ಬೀದಿ ಬದಿ ಇಡ್ಲಿ ಮಾರಾಟ ಮಾಡುತ್ತಿದ್ದ ‘ಮುನಿರತ್ನ’ ಇಂದು ಮಿನಿಸ್ಟರ್ ಆಗಿದ್ದು ಹೇಗೆ ಗೊತ್ತಾ? ರೋಚಕ ಕಥೆ

ಬೀದಿ ಬದಿ ಇಡ್ಲಿ ಮಾರಾಟ ಮಾಡುತ್ತಿದ್ದ ವ್ಯಕ್ತಿ ಇಂದು ಸಿನಿಮಾ ಮತ್ತು ರಾಜಕೀಯ ಕ್ಷೇತ್ರದಲ್ಲಿ ಪ್ರಭಾವಿ ವ್ಯಕ್ತಿಯಾಗಿ ಬೆಳೆದು ಬಂದ ಹಾದಿ ನಿಜಕ್ಕೂ ಕೂಡ ಅಚ್ಚರಿ ಎನ್ನಬಹುದು.ಸಾಮಾನ್ಯವಾಗಿ ರಾಜಕೀಯ ಕ್ಷೇತ್ರ ಅಂದಾಕ್ಷಣ ಅದು ಹಣ ಇರುವಂತಹ ಜನರಿಗೆ ಮತ್ತು ಅದು ಕುಟುಂಬ ಪಾರಂಪರಿಕವಾಗಿ ಆಳ್ವಿಕೆ ಮಾಡಿಕೊಂಡು ಬಂದಿರುವುವರೆಗೆ ಮಾತ್ರ ಎಂದು ತಿಳಿಯುವುದುಂಟು. ಇಂದು ಬಹುತೇಕ ರಾಜಕೀಯ ನಾಯಕರು ಆರ್ಥಿಕವಾಗಿ ಸಬಲರಾಗಿರುತ್ತಾರೆ.ರಾಜಕೀಯದಲ್ಲಿ ಯಾರು ಯಾವಾಗ ಏನು ಬೇಕಾದರು ಆಗಬಹುದು. ಈ ಸಿನಿಮಾ ಮತ್ತು ರಾಜಕೀಯ ಕ್ಷೇತ್ರದಲ್ಲಿ ಹೆಸರು ಮಾಡುವುದು ಅಷ್ಟು ಸುಲಭದ ಮಾತಲ್ಲ.ಅದೂ ಕೂಡ ಮೂರುಬಾರಿ ಕ್ಷೇತ್ರದ ಶಾಸಕರಾಗಿ ಆಯ್ಕೆ ಆಗುವುದು ತಮಾಷೆಯ ಮಾತಲ್ಲ.ಅಷ್ಟರ ಮಟ್ಟಿಗೆ ಆ ಕ್ಷೇತ್ರದ ಪ್ರೀತಿ ವಿಶ್ವಾಸ ಗಳಿಸಿಕೊಂಡು ಹ್ಯಾಟ್ರಿಕ್ ಗೆಲುವು ದಾಖಲಿಸಿಕೊಂಡಿರುವ ನಿರ್ಮಾಪಕ ಮತ್ತು ಶಾಸಕರಾದ ಮುನಿರತ್ನ ಅವರು ನಿಜಕ್ಕೂ ಕೂಡ ಸಾಹಸಿಯೇ ಸರಿ ಎನ್ನಬಹುದು.

ಮುನಿರತ್ನ ಅವರು ನಾಯ್ಡು ಸಮುದಾಯದವರಾಗಿದ್ದು,ಬಡತನದ ಬೇಗೆಯಲ್ಲಿ ಬೆಂದವರು.ಜೀವನ ನಿರ್ವಹಣೆಗೆ ಅವರು ರಸ್ತೆ ಬದಿಯಲ್ಲಿ ಇಡ್ಲಿ ಮಾರಾಟ ಮಾಡುತ್ತಿದ್ದರು.ಜೊತೆಗೆ ಆಟೋವನ್ನು ಕೂಡ ಓಡಿಸುತ್ತಿರುತ್ತಾರೆ.ದಿನಕಳೆದಂತೆ ವ್ಯಾಪಾರ ವ್ಯವಹಾರದಲ್ಲಿ ಅಭಿವೃದ್ದಿಯಾಗಿ ಆರ್ಥಿಕ ಪರಿಸ್ಥಿತಿ ಉತ್ತಮವಾಗುತ್ತದೆ. ಹೀಗೆ ಒಂದಷ್ಟು ರಿಯಲ್ ಎಸ್ಟೇಟ್ ಉದ್ಯಮಕ್ಕೂ ಕಾಲಿಟ್ಟ ಮುನಿರತ್ನ ಅವರು ವಿವಿಧ ಟೆಂಡರ್ ಗಳನ್ನು ಪಡೆಯುತ್ತಾರೆ.ಈ ಮೂಲಕ ಕಂಟ್ರಾಕ್ಟರ್ ಆಗಿ ಉತ್ತಮ ಕಾರ್ಯ ನಿರ್ವಹಿಸುವ ಮೂಲಕ ಸ್ಥಳೀಯ ಜನರ ಪ್ರೀತಿ ವಿಶ್ವಾಸ ಗಳಿಸಿಕೊಂಡು ಕಾರ್ಪೋರೇಟರ್ ಕೂಡ ಆಗುತ್ತಾರೆ.ಹೀಗೆ ರಾಜಕೀಯವಾಗಿ ಗುರುತಿಸಿಕೊಳ್ಳುತ್ತಾ ಕಾಂಗ್ರೆಸ್ ಪಕ್ಷದ ನಾಯಕರೊಂದಿಗೆ ಓಡಾಡಿ ಟಿಕೆಟ್ ಪಡೆದು ರಾಜರಾಜೇಶ್ವರಿ ವಿಧಾನಸಭಾ ಕ್ಷೇತ್ರದಲ್ಲಿ ಚುನಾವಣೆಗೆ ಸ್ಪರ್ಧಿಸಿ ಗೆಲ್ಲುತ್ತಾರೆ.

ಇದಾದ ಬಳಿಕ 2001 ರಲ್ಲಿ ರಾಮ್ ಕುಮಾರ್,ಖುಷ್ಬೂ ಅಭಿನಯದ ಆಂಟಿ ಪ್ರೀತ್ಸೆ ಚಿತ್ರಕ್ಕೆ ಬಂಡವಾಳ ಹೂಡುವ ಮೂಲಕ ಕನ್ನಡ ಚಿತ್ರರಂಗಕ್ಕೆ ನಿರ್ಮಾಪಕರಾಗಿ ಪರಿಚಯರಾಗುತ್ತಾರೆ.ತದ ನಂತರ ರಕ್ತ ಕಣ್ಣೀರು,ಅನಾಥರು,ಕಠಾರಿವೀರ ಸುರಸುಂದರಂಗಿ,ಇತ್ತೀಚೆಗೆ ದರ್ಶನ್ ಅಭಿನಯದ ಪೌರಾಣಿಕ ಕುರುಕ್ಷೇತ್ರ ಸಿನಿಮಾವನ್ನು ಅದ್ದೂರಿತನದಲ್ಲಿ ನಿರ್ಮಾಣ ಮಾಡಿ ಕನ್ನಡ ಚಿತ್ರರಂಗದ ಪ್ಯಾಶನೆಟ್ ನಿರ್ಮಾಪಕರಾಗಿ ಗುರುತಿಸಿಕೊಳ್ಳುತ್ತಾರೆ.ಹೀಗೆ ಹತ್ತು ಐವತ್ತು ರೂ.ಗೆ ದುಡಿಯುತ್ತಿದ್ದ ಶಾಸಕ ಮುನಿರತ್ನ ಅವರು ಇಂದು ನೂರಾರು ಕೋಟಿಯ ಒಡೆಯರಾಗಿದ್ದಾರೆ.