ನಾಯಕಿಯಾಗಿ ಎಂಟ್ರಿ ಕೊಡಲಿದ್ದಾಳೆ ನಟಿ ಊರ್ವಶಿ ಅವರ ಮಗಳು, ಹೇಗಿದ್ದಾಳೆ ನೋಡಿ

ಕನ್ನಡ ಚಿತ್ರರಂಗದಲ್ಲಿ 80-90 ರ ದಶಕದಲ್ಲಿ ಅಪಾರ ಜನಪ್ರಿಯತೆ ಪಡೆದಿದ್ದ ಮಲೆಯಾಳಿ ಬೆಡಗಿಯ ಮಗಳು ಇದೀಗ ಬಣ್ಣದ ಲೋಕಕ್ಕೆ ಎಂಟ್ರಿ ಕೊಡಲಿದ್ದಾರೆ.ತಮಿಳು,ಮಲೆಯಾಳಂ ಮತ್ತು ಕನ್ನಡ ಚಿತ್ರಗಳಲ್ಲಿ ನಟಿಸಿದ್ದ ನಟಿ ಊರ್ವಶಿ ಅವರಿಗೆ ಎರಡು ಮದುವೆಯಾಗಿದೆ.ಮೊದಲ ಮದುವೆ 2000 ರಲ್ಲಿ ಮನೋಜ್ ಕೆ.ಜಯನ್ ಅವರೊಂದಿಗೆ ದಾಂಪತ್ಯ ಜೀವನಕ್ಕೆ ಹೆಜ್ಜೆ ಇಟ್ಟಿದ್ದ ನಟಿ ಊರ್ವಶಿ ಅವರಿಗೆ ಹೆಣ್ಣು ಮಗುವೊಂದಾಗುತ್ತದೆ. ಈ ಹೆಣ್ಣು ಮಗುವಿಗೆ ತೇಜಲಕ್ಷ್ಮಿ ಜಯನ್ ಎಂದು ಹೆಸರು‌.2008 ರಲ್ಲಿ ಮನೋಜ್ ಕೆ.ಜಯನ್ ಅವರೊಟ್ಟಿಗೆದ್ದ ವೈವಾಹಿಕ ಜೀವನಕ್ಕೆ ಅಂತಿಮ ತೆರೆ ಎಳೆದುಕೊಳ್ಳುತ್ತಾರೆ‌.ಆದರೆ ಮಗಳು ತೇಜಲಕ್ಷ್ಮಿ ಜಯನ್ ಅವರು ತಂದೆ ಮನೋಜ್.ಕೆ.ಜಯನ್ ಅವರ ಆಶ್ರಯದಲ್ಲಿಯೇ ಬೆಳೆದರು.ಇತ್ತ ನಟಿ ಊರ್ವಶಿ ಅವರು ಶಿವಪ್ರಸಾದ್ ಎಂಬುವರನ್ನು 2013 ರಲ್ಲಿ ಎರಡನೇ ಮದುವೆಯಾಗುತ್ತಾರೆ.ಇದೀಗ ಶಿವಪ್ರಸಾದ್ ಮತ್ತು ನಟಿ ಊರ್ವಶಿ ದಂಪತಿಗಳಿಗೆ ಇಶಾನ್ ಪ್ರಜಾಪತಿ ಎಂಬ ಗಂಡು ಮಗುವೊಂದಿದೆ.

ಅತ್ತ ಮನೋಜ್.ಕೆ.ಜಯನ್ ಕೂಡ ಆಶಾ ಎಂಬುವರೊಟ್ಟಿಗೆ ಎರಡನೇ ಮದುವೆಯಾಗಿದ್ದು,ತಮ್ಮ ಮೊದಲ ಪತ್ನಿ ಮಗಳು ತೇಜಲಕ್ಷ್ಮಿ ಜಯನ್ ಅವರನ್ನು ಕೂಡ ನೋಡಿಕೊಂಡಿದ್ದಾರೆ.ಇದೀಗ ನಟಿ ಊರ್ವಶಿ ಮತ್ತು ಮನೋಜ್.ಕೆ.ಜಯನ್ ಅವರ ಮಗಳಾದ ತೇಜಲಕ್ಷ್ಮಿ ಜಯನ್ ಅವರು ಇತ್ತೀಚೆಗೆ ಸೀರೆಯನ್ನುಟ್ಟು ತಮ್ಮ ತಂದೆಯ ಜೊತೆ ಇದ್ದ ಫೋಟೋವೊಂದು ಸೋಶಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗಿತ್ತು. ಇದೀಗ ತೇಜಲಕ್ಷ್ಮಿ ಜಯನ್ ಕೂಡ ಸಿನಿಮಾರಂಗಕ್ಕೆ ಬರುತ್ತಿದ್ದಾರೆ.ನಟಿ ಊರ್ವಶಿ ಅವರು ತಮಿಳು,ಮಲೆಯಾಳ ಸಿನಿಮಾಗಳ ಜೊತೆ ಕನ್ನಡದಲ್ಲಿ ಡಾ.ರಾಜ್ ಕುಮಾರ್,ವಿಷ್ಣು ವರ್ಧನ್, ಅಂಬರೀಶ್,ರವಿಚಂದ್ರನ್,ರಮೇಶ್ ಅರವಿಂದ್ ಅಂತಹ ದಿಗ್ಗಜ ನಟರೊಂದಿಗೆ ನಟಿಸಿದ್ದಾರೆ.

ನಟಿ ಊರ್ವಶಿ ಅವರು ತಮ್ಮ ಹತ್ತನೇಯ ವಯಸ್ಸಿನಲ್ಲಿಯೇ ಮಲೆಯಾಳಂ ಸಿನಿಮಾರಂಗಕ್ಕೆ ಎಂಟ್ರಿ ಕೊಟ್ಟರು.ಡಾ.ರಾಜ್ ಅವರ ಶ್ರಾವಣ ಬಂತು ಸಿನಿಮಾದ ಮೂಲಕ ಕನ್ನಡ ಚಿತ್ರರಂಗಕ್ಕೆ ಪ್ರವೇಶ ಪಡೆದರು.ತಮಿಳು,ಮಲೆಯಾಳಂ,ಕನ್ನಡ ಸೇರಿದಂತೆ ನಟಿ ಊರ್ವಶಿ ಅವರು ಇದುವರೆಗೆ ಮುನ್ನೂರಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿ ದಕ್ಷಿಣ ಭಾರತದ ಜನಪ್ರಿಯ ನಟಿಯಾಗಿ ಹೆಸರುವಾಸಿಯಾಗಿದ್ದಾರೆ. ಈ ನಮ್ಮ ಲೇಖನ ನಿಮಗೆ ಇಷ್ಟವಾದಲ್ಲಿ ಶೇರ್ ಮಾಡಿ ಮತ್ತು ಲೈಕ್ ಮಾಡಿ. ಮತ್ತಷ್ಟು ಹೊಸ ಹೊಸ ಸುದ್ದಿಗಳಿಗಾಗಿ ನಮ್ಮ ಪೇಜ್ ನ್ನು ತಪ್ಪದೆ ಲೈಕ್ ಮಾಡಿ.

Leave a Reply

%d bloggers like this: