ನೀನು ಬಟ್ಟೆ ಬಿಚ್ಚಿ ತೋರಿಸಿದರು ಯಾರು ನೋಡೋದು ಇಲ್ಲ ಎಂದು ಅನುಷ್ಕಾ ಶೆಟ್ಟಿಗೆ ಅವಮಾನ! ಕನ್ನಡ ಸಿನೆಮಾದಿಂದ ರಿಜೆಕ್ಟ್ ಆದ್ರ ಅನುಷ್ಕಾ

ದಕ್ಷಿಣ ಭಾರತ ಚಿತ್ರರಂಗದಲ್ಲಿ ಬಹು ಬೇಡಿಕೆಯ ಸ್ಟಾರ್ ನಟಿಯಾಗಿ ಮಿಂಚುತ್ತಿರುವ ಈ ಕರ್ನಾಟಕ ಮೂಲದ ಈ ಬೆಡಗಿಗೆ ಬಟ್ಟೆ ಬಿಚ್ಚಿದ್ರೂ ನಿನ್ನ ಯಾರು ನೋಡಲ್ಲ ಎಂದು ಹೇಳಿದ್ದರಂತೆ. ಹಾಗಾದರೆ ಈ ಚುಚ್ಚು ಮಾತು ಹೇಳಿಸಿಕೊಂಡ ಆ ನಟಿ ಯಾರು ಅಂತ ಗೊತ್ತಾ. ಇವರು ಯಾರು ಎಂದು ತಿಳಿದರೆ ನಿಜಕ್ಕೂ ಕೂಡ ಅಚ್ಚರಿಯಾಗುತ್ತದೆ‌. ಹೌದು ಏಕೆಂದರೆ ಈ ನಟಿ ಇಂದು ದಕ್ಷಿಣ ಭಾರತೀಯ ಚಿತ್ರರಂಗದ ಸುಪ್ರಸಿದ್ದ ನಟಿಯಾಗಿ ಮಿಂಚುತ್ತಿದ್ದಾರೆ. ಬಣ್ಣದ ಜಗತ್ತು ತೆರೆ ಮೇಲೆ ಕಾಣಿಸಿದಷ್ಟು ಬಣ್ಣ ಬಣ್ಣ ಗಳಿಂದ ಕೂಡಿದ ಕಲರ್ ಫುಲ್ ಜೀವನವಲ್ಲ. ಅಲ್ಲಿ ನಿಜಕ್ಕೂ ಕೂಡ ಅವಮಾನ, ಸೋಲು, ವ್ಯಂಗ್ಯ, ಟೀಕೆ ಅಂತಹ ಅನೇಕ ಸವಾಲುಗಳನ್ನು ಎದುರಿಸಿ ಧೈರ್ಯದಿಂದ ಮುನ್ನುಗ್ಗುವಂತಹ ಚಾಕಚಕ್ಯತೆಯ ಬುದ್ದಿವಂತಿಕೆ ಆತ್ಮ ವಿಶ್ವಾಸದ ಗುಣ ಹೊಂದಿರಲೇ ಬೇಕಾಗುತ್ತದೆ. ಚಿತ್ರರಂಗದಲ್ಲಿ ಏನಾದರು ಒಂದು ಸಾಧಿಸಬೇಕು ಎಂದು ಅನೇಕ ಯುವಕ-ಯುವತಿಯರು ಕಲಾ ಜಗತ್ತಿಗೆ ಹೆಜ್ಜೆ ಇಡುತ್ತಾರೆ.

ಆದರೆ ಅವಕಾಶ ಹರಸಿ ಬಂದವರಿಗೆಲ್ಲಾ ಇಲ್ಲಿ ರೆಡ್ ಕಾರ್ಪೆಟ್ ಹಾಸಿ ಅವಕಾಶ ನೀಡುವುದಿಲ್ಲ. ಪ್ರತಿಯೊಂದಕ್ಕೂ ಕೂಡ ಅದರದೇ ಆದಂತಹ ಕಷ್ಟ ಸವಾಲುಗಳನ್ನ ಎದುರಿಸಿ ಮುಂದೆ ಹೆಜ್ಜೆ ಇಡಬೇಕಾಗುತ್ತದೆ. ಈ ಸಂಧರ್ಭದಲ್ಲಿ ಅನೇಕರ ಬಳಿ ಅವಮಾನ, ಬೈಗುಳದ ಮಾತುಗಳನ್ನ ಕೇಳಬೇಕಾಗಿರುತ್ತದೆ. ಹೆಣ್ಣು ಮಕ್ಕಳು ತಾನು ಸಿನಿಮಾ ರಂಗದಲ್ಲಿ ಮಿಂಚಬೇಕು ಎಂದು ಯಾರ ಹಿನ್ನೆಲೆ ಇಲ್ಲದೆ ಈ ಬಣ್ಣದ ಲೋಕಕ್ಕೆ ಪ್ರವೇಶ ಪಡೆದರೆ, ನಿಜಕ್ಕೂ ಕೂಡ ಅವರ ಪರಿಸ್ಥಿತಿ ಅನುಭವಿಸಿದವರಿಗೆ ಮಾತ್ರ ಅರಿವಾಗುತ್ತದೆ. ಅದರಂತೆ ತಮ್ಮ ಮೊದಲ ಆಡಿಶನ್ ನಲ್ಲಿ ಅವಮಾನ ಅನುಭವಿಸಿ ಇಂದು ಸೌತ್ ಸಿನಿ ರಂಗವನ್ನು ಆಳುತ್ತಿರುವ ನಟಿ ಅನುಷ್ಕಾ ಶೆಟ್ಟಿ ಅವರ ಆರಂಭದ ಹಾದಿ ನಿಜಕ್ಕೂ ಕೂಡ ಎಂತವರಿಗಾದರು ಬೇಸರ ಮೂಡಿಸುತ್ತದೆ.

ಹಾಗಾದರೆ ಅವರಿಗೆ ಆಡಿಶನ್ ನಲ್ಲಿ ಆದದ್ದಾದರು ಏನು ಅಂತೀರಾ. ಕರ್ನಾಟಕದ ಮಂಗಳೂರು ಮೂಲದವರಾದ ನಟಿ ಅನುಷ್ಕಾ ಶೆಟ್ಟಿ ಅವರು ಚಿತ್ರರಂಗಕ್ಕೂ ಬರುವ ಮೊದಲ ಕನ್ನಡದಲ್ಲಿ ಬಣ್ಣ ಎಂಬ ಧಾರಾವಾಹಿಯಲ್ಲಿ ಪುಟ್ಟದೊಂದು ಪಾತ್ರ ನಿರ್ವಹಿಸಿದ್ದರಂತೆ. ಇದರ ಜೊತೆಗೆ ಸಿನಿಮಾಗಳಲ್ಲಿ ಅವಕಾಶಕ್ಕಾಗಿ ಕೆಲವು ಆಡಿಶನ್ ಗಳಲ್ಲಿ ಭಾಗವಹಿಸುತ್ತಿದ್ದರಂತೆ. ಹೀಗೆ ಒಂದು ಆಡಿಶನ್ ನಲ್ಲಿ ಅನುಷ್ಕಾ ಶೆಟ್ಟಿ ಅವರಿಗೆ ನಿರ್ಮಾಪಕರೊಬ್ಬರು ನೀನು ಬಟ್ಟೆ ಬಿಚ್ಚಿ ಕುಣಿದರು ಯಾರು ನಿನ್ನನ್ನು ನೋಡುವುದಿಲ್ಲ ಹೋಗು ಎಂದು ಹಿಯ್ಯಾಳಿಸಿದ್ದರಂತೆ. ಆದರೆ ಇದೇ ಅನುಷ್ಕಾ ಶೆಟ್ಟಿ ಅವರು ಇಂದು ಇಡೀ ದಕ್ಷಿಣ ಭಾರತ ಚಿತ್ರರಂಗವನ್ನಾಳುತ್ತಿದ್ದಾರೆ.

ಮೂಲತಃ ಮಂಗಳೂರಿನವರಾದ ಅನುಷ್ಕಾ ಶೆಟ್ಟಿ ಅವರು ಓದಿದ್ದು ಬೆಂಗಳೂರಿನಲ್ಲಿಯೇ. ಮಾಡೆಲಿಂಗ್ ಕ್ಷೇತ್ರದತ್ತ ಆಸಕ್ತಿ ಹೊಂದಿದ್ದ ಅನುಷ್ಕಾ ಶೆಟ್ಟಿ ಅವರಿಗೆ ಚಿತ್ರರಂಗದತ್ತಲೂ ಕೂಡ ಒಲವು ಮೂಡುತ್ತದೆ. ಆಗ 2005 ರಲ್ಲಿ ತೆಲುಗಿನ ಸೂಪರ್ ಚಿತ್ರದ ಮೂಲಕ ಸಿನಿಮಾ ರಂಗಕ್ಕೆ ಪಾದಾರ್ಪಣೆ ಮಾಡುತ್ತಾರೆ. ಈ ಚಿತ್ರ ಅನುಷ್ಕಾ ಶೆಟ್ಟಿ ಅವರಿಗೆ ಕೊಂಚ ಹೆಸರು ತಂದುಕೊಡುತ್ತದೆ. ಬಳಿಕ 2007 ರಲ್ಲಿ ಎಸ್.ಎಸ್. ರಾಜಮೌಳಿ ಅವರ ನಿರ್ದೇಶನದಲ್ಲಿ ತೆರೆ ಕಂಡ ವಿಕ್ರಮಾರ್ತುಡು ಚಿತ್ರದಲ್ಲಿ ಬೋಲ್ಡ್ ಆಗಿ ನಟಿಸುವ ಮೂಲಕ ನಟಿ ಅನುಷ್ಕಾ ಶೆಟ್ಟಿ ಅವರು ತೆಲುಗು ಸಿನಿ ಪ್ರೇಕ್ಷಕರ ಮನ ಗೆಲ್ಲುವಲ್ಲಿ ಯಶಸ್ವಿ ಆಗುತ್ತಾರೆ. ಇದಾದ ಬಳಿಕ ತಮಿಳು ಮತ್ತು ತೆಲುಗು ಎರಡು ಭಾಷೆಯ ಸಾಲು ಸಾಲು ಸಿನಿಮಾಗಳಲ್ಲಿ ದಿಗ್ಗಜ ಸ್ಟಾರ್ ನಟರೊಂದಿಗೆ ನಟಿಸಿ ಸೈ ಎನಿಸಿಕೊಳ್ಳುತ್ತಾರೆ.

ಅರುಂಧತಿ, ಬಾಹುಬಲಿ ಅಂತಹ ಸೂಪರ್ ಬ್ಲಾಕ್ ಬಸ್ಟರ್ ಸಿನಿಮಾಗಳು ನಟಿ ಅನುಷ್ಕಾ ಶೆಟ್ಟಿ ಅವರಿಗೆ ವೃತ್ತಿ ಜೀವನಕ್ಕೆ ಹೊಸ ತಿರುವು ನೀಡುತ್ತವೆ. ನಲವತ್ತೇಳಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿರುವ ಅನುಷ್ಕಾ ಶೆಟ್ಟಿ ಅವರಿಗೆ ನಂದಿ ಪ್ರಶಸ್ತಿ, ತಮಿಳು ನಾಡು ರಾಜ್ಯ ಸರ್ಕಾರದ ಪ್ರಶಸ್ತಿ ಸೇರಿದಂತೆ ಅನೇಕ ಫಿಲ್ಮ್ ಫೇರ್ ಪ್ರಶಸ್ತಿಗಳು ಲಭಿಸಿವೆ. ಇನ್ನು ತಮ್ಮ ನಲವತ್ತೆರಡು ವರ್ಷ ವಯಸ್ಸಿನ ನಟಿ ಅನುಷ್ಕಾ ಶೆಟ್ಟಿ ಅವರು ಇಂದಿಗೂ ಕೂಡ ಅದೇ ಚಾರ್ಮ್ ಉಳಿಸಿಕೊಂಡು ದಕ್ಷಿಣ ಭಾರತದ ಖ್ಯಾತ ನಟಿಯಾಗಿ ಮಿಂಚುತ್ತಿದ್ದಾರೆ.

Leave a Reply

%d bloggers like this: