ನಟಿ ವೈಷ್ಣವಿ ಗೌಡ ಅವರಿಗೆ ಸಂತಸದ ಸುದ್ದಿ ನೀಡಿದ ಅಗ್ನಿಸಾಕ್ಷಿ ತಂಡ

ಕನ್ನಡದ ಮತ್ತೊಂದು ಧಾರಾವಾಹಿ ಹಿಂದಿ ಭಾಷೆಗೆ ರಿಮೇಕ್ ಆಗುತ್ತಿದೆ. ಅದೂ ಕೂಡ ಕನ್ನಡ ಕಿರುತೆರೆಯಲ್ಲಿ ನಂಬರ್ ಒನ್ ಟಿ.ಆರ್.ಪಿ ಪಡೆದು ನಾಡಿನ ಮನೆ ಮನಗಳಲ್ಲಿ ಅಪಾರ ಜನಪ್ರಿಯತೆ ಗಳಿಸಿದ ಪ್ರಸಿದ್ದ ಧಾರಾವಾಹಿ ಹಿಂದಿ ಭಾಷೆಗೆ ರಿಮೇಕ್ ಆಗುತ್ತಿರೋದು ನಮ್ಮ ಕನ್ನಡಿಗರಿಗೆ ಹೆಮ್ಮೆಯ ವಿಷಯ ಅಂತಾನೇ ಹೇಳ್ಬೋದಾಗಿದೆ. ಹೌದು ಮೊದಲು ಕನ್ನಡ ಕಿರುತೆರೆಗೆ ಪರಭಾಷೆಯ ಧಾರಾವಾಹಿಗಳು ರೀಮೇಕ್ ಆಗಿ ಬರುತ್ತಿದ್ದವು. ಅಲ್ಲಿನ ಕಥೆಗಳು ನಮ್ಮ ನಾಡಿನ ನೇಟಿವಿಟಿಗೆ ತಕ್ಕ ಹಾಗೇ ಬದಲಾಯಿಸಿಕೊಂಡು ಬರುತ್ತಿದ್ದವು. ಆದರೆ ಈಗ ಜಮಾನ ಬದಲಾಗಿದೆ. ನಮ್ಮ ಕನ್ನಡ ಧಾರಾವಾಹಿ ಕಥೆಗಳು ಬೇರೆ ಭಾಷೆಗೆ ರಿಮೇಕ್ ಆಗುತ್ತಿವೆ. ಕೆಲವು ವರ್ಷಗಳಿಂದೀಚೆಗೆ ನಮ್ಮ ಕನ್ನಡ ಸಿನಿಮಾಗಳು ಸೇರಿದಂತೆ ನಮ್ಮ ಕನ್ನಡ ಧಾರಾವಾಹಿಗಳು ಅದ್ದೂರಿ ಮೇಕಿಂಗ್ ಗುಣಮಟ್ಟದ ಕಥಾ ಹಂದರ ಮೂಲಕ ಯಾವ ಭಾಷೆಯ ಧಾರಾವಾಹಿಗೂ ಸಹ ಕಮ್ಮಿ ಇಲ್ಲ ಎಂಬಂತೆ ಜನ ಮೆಚ್ಚುಗೆ ಪಡೆಯುತ್ತಿವೆ.

ಈಗಾಗಲೇ ಕನ್ನಡದ ಜನಪ್ರಿಯ ಧಾರಾವಾಹಿಗಳಾದ ಕನ್ನಡತಿ, ನಾಗಿಣಿ, ಗಿಣಿರಾಮ ಧಾರಾವಾಹಿಗಳು ಹಿಂದಿ ಭಾಷೆಗೆ ರಿಮೇಕ್ ಆಗಿವೆ. ಇದೀಗ ಈ ಸಾ ಲಿಗೆ ಮತ್ತೊಂದು ಧಾರಾವಾಹಿ ಸೇರ್ಪಡೆಗೊಂಡಿದೆ. ಹೌದು ಕಿರುತೆರೆಯಲ್ಲಿ ನಟಿ ವೈಷ್ಣವಿ ಅವರಿಗೆ ಬ್ರೇಕ್ ಕೊಟ್ಟು ನಾಡಿನಾದ್ಯಂತ ಅಪಾರ ಜನಪ್ರಿಯತೆ ತಂದುಕೊಟ್ಟ ಧಾರಾವಾಹಿ ಅಗ್ನಿಸಾಕ್ಷಿ ಧಾರಾವಾಹಿ ಹಿಂದಿ ಭಾಷೆಗೆ ರಿಮೇಕ್ ಆಗುತ್ತಿದೆ. ಹಿಂದಿಯಲ್ಲಿ ಏಕ್ ಸಮ್ ಜೊತಾ ಎಂಬ ಶೀರ್ಷಿಕೆಯಲ್ಲಿ ಅಗ್ನಿಸಾಕ್ಷಿ ಧಾರಾವಾಹಿ ಪ್ರಸಾರವಾಗಲು ಸಿದ್ದವಾಗುತ್ತಿದೆ. ನಟಿ ವೈಷ್ಣವಿ ನಿರ್ವಹಿಸಿದ ಸನ್ನಿಧಿ ಪಾತ್ರವನ್ನ ಹಿಂದಿಯಲ್ಲಿ ಹೊಸ ಪ್ರತಿಭೆ ಜೀವಿಕಾ ರಾಣಿ ಅವರು ನಿರ್ವಹಿಸುತ್ತಿದ್ದಾರೆ. ಅದೇ ರೀತಿಯಾಗಿ ವಿಜಯ್ ಸೂರ್ಯ ನಿರ್ವಹಿಸಿದ ಸಿದ್ದಾರ್ಥ್ ಪಾತ್ರದಲ್ಲಿ ನಟ ಸಾತ್ವಿಕ್ ಭೋಸಲೆ ಕಾಣಿಸಿಕೊಳ್ಳುತ್ತಿದ್ದಾರೆ. ಈ ಏಕ್ ಸಮ್ ಜೊತಾ ಪ್ರೇಮ ಮಧುರಮಯ ಧಾರಾವಾಹಿ ಕಲರ್ಸ್ ವಾಹಿನಿಯಲ್ಲಿ ಪ್ರಸಾರವಾಗಲಿದೆ. ಇನ್ನು ಕನ್ನಡದಲ್ಲಿ ಮೋಡಿ ಮಾಡಿದ್ದ ಅಗ್ನಿಸಾಕ್ಷಿ ಧಾರಾವಾಹಿ ಹಿಂದಿಯ ವೀಕ್ಷಕರಿಗೆ ಯಾವ ರೀತಿ ಮೋಡಿ ಮಾಡಲಿದೆ ಅನ್ನೋದನ್ನ ಮುಂದಿನ ದಿನಗಳಲ್ಲಿ ಕಾದು ನೋಡಬಹುದಾಗಿದೆ.

Leave a Reply

%d bloggers like this: