ನೀನೊಬ್ಬ ದುರಹಂಕಾರಿ ಎಂದಿದ್ದ ಥಿಯೇಟರ್ ಮಾಲಿಕನ ಭೇಟಿ ಮಾಡಿಯೇ ಬಿಟ್ಟ ನಟ ವಿಜಯ್ ದೇವರಕೊಂಡ

ಅರೇ, ಇದೇನಪ್ಪಾ ಟಾಲಿವುಡ್ ಸೂಪರ್ ಸ್ಟಾರ್ ನಟ ವಿಜಯ್ ದೇವರಕೊಂಡ ತುಂಬಾ ಆಟಿಟ್ಯೂಡ್ ತೋರಿಸುತ್ತಾರೆ. ಅವರಲ್ಲಿ ಅಹಂಕಾರದ ಮನೋಭಾವನೆ ಹೆಚ್ಚಾಗಿದೆ. ಅವರ ನಡೆದುಕೊಳ್ಳುವ ಸ್ವಭಾವ ಸರಿ ಇಲ್ಲ. ಹಾಗೇ ಹೀಗೆ ಒಂದಷ್ಟು ಮಾತುಗಳು ಟಾಲಿವುಡ್ ಅಂಗಳದಲ್ಲಿ ಕೇಳಿ ಬರುತ್ತಿರುತ್ತವೆ. ಆದರೆ ನಿಜವಾಗಿ ನಟ ವಿಜಯ್ ದೇವರಕೊಂಡ ಅವರು ಹಿರಿಯರನ್ನ ಹೇಗೆ ಗೌರವಿಸುತ್ತಾರೆ ಅನ್ನೋದನ್ನ ತಿಳಿದುಕೊಳ್ಳಲೇಬೇಕು. ಅದಕ್ಕೆ ಒಂದು ಸೂಕ್ತ ನಿದರ್ಶನವಾಗಿ ಇತ್ತೀಚೆಗೆ ಘಟನೆಯೊಂದು ನಡೆದಿದೆ. ಹೌದು ಇತ್ತೀಚೆಗೆ ವಿಜಯ್ ದೇವರಕೊಂಡ ಅಭಿನಯದ ಪ್ಯಾನ್ ಇಂಡಿಯಾ ಸಿನಿಮಾ ಲೈಗರ್ ಚಿತ್ರ ಬಿಡುಗಡೆಯಾಗಿದೆ. ಚಿತ್ರ ಪ್ರೇಕ್ಷಕರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಅದು ಬೇರೆ ಕಾರಣ. ಈ ಲೈಗರ್ ಚಿತ್ರದ ಬಿಡುಗಡೆಗೆ ಮುನ್ನ ಕೆಲವರು ಲೈಗರ್ ಸಿನಿಮಾವನ್ನು ಬಾಯ್ಕಟ್ ಮಾಡಬೇಕು.

ಈ ಚಿತ್ರವನ್ನು ಎಲ್ಲಾ ಕಡೆ ಬಹಿಷ್ಕಾರ ಮಾಡಿ ತೊಂದರೆ ಮಾಡಬೇಕು ಎಂದು ಹುನ್ನಾರ ನಡೆಸಿದ್ದರು. ಆಗ ವಿಜಯ್ ದೇವರ ಕೊಂಡ ಅವರು ಮುಂಬೈನಲ್ಲಿ ಲೈಗರ್ ಚಿತ್ರದ ಪ್ರಚಾರ ಕಾರ್ಯದಲ್ಲಿದ್ದಾಗ ನಮ್ಮ ಸಿನಿಮಾವನ್ನು ಯಾರು ತಡೆಯುತ್ತಾರೆ ನೋಡಣ. ನನಗೆ ತಾಯಿಯ ಆಶೀರ್ವಾದ ಇದೆ. ಜನರ ಪ್ರೀತಿ, ವಿಶ್ವಾಸ ಜೊತೆಗೆ ದೇವರ ಬೆಂಬಲ ಇದೆ. ಅದರ ಜೊತೆಗೆ ನನ್ನಲ್ಲಿ ಕಿಚ್ಚಿದೆ ಎಂದು ಹೇಳಿದ್ದರು. ವಿಜಯ್ ದೇವರಕೊಂಡ ಅವರ ಈ ಹೇಳಿಕೆ ಮುಂಬೈನ ಮರಾಠ ಮಂದಿರ್ ಸಿನಿಮಾ ಮಂದಿರದ ಮಾಲೀಕರಾದ ಮನೋಜ್ ದೇಸಾಯಿ ಅವರಿಗೆ ಅಸಮಾಧಾನವಾಗಿತ್ತು. ವಿಜಯ್ ವಿರುದ್ದ ಆಕ್ರೋಶದ ಮಾತುಗಳನ್ನ ಕೂಡ ಆಡಿದ್ದರು. ಆದರೆ ಇದೀಗ ಮುಂಬೈಗೆ ಸ್ವತಃ ವಿಜಯ್ ದೇವರಕೊಂಡ ಅವರೇ ಮನೋಜ್ ದೇಸಾಯಿ ಅವರನ್ನ ಭೇಟಿ ಮಾಡಿ ಅವರೊಟ್ಟಿಗೆ ಗಂಟೆಗಟ್ಟಲೇ ಮಾತುಕತೆ ನಡೆಸಿದ್ದಾರೆ.

ಮನೋಜ್ ದೇಸಾಯಿ ಅವರು ಕೂಡ ವಿಜಯ್ ದೇವರಕೊಂಡ ಅವರನ್ನ ಆತ್ಮೀಯವಾಗಿ ನಡೆಸಿಕೊಂಡಿದ್ದಾರೆ. ಅಚ್ಚರಿ ಅಂದರೆ ಮನೋಜ್ ದೇಸಾಯಿ ಅವರಿಗೆ ವಿಜಯ್ ದೇವರಕೊಂಡ ಅವರ ವಿನಯವಂತಿಕೆ ವ್ಯಕ್ತಿತ್ವ ಕಂಡು ತುಂಬು ಪ್ರೀತಿ ವ್ಯಕ್ತಪಡಿಸಿದ್ದಾರೆ. ವಿಜಯ್ ದೇವರ ಕೊಂಡ ತುಂಬಾ ಒಳ್ಳೆಯ ಹುಡುಗ. ಆತನ ವಿನಯವಂತಿಕೆ ನಿಜಕ್ಕೂ ಕೂಡ ಇಷ್ಟವಾಯಿತು. ಆತನ ಎಲ್ಲಾ ಸಿನಿಮಾಗಳನ್ನ ನಾನು ಕೊಂಡುಕೊಳ್ಳುತ್ತೇನೆ ಎಂದು ಮನೋಜ್ ದೇಸಾಯಿ ಅವರು ತಿಳಿಸಿದ್ದಾರೆ. ಸದ್ಯಕ್ಕೆ ಸೋಶಿಯಲ್ ಮೀಡಿಯಾಗಳಲ್ಲಿ ಮನೋಜ್ ದೇಸಾಯಿ ಅವರು ಮತ್ತು ವಿಜಯ್ ದೇವರಕೊಂಡ ಪರಸ್ಪರ ಮಾತನಾಡಿರೋ ಒಂದಷ್ಟು ವೀಡಿಯೋ ಮತ್ತು ಫೋಟೋಗಳು ವೈರಲ್ ಆಗಿದ್ದು, ವಿಜಯ್ ದೇವರಕೊಂಡ ಅವರ ವಿನಯವಂತಿಕೆಯ ಸ್ವಭಾವಕ್ಕೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Leave a Reply

%d bloggers like this: