ತು ಸಿನಿಮಾ ನಂಟಿನ ಸಂಬಂಧ ಇರುವ ಕಾರಣ ಈ ಚೆಲುವೆ ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಡಬಹುದು ಎಂದು ಹೇಳುತ್ತಿವೆ ಮೂಲಗಳು.ಹಾಗಾದರೆ ಯಾರು ಈ ಚೆಲುವೆ ಅಂತೀರಾ.ಆಕೆ ಬೇರಾರು ಅಲ್ಲ ಸ್ಯಾಂಡಲ್ ವುಡ್ ಯುವರಾಜ ನಿಖಿಲ್ ಕುಮಾರ್ ಅವರ ನಾದಿನಿ.ನಟ ನಿಖಿಲ್ ಕುಮಾರ್ ಮಾಜಿ ಸಿ.ಎಂ.ಕುಮಾರ ಸ್ವಾಮಿ ಅವರ ಪುತ್ರ.

ತನ್ನ ತಂದೆಯ ಹೆಸರಿನ ಮೂಲಕ ರಾಜಕೀಯಕ್ಕೆ ಪ್ರವೇಶ ಪಡೆಯುವುದರ ಜೊತೆಗೆ ಜಾಗ್ವಾರ್ ಎಂಬ ಚಿತ್ರದ ಮೂಲಕ ಬಣ್ಣದ ಜಗತ್ತಿಗೆ ಎಂಟ್ರಿ ಕೊಟ್ಟು ಒಂದಷ್ಟು ಸಿನಿಮಾಗಳನ್ನು ಮಾಡಿ ತಕ್ಕ ಮಟ್ಟಿಗೆ ಯಶಸ್ಸು ಕೂಡ ಪಡೆದುಕೊಂಡಿದ್ದಾರೆ. ಹೀಗೆ ರಾಜಕೀಯ ಮತ್ತು ಸಿನಿಮಾ ಎರಡನ್ನು ಕೂಡ ಸರಿದೂಗಿಸಿಕೊಂಡು ಮುನ್ನೆಡೆಯುತ್ತಿರುವ ನಿಖಿಲ್ ಕುಮಾರ್ ಕಳೆದ ವರ್ಷ ರೇವತಿ ಎಂಬುವರೊಟ್ಟಗೆ ವೈವಾಹಿಕ ಜೀವನಕ್ಕೂ ಎಂಟ್ರಿ ಕೊಟ್ಟಿದ್ದಾರೆ.ಇತ್ತೀಚೆಗೆ ಕಳೆದ ತಿಂಗಳಷ್ಟೇ ಗಂಡು ಮಗುವಿನ ತಂದೆ ಆಗಿರುವ ನಿಖಿಲ್ ಕುಮಾರ್ ಸುಂದರ ಸಾಂಸಾರಿಕ ಬದುಕನ್ನ ಕಟ್ಟಿಕೊಂಡಿದ್ದಾರೆ.

ನಿಖಿಲ್ ಕುಮಾರ್ ಅವರ ಪತ್ನಿ ರೇವತಿ ಅವರ ತಂದೆ ಬೆಂಗಳೂರಿನ ಪ್ರತಿಷ್ಟಿತ ಉದ್ಯಮಿ.ರೇವತಿ ಅವರಿಗೆ ಸುಷ್ಮಾ ಎಂಬ ತಂಗಿ ಇದ್ದಾರೆ.ತನ್ನ ಅಕ್ಕನ ರೂಪವನ್ನೇ ಹೋಲುವ ಸುಷ್ಮಾ ಜೆ.ಡಿ.ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಸಂಸ್ಥೆಯಲ್ಲಿ ಫ್ಯಾಶನ್ ಡಿಸೈನಿಂಗ್ ಅಧ್ಯಾಯನ ಮಾಡುತ್ತಿದ್ದಾರೆ.ನೋಡಲು ಸ್ಪೂರದ್ರೂಪಿಯಾಗಿರುವ ಸುಷ್ಮಾ ನಟನೆಯತ್ತ ಬರಲಿದ್ದಾರೆ ಎಂಬ ವಿಚಾರ ಕೇಳಿ ಬರುತ್ತಿದೆ.ಸುಷ್ಮಾ ತಮ್ಮ ಅಕ್ಕ ರೇವತಿ ಭಾವ ನಿಖಿಲ್ ಕುಮಾರ್ ಅವರೊಂದಿಗೆ ಆಗಾಗ ಸಮಯ ಕಳೆಯುತ್ತಾರೆ.ಅವರ ಜೊತೆಗೆ ತೆಗೆಸಿಕೊಂಡಿರುವ ಫೋಟೋಗಳನ್ನು ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ

Leave a Reply

%d bloggers like this: