ನಾಯಕಿಯಾಗಿ ಸಿನೆಮಾಗೆ ಎಂಟ್ರಿ ಕೊಡುತ್ತಿರುವ ಖ್ಯಾತ ನಟ ಪ್ರೇಮ್ ಮಗಳು, ಎಷ್ಟು ಸುಂದರವಾಗಿದ್ದಾಳೆ ನೋಡಿ

ಚಂದನವನದ ಖ್ಯಾತ ನಟನ ಪುತ್ರಿ ಫೋಟೋಶೂಟ್ ಮಾಡಿಸಿದ್ದಾರೆ.ಮುದ್ದಾಗಿರುವ ಈ ಚೆಲುವೆಯ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ.ಇದೀಗ ಈ ಪೋಟೋಶೂಟ್ ಮಾಡಿಸುತ್ತಿರುವುದು ಸ್ಯಾಂಡಲ್ ವುಡ್ ಗೆ ಎಂಟ್ರಿಕೊಡುವ ಮುನ್ಸೂಚನೆಯೇ ಎಂಬ ಗೊಂದಲಕ್ಕೆ ಕಾರಣವಾಗಿದೆ.ಹೌದು ಕನ್ನಡ ಚಿತ್ರರಂಗದ ಅನೇಕ್ ಸ್ಟಾರ್ ನಟ-ನಟಿಯರ ಮಕ್ಕಳು ಬಣ್ಣದ ಲೋಕಕ್ಕೆ ಎಂಟ್ರಿಕೊಟ್ಟಿದ್ದಾರೆ.ಅವರ ಸಾಲಿಗೆ ಇದೀಗ ಕನ್ನಡದ ಸ್ಪೂರದ್ರೂಪಿ ನಟ ಲವ್ಲೀ ಸ್ಟಾರ್ ಪ್ರೇಮ್ ಅವರ ಪುತ್ರಿ ಅಮೃತಾ ಸೇರ್ಪಡೆಯಾಗಲಿದ್ದಾರಾ ಎಂಬ ಪ್ರಶ್ನೆ ಇದೀಗ ಗಾಂಧಿನಗರದಲ್ಲಿ ಸುದ್ದಿಯಾಗಿದೆ.ಪ್ರಾಣ ಎಂಬ ಚಿತ್ರದ ಮೂಲಕ ಚಂದನವನಕ್ಕೆ ಪಾದಾರ್ಪಣೆ ಮಾಡಿದ ನಟ ಪ್ರೇಮ್ ರತ್ನಜ ಅವರ ನಿರ್ದೇಶನದಲ್ಲಿ ಮೂಡಿಬಂದ ನೆನಪಿರಲಿ ಚಿತ್ರದ ಮೂಲಕ ಲವ್ಲೀ ಸ್ಟಾರ್ ಬಿರುದು ಪಡೆದ ನಟ ಪ್ರೇಮ್ ಜೊತೆ ಜೊತೆಯಲಿ,ಪಲ್ಲಕ್ಕಿ,ಚಾರ್ ಮಿನಾರ್,ಚೌಕ,ಮಳೆ,ಮೊಹಬ್ಬತ್,ಫೇರ್ ಅಂಡ್ ಲವ್ಲೀ ಅಂತಹ ಸೂಪರ್ ಹಿಟ್ ಚಿತ್ರಗಳಲ್ಲಿ ನಟಿಸಿರುವ ನಟ ಪ್ರೇಮ್ ಹೆಚ್ಚು ಪ್ರೇ‌ಮಕತೆಯುಳ್ಳ ಸಿನಿಮಾಗಳಲ್ಲಿ ನಟಿಸಿ ನಾಡಿನಾದ್ಯಂತ ಮನೆ ಮಾತಾಗಿದ್ದಾರೆ.

ಭಾವನಾತ್ಮಕ ಪಾತ್ರಗಳಲ್ಲಿ ನಟಿಸಿ ತಮ್ಮದೆಯಾದಂತಹ ಅಭಿಮಾನಿ ಬಳಗ ಹೊಂದಿರುವ ನಟ ಪ್ರೇಮ್ ಸಾಮಾಜಿಕ ಕಳಕಳಿ ಕೆಲಸ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುತ್ತಿರುತ್ತಾರೆ.ಕನ್ನಡ ಭಾಷೆ,ನಾಡು ನುಡಿ,ಜಲ ವಿಚಾರವಾಗಿ ಒಂದಷ್ಟು ಹೋರಾಟಗಳಲ್ಲಿಯೂ ಕೂಡ ಪ್ರೇಮ್ ಭಾಗವಹಿಸಿರುತ್ತಾರೆ.ಕನ್ನಡ ಸಾಹಿತ್ಯದ ಬಗ್ಗೆ ಅಪಾರ ಆಸಕ್ತಿ ಹೊಂದಿರುವ ನಟ ಪ್ರೇಮ್ ಅವರು ಹೆಚ್ಚು ಪುಸ್ತಕಗಳನ್ನು ಓದುವ ಹವ್ಯಾಸ ರೂಢಿಸಿಕೊಂಡಿದ್ದಾರೆ.ಕನ್ನಡದ ಸೌಮ್ಯತೆಯ ನಟರಲ್ಲಿ ಒಬ್ಬರಾಗಿರುವ ನಟ ಪ್ರೇಮ್ ಅವರು ತಮ್ಮ ಸಿನಿ ವೃತ್ತಿ ಜೀವನದಲ್ಲಿ ಯಾವ ರೀತಿಯಾಗಿ ಉತ್ತಮ ಹೆಸರು ಗಳಿಸಿದ್ದಾರೋ ಅದೇ ರೀತಿಯಾಗಿ ತಮ್ಮ ವೈಯಕ್ತಿಕ ಬದುಕನ್ನ ಕೂಡ ಉತ್ತಮವಾಗಿ ಕಟ್ಟಿಕೊಂಡಿದ್ದಾರೆ.ಪ್ರೇಮ ವಿವಾಹ ಆಗಿರುವ ಪ್ರೇಮ್ ಅವರಿಗೆ ಆರ್ಥಿಗೊಬ್ಬ ಕೀರ್ತಿಗೊಬ್ಬಳು ಎಂಬಂತೆ ಒಬ್ಬ ಮಗ,ಮಗಳು ಇದ್ದಾರೆ.ಜ್ಯೋತಿ ಅವರನ್ನು ತಮ್ಮ ಬಾಳ ಸಂಗಾತಿಯಾಗಿ ಸ್ವೀಕರಿಸಿದ ನಂತರ ಸಿನಿಮಾಗಳಲ್ಲಿ ನಾಯಕ ನಟರಾಗಿ ಅಭಿನಯಿಸುತ್ತಾರೆ.ನಟ ಪ್ರೇಮ್ ಅವರಿಗೆ ಏಕಾಂತ್ ಮತ್ತು ಅಮೃತಾ ಎಂಬ ಇಬ್ಬರು ಮಕ್ಕಳಿದ್ದಾರೆ.

ಏಕಾಂತ್ ಒಂಬತ್ತನೇ ತರಗತಿ ವಿಧ್ಯಾಭ್ಯಾಸ ಮಾಡುತ್ತಿದ್ದು,ಮಗಳು ಅಮೃತಾ ಇಂಜಿನಿಯರಿಂಗ್ ವಿಧ್ಯಾಭ್ಯಾಸವನ್ನು ಮಾಡುತ್ತಿದ್ದಾರೆ.ಅಮೃತಾ ಪಿಯುಸಿ ಯಲ್ಲಿ ಶೇಕಡಾ 91.ರಷ್ಟು ಅಂಕ ಗಳಿಸಿದ್ದರು.ಓದಿನಲ್ಲಿ ಮುಂದಿರುವ ಅಮೃತಾ ಅವರು ಸಿನಿಮಾದತ್ತ ಮುಖ ಮಾಡುವುದಿಲ್ಲ ಎಂಬ ಸುದ್ದಿಯಿದೆ.ಆದರೆ ಇತ್ತೀಚೆಗೆ ಅಮೃತಾ ಟ್ರೆಡಿಶನಲ್ ನೀಲಿ ಬಣ್ಣದ ಸಲ್ವಾರ್ ಸೀರೆ ಉಟ್ಟು,ಆಕರ್ಷಕ ಜುಮ್ಕಿ,ಸರ ತೊಟ್ಟು ಫೋಟೋಶೂಟ್ ಮಾಡಿಸಿದ್ದರು.ಸೀರೆ ತೊಟ್ಟು ಪೋಸ್ ಕೊಟ್ಟಿದ್ದ ಅಮೃತಾರ ಫೋಟೋ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗಿವೆ.ಈ ಫೋಟೋ ಗಳನ್ನು ನೋಡಿದ ನೆಟ್ಟಿಗರು ಮುಂದಿನ ದಿನಗಳಲ್ಲಿ ಸಿನಿಮಾಗಳಲ್ಲಿ ನಟಿಸಬಹುದೇನೋ ಎಂಬ ನಿರೀಕ್ಷೆ ಇಟ್ಟುಕೊಂಡಿದ್ದಾರೆ.ಆದರೆ ಈ ಬಗ್ಗೆ ನಟ ಪ್ರೇಮ್ ಆಗಲೀ ಅವರ ಪುತ್ರಿ ಅಮೃತಾ ಯಾವುದೇ ರೀತಿಯ ಸ್ಪಷ್ಟನೆ ನೀಡಿಲ್ಲ.

Leave a Reply

%d bloggers like this: