ನಟಿಸಿಲ್ಲ, ನಿರ್ದೇಶಿಸಿಲ್ಲ ಆದರೂ ಬ್ರಹ್ಮಾಸ್ತ್ರ ಚಿತ್ರದಿಂದ ರಾಜಮೌಳಿ ಅವರಿಗೆ ಸಿಕ್ಕ ಹಣ ಎಷ್ಟು ಗೊತ್ತೇ

ಬಾಲಿವುಡ್ ಸಕ್ಸಸ್ ಫುಲ್ ಸ್ಟಾರ್ ನಟಿ ಆಲಿಯಾ ಭಟ್ ಮತ್ತೆ ಯಶಸ್ಸನ್ನ ತಮ್ಮದಾಗಿಸಿಕೊಂಡಿದ್ದಾರೆ. ಆಲಿಯಾ ಭಟ್ ಮತ್ತು ರಣ್ ಬೀರ್ ಕಪೂರ್ ಮುಖ್ಯ ಭೂಮಿಕೆಯ ಪ್ಯಾನ್ ಇಂಡಿಯಾ ಬ್ರಹ್ಮಾಸ್ತ್ರ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಭರ್ಜರಿ ಲೂಟಿ ಮಾಡುತ್ತಿದೆ. ಈ ಬ್ರಹ್ಮಾಸ್ತ್ರ ಸಿನಿಮಾ ಭಾರತೀಯ ಚಿತ್ರರಂಗದ ಬಹು ನಿರೀಕ್ಷೆ ಹುಟ್ಟು ಹಾಕಿದ್ದ ಸಿನಿಮಾಗಳಲ್ಲಿ ಒಂದಾಗಿದೆ. ಬಾಲಿವುಡ್ ಸಿನಿಮಾಗಳು ಸೋತು ಕಂಗೆಟ್ಟಿದ್ದ ಸಂಧರ್ಭದಲ್ಲಿ ಎನರ್ಜಿ ಬೂಸ್ಟರ್ ರೀತಿ ಬಂದದ್ದು ಈ ಬ್ರಹ್ಮಾಸ್ತ್ರ ಸಿನಿಮಾ. ಹಾಗಾಗಿ ತಿಂಗಳುಗಳ ಕಾಲ ಬ್ರಹ್ಮಾಸ್ತ್ರ ಚಿತ್ರದ ಪ್ರಚಾರ ಮಾಡಲಾಗಿತ್ತು. ಇಡೀ ಚಿತ್ರತಂಡದ ಜೊತೆ ನಟಿ ಆಲಿಯಾ ಭಟ್ ತಾವು ಗರ್ಭಿಣಿ ಆಗಿದ್ರು ಕೂಡ ಪ್ರಚಾರ ಕಾರ್ಯದಲ್ಲಿ ತೊಡಗಿಸಿಕೊಂಡಿದ್ರು. ಆದ್ರೇ ಬ್ರಹ್ಮಾಸ್ತ್ರ ಸಿನಿಮಾದ ಟ್ರೇಲರ್ ಅಂಡ್ ಸಾಂಗ್ ನೋಡಿ ಮಿಶ್ರ ಪ್ರತಿಕ್ರಿಯೆ ಕೇಳಿ ಬಂದಿತ್ತು. ಆದರೆ ಬ್ರಹ್ಮಾಸ್ತ್ರ ಸಿನಿಮಾ ನೋಡಿದ ಪ್ರೇಕ್ಷಕರು ಅಪಾರ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಪಂಚ ಭಾಷೆಗಳಲ್ಲಿ ತೆರೆಕಂಡ ಬ್ರಹ್ಮಾಸ್ತ್ರ ಸಿನಿಮಾ ಬರೋಬ್ಬರಿ 400 ಕೋಟಿಗೂ ಅಧಿಕ ವೆಚ್ಚದಲ್ಲಿ ಅದ್ದೂರಿಯಾಗಿ ನಿರ್ಮಾಣ ಆಗಿತ್ತು. ಸ್ಟಾರ್ ಸ್ಟೂಡಿಯೋಸ್, ಧರ್ಮ ಪ್ರೊಡಕ್ಷನ್, ಪ್ರೈಮ್ ಫೋಕಸ್ ಅಂಡ್ ಸ್ಟಾರ್ಲೈಟ್ ಪಿಕ್ಚರ್ಸ್ ಜಂಟಿಯಾಗಿ ಬ್ರಹ್ಮಾಸ್ತ್ರ ಸಿನಿಮಾ ನಿರ್ಮಾಣ ಮಾಡಿದ್ದಾರೆ. ಕರಣ್ ಜೋಹರ್, ಅಯನ್ ಮುಖರ್ಜಿ, ಅಪೂರ್ವ ಮೆಹ್ತಾ ಮತ್ತು ನಮಿತ್ ಮಲ್ಹೋತ್ರಾ ಜೊತೆಗೆ ನಾಯಕ ನಟ ರಣ್ ಬೀರ್ ಕಪೂರ್ ಕೂಡ ಬಂಡವಾಳ ಹೂಡಿಕೆ ಮಾಡಿದ್ದರು. ಬ್ರಹ್ಮಾಸ್ತ್ರ ಸಿನಿಮಾದಲ್ಲಿ ಬಾಲಿವುಡ್ ಬಿಗ್ ಬಿ ಅಮಿತಾಬ್ ಬಚ್ಚನ್, ಶಾರುಖ್ ಖಾನ್, ಅಕ್ಕಿನೇನಿ ನಾಗಾರ್ಜುನ, ಮೌನಿ ರಾಯ್, ಡಿಂಪಲ್ ಕಪಾಡಿಯಾ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಇದೀಗ ಬ್ರಹ್ಮಾಸ್ತ್ರ ಚಿತ್ರದ ಹೊಸದೊಂದು ಅಪ್ ಡೇಟ್ ಅಂದ್ರೆ. ಬ್ರಹ್ಮಾಸ್ತ್ರ ಸಿನಿಮಾವನ್ನು ದಕ್ಷಿಣ ಭಾರತದಲ್ಲಿ ಪ್ರೆಸೆಂಟ್ ಮಾಡಿದ್ದು ಖ್ಯಾತ ನಿರ್ದೇಶಕ ಎಸ್ಎಸ್ ರಾಜಮೌಳಿ ಅವರು.

ಬಾಲಿವುಡ್ ಸಿನಿಮಾವನ್ನ ಹೆಚ್ಚಾಗಿ ದಕ್ಷಿಣ ಭಾರತದಲ್ಲಿ ಪ್ರಚಾರ ಮಾಡುವುದಿಲ್ಲ. ಆದ್ರೇ ಬ್ರಹ್ಮಾಸ್ತ್ರ ಸಿನಿಮಾದ ಪ್ರಚಾರವನ್ನ ರಾಜಮೌಳಿ ಅವರ ನೇತೃತ್ವದಲ್ಲೇ ಭರ್ಜರಿ ಆಗಿ ಮಾಡಲಾಯಿತು. ರಾಜಮೌಳಿ ಅವರು ಸಾಮಾನ್ಯವಾಗಿ ತಾವು ಮಾಡೋ ಸಿನಿಮಾದ ಬಗ್ಗೆನೇ ಅಷ್ಟು ಕಾಳಜಿ ವಹಿಸಬೇಕಾಗಿರೋವಾಗ ಇನ್ನು ತಾವು ಪ್ರೆಸೆಂಟ್ ಮಾಡೋ ಸಿನಿಮಾದ ಬಗ್ಗೆ ಕಾಳಜಿ ವಹಿಸಿರಲ್ವ. ಖಂಡಿತಾ ಅವರು ಬ್ರಹ್ಮಾಸ್ತ್ರ ಸಿನಿಮಾವನ್ನ ನೋಡಿ ಅದು ಉತ್ತಮ ಸಿನಿಮಾ ಅಂತ ಅನಿಸಿದ್ದಕ್ಕಾಗಿಯೇ ಬ್ರಹ್ಮಾಸ್ತ್ರ ಸಿನಿಮಾವನ್ನ ಸೌತ್ ನಲ್ಲಿ ಪ್ರೆಸೆಂಟ್ ಮಾಡುವ ಜವಾಬ್ದಾರಿ ಹೊತ್ತುಕೊಂಡಿದ್ದರು. ಮೂಲಗಳ ಪ್ರಕಾರ ರಾಜಮೌಳಿ ಅವರು ಬ್ರಹ್ಮಾಸ್ತ್ರ ಸಿನಿಮಾವನ್ನ ಪ್ರೆಸೆಂಟ್ ಮಾಡಲು ಬರೋಬ್ಬರಿ ಹತ್ತು ಕೋಟಿಗೂ ಅಧಿಕ ಸಂಭಾವನೆಯನ್ನ ಪಡೆದಿದ್ದಾರೆ ಎನ್ನಲಾಗುತ್ತಿದೆ. ಇನ್ನು ಬಿಡುಗಡೆಯಾದ ನಾಲ್ಕೇ ದಿನದಲ್ಲಿ ಬ್ರಹ್ಮಾಸ್ತ್ರ ಸಿನಿಮಾ ಬರೋಬ್ಬರಿ 250 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿದೆ ಎಂದು ವರದಿ ಆಗುತ್ತಿವೆ.

Leave a Reply

%d bloggers like this: