ನೆಟ್ಟಿಗರ ತಲೆಗೆ ಹುಳ ಬಿಟ್ಟ ಸ್ಯಾಂಡಲ್ ವುಡ್ ಬ್ಯೂಟಿ ಕ್ವೀನ್..!

ನೆಟ್ಟಿಗರ ತಲೆಗೆ ಹುಳ ಬಿಟ್ಟ ಸ್ಯಾಂಡಲ್ ವುಡ್ ಬ್ಯೂಟಿ ಕ್ವೀನ್..!ಸಿನಿಮಾ ಮತ್ತು ರಾಜಕೀಯ ಎರಡೂ ಕ್ಷೇತ್ರಗಳಿಂದ ದೂರ ಇರುವ ನಟಿ ರಮ್ಯಾ ಸಾಮಾಜಿಕ ಜಾಲತಾಣಗಳಲ್ಲಿ ಸಕ್ರೀಯವಾಗಿ ತೊಡಗಿಸಿಕೊಂಡಿದ್ದಾರೆ.ಸಜದಲ್ಲಿ ಆಗುತ್ತಿರುವ ಎಲ್ಲಾ ಆಗು-ಹೋಗುಗಳನ್ನು ಗಮನಿಸುತ್ತಿರುವ ನಟಿ ರಮ್ಯಾ ಅವರು ಅವುಗಳ ಬಗ್ಗೆ ತಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಟ್ವಿಟ್ಟರ್ ಮತ್ತು ಇನ್ಸ್ಟಾ ಗ್ರಾಮ್ ಖಾತೆಗಳಲ್ಲಿ ಹಂಚಿಕೊಳ್ಳುತ್ತಿರುತ್ತಾರೆ. ಹಾಗೆಯೇ ಬಣ್ಣದ ಲೋಕದಿಂದ ಅಂತರ ಇದ್ದರು ಕೂಡ ರಮ್ಯಾ ಮಾತ್ರ ಇತ್ತೀಚೆಗೆ ಕನ್ನಡದ ಹಲವು ಚಿತ್ರಗಳ ಬಗ್ಗೆ ಮೆಚ್ಚುಗೆ ಮಾತುಗಳನ್ನಾಡುವುದರ ಜೊತೆಗೆ ಆ ಸಿನಿಮಾಗಳಿಗೆ ಪ್ರೋತ್ಸಾಹದಾಯಕ ಪೋಸ್ಟ್ ಗಳನ್ನು ತಮ್ಮ ಇನ್ಸ್ಟಾ ಸ್ಟೋರಿಗಳಲ್ಲಿ ಹಾಕುತ್ತಿರುತ್ತಾರೆ.

ಇತ್ತೀಚೆಗೆ ರಿಲೀಸ್ ಆದ ಕೋಟಿಗೊಬ್ಬ 3 ಚಿತ್ರದ ಕಿಚ್ಚನ್ ಲುಕ್ ಗೆ ಫಿದಾ ಆಗಿ ನಮ್ಮ ಬೆಂಜಮಿನ್ ಬಟನ್ ಸುದೀಪ್ ನಿಮಗೆ ವಯಸ್ಸೇ ಆಗುವುದಿಲ್ಲವ ಎಂದು ಸುದೀಪ್ ಅವರನ್ನು ಹಾಡಿ ಹೊಗಳಿದ್ದರು. ಇನ್ನು ಇದೀಗ ತಮ್ಮ ಇನ್ಸ್ಟಾ ಗ್ರಾಮ್ ಖಾತೆಯಲ್ಲಿ ವಿಭಿನ್ನವಾದ ಪೋಸ್ಟ್ ವೊಂದನ್ನು ಹಾಕಿದ್ದಾರೆ.ಅಡ್ಡಾದಿಡ್ಡಿ ಇರುವ ನಾಕಾರು ಗೆರೆಗಳಿರುವ ಈ ಪೋಸ್ಟ್ ನೆಟ್ಟಿಗರಿಗೆ ತಲೆ ಕೆಡಿಸಿತ್ತು.ಇದರ ಬಗ್ಗೆ ಅನೇಕರು ರಮ್ಯಾ ಅವರಲ್ಲಿ ಈ ಗೆರೆಗಳ ಅರ್ಥ ಏನೆಂದು ಪ್ರಶ್ನೆ ಮಾಡಿದ್ದರು.ನಟಿ ರಮ್ಯಾ ಅವರು ಆಧ್ಯಾತ್ಮದ ಬಗ್ಗೆ ಕೊಂಚ ಒಲವು ಹೊಂದಿದ್ದರಿಂದ ಜೊತೆಗೆ ಒಂರಷ್ಟು ಆಧ್ಯಾತ್ಮದ ಪುಸ್ತಕಗಳನ್ನು ಓದಿಕೊಂಡಿದ್ದಾರೆ.

ಇದರ ಹಿನ್ನೆಲೆಯಲ್ಲಿ ನಟಿ ರಮ್ಯಾ ಅವರು ಪೋಸ್ಟ್ ಮಾಡಿರುವ ಈ ರೇಖಾ ಚಿತ್ರಗಳು ಯೋಗ ಜೀವನದ ಮೇಲೆ ಯಾವ ರೀತಿಯ ಬದಲಾವಣೆಗಳನ್ನು ತರಬಹುದು ಎಂಬುದನ್ನ ಸೂಚಿಸುತ್ತದೆ.ಆ ರೇಖೆಗಳು ಬದುಕಿನ ಅರ್ಥಗಳನ್ನು ತಿಳಿಸುವಂತದ್ದಾಗಿದೆ.ಇ ರೇಖೆಗಳು ಸೂರ್ಯ ನಮಸ್ಕಾರದ ದೃಷ್ಟಾಂತ.ಈ ರೇಖೆಗಳು ಏರಿಳಿತ ಹೊಂದಿರುವಂತೆ ಜೀವದಲ್ಲಿಯೂ ಕೂಡ ಹಲವು ಏರು-ಪೇರುಗಳನ್ನು ಹೊಂದಿರುತ್ತವೆ ಎಂದು ಬರೆದುಕೊಂಡಿದ್ದಾರೆ.ನಟಿ ರಮ್ಯಾ ಅವರು ಯೋಗಾಭ್ಯಾಸ ಮಾಡುತ್ತಿದ್ದು,ಈ ಯೋಗದಿಂದ ತಾವು ಕಲಿತಂತಹ ವಿಚಾರ ಮಾಹಿತಿಗಳನ್ನು ಹಂಚಿಕೊಂಡಿದ್ದಾರೆ.

Leave a Reply

%d bloggers like this: