ಹೊಸ ‘ಆಡಿ’ ಕಾರು ಖರೀದಿಸಿದ ಹನುಮಂತ! ಕಾರ್ ಗಿಫ್ಟ್ ಮಾಡಿದ್ಯಾರು ಗೊತ್ತಾ? ನೋಡಿ ಕಾರಿನ ಅಸಲಿ ಕಥೆ ಇಲ್ಲಿದೆ

ಕನ್ನಡ ಕಿರತೆರೆಯ ಜನಪ್ರಿಯ ಜೀ಼ ಕನ್ನಡ ವಾಹಿನಿಯು ಧಾರಾವಾಹಿಗಳ ಜೊತೆಗೆ ರಿಯಲಿಟಿ ಶೋ ಗಳ ಮೂಲಕ ನಾಡಿನಾದ್ಯಂತ ಅಪಾರ ಪ್ರಸಿದ್ದತೆ ಪಡೆದುಕೊಂಡಿದೆ.ಈ ವಾಹಿನಿಯಲ್ಲಿ ಬರುತ್ತಿರುವ ಧಾರಾವಾಹಿಯಲ್ಲಿ ನಟಿಸುವ ಕಲಾವಿದರಷ್ಟೇ ,ರಿಯಾಲಿಟಿ ಶೋ ಸ್ಪರ್ಧಿಗಳು ಕೂಡ ತಮ್ಮ ಪ್ರತಿಭೆಯ ಮೂಲಕ ಅಪಾರ ಜನಪ್ರಿಯತೆ ಗಳಿಸಿದ್ದಾರೆ.ಅಂತಹ ಸ್ಪರ್ಧಿಗಳಲ್ಲಿ ಹನುಮಂತ ಕೂಡ ಒಬ್ಬರು.ಜೀ಼ ಕನ್ನಡ ವಾಹಿನಿಯ ಸುಪ್ರಸಿದ್ದ ಸಿಂಗಿಂಗ್ ಶೋ ಆದ ಸರಿಗಮಪ ಸೀಸನ್ 15.ರ ಸ್ಪರ್ಧಿಯಾಗಿದ್ದ ಹನುಮಂತ ತನ್ನ ಗ್ರಾಮೀಣ ಸೊಗಡಿನ ಜಾನಪದ ಹಾಡುಗಳ ಮೂಲಕ ನಾಡಿನ ಮನೆ ಮನಗಳಲ್ಲಿ ಮಾತಾದರು.ಜನರ ಮನಸಲ್ಲದೆ ತೀರ್ಪುಗಾರರು, ನಿರೂಪಕಿಯ ಮನಗೆಲ್ಲುವ ಮೂಲಕ ಹನುಮಂತ ಅಪಾರ ಜನಪ್ರಸಿದ್ದತೆ ಪಡೆದರು.ಈ ಸರಿಗಮಪ ಸೀಸನ್ 15 ರಲ್ಲಿ ಅತಿ ಹೆಚ್ಚು ಜನ ಮೆಚ್ಚುಗೆ ಪಡೆದ ಗಾಯಕ ಅಂದರೆ ಅದು ಈ ಗ್ರಾಮೀಣ ಪ್ರತಿಭೆ ಹನುಮಂತ.ಹನುಮಂತ ತನ್ನ ಜನಪ್ರಿಯತೆ ಪ್ರಸಿದ್ಥತೆಯ ಜೊತೆಗೆ ಆರ್ಥಿಕವಾಗಿಯೂ ಕೂಡ ಉತ್ತಮ ಸ್ಥಿತಿ ಕಂಡುಕೊಂಡರು.

ಈ ಸರಿಗಮಪ ಸೀಸನ್ 15 ರಲ್ಲಿ ಎರಡನೇ ಸ್ಥಾನ ಪಡೆದು ರನ್ನರ್ ಅಪ್ ಆದ ಹನುಮಂತ ಈ ಕಾರ್ಯಕ್ರಮದ ಬಳಿಕ ಗಾಯಕ ಹನುಮಂತನಾಗಿ ರಾಜ್ಯದ ಎಲ್ಲೆಡೆ ಅಪಾರ ಪ್ರಶಂಸೆ ಗಳಿಸಿಕೊಂಡರು.ಇದರ ನಡುವೆಯೇ ನಟಿ ಕಮ್ ಸರಿಗಮಪ ಸಿಂಗಿಂಗ್ ಶೋ ನ ನಿರೂಪಕಿಯಾದ ಅನುಶ್ರೀ ಅವರಿಗೆ ಹನುಮಂತ ಅವರ ಗಾಯನ,ಮುಗ್ದತೆ ತುಂಬಾ ಇಷ್ಟವಾಗಿತ್ತು.ಅವರನ್ನು ಖುಷಿ ಪಡಿಸಲು ಕಾಫಿ ಡೇ ಕರೆದುಕೊಂಡು ಹೋಗಿ ಹನುಮಂತನ ಜೊತೆ ಬೆಂಗಳೂರಿನಲ್ಲಿ ಒಂದು ರೌಂಡ್ ಕೂಡ ಹಾಕಿದ್ದರು.ಇದಾದ ನಂತರ ಹನುಮಂತ ಅವರು ಐಷಾರಾಮಿ ಕಾರಿನಲ್ಲಿ ಕಾಣಿಸಿಕೊಳ್ಳುತ್ತಾರೆ.ಆಗ ಹೊಸದೊಂದು ಸುದ್ದಿ ಭಾರಿ ವೈರಲ್ ಆಗುತ್ತದೆ. ಅದೇನಪ್ಪಾ ಅಂದರೆ ಸರಿಗಮಪ ಹನುಮಂತ ಕಾರ್ಯಕ್ರಮದಿಂದ ಬಂದ ಹಣದಿಂದ ಜೀವನ ಶೈಲಿ ಬದಲಾಗಿದೆ.

ಇತ್ತೀಚೆಗೆ ಈ ದುಬಾರಿ ಐಷಾರಾಮಿ ಕಾರಿನಲ್ಲಿ ಕಾಣಿಸಿಕೊಂಡ ಹಿನ್ನೆಲೆ ಈ ಕಾರು ಹನುಮಂತ ಅವರೇ ಖರೀದಿ ಮಾಡಿದ್ದಾರೆ ಎಂದು ಸುದ್ದಿ ಹರಿದಾಡಿತು.ಆದರೆ ಅಸಲಿಗೆ ಹನುಮಂತ ಕಾರ್ಯಕ್ರಮದ ನಿಮಿತ್ತ ಆಯೋಜಕರು ಕಳುಹಿಸಿದ ಈ ಆಡಿ ಕಾರಿನಲ್ಲಿ ಬಂದು ಇಳಿಯುತ್ತಾರೆ.ಕಾರಿನಿಂದ ಬಂದಿಳಿಯುತ್ತಿರುವ ಈ ಫೋಟೋ ಸುದ್ದಿವಾಹಿನಿಗಳಲ್ಲಿ ಪ್ರಸಾರವಾಗಿತ್ತು.ಇದನ್ನ ಕಂಡ ಬಹುತೇಕರು ಹನುಮಂತ ಈ ಐಷಾರಾಮಿ ಆಡಿ ಕಾರನ್ನು ಕೊಂಡಿರಬಹುದು ಎಂದು ಊಹೆ ಮಾಡಿದ್ದರು.ಆದರೆ ಇದು ಹನುಮಂತ ಕಾರ್ ಆಗಿಲ್ಲ.ಜೊತೆಗೆ ಹನುಮಂತನ ಆರ್ಥಿಕ ಪರಿಸ್ಥಿತಿ ಹೇಳಿಕೊಳ್ಳುವಷ್ಟು ಅತ್ಯುತ್ತಮವಾಗಿರುವುದಿಲ್ಲ.ಆದರೆ ಹನುಮಂತ ಮೊದಲಿಗಿಂತ ತಕ್ಕ ಮಟ್ಟಿಗೆ ಸುಧಾರಿಸಿಕೊಂಡು ಉತ್ತಮವಾಗಿದ್ದಾರೆ ಎಂಬುದು ಮಾತ್ರ ಸತ್ಯ.