ನಟಿ ಉಮಾಶ್ರೀ ಅವರ ಮಗಳು ಹೇಗಿದ್ದಾರೆ ಗೊತ್ತಾ? ಮೊದಲ ಬಾರಿಗೆ ನೋಡಿ ಒಮ್ಮೆ

ಕನ್ನಡ ಚಿತ್ರರಂಗದ ಪ್ರತಿಭಾನ್ವಿತ ಕಲಾವಿದೆ ಉಮಾಶ್ರೀ ಅವರ ಬದುಕು ಸಾಧನೆ ಪ್ರತಿಯೊಬ್ಬರಿಗೂ ಕೂಡ ಆದರ್ಶ ಮಾದರಿಯಾಗಿದೆ ಅಂದರೆ ತಪ್ಪಾಗಲಾರದು. ಒಂಟಿ ಪೋಷಕರಿರುವ ಮಕ್ಕಳ ಭವಿಷ್ಯ ಕಷ್ಟಕರವಾಗಿರುತ್ತದೆ. ಬಣ್ಣದ ಬದುಕನ್ನ ನೆಚ್ಚಿಕೊಂಡು ತನ್ನಿಬ್ಬರ ಮಕ್ಕಳನ್ನ ಸಾಕಿ ಸಲುಹಿ ನಕ್ಷತ್ರ ತಾರೆಯಾಗಿ ಮಿಂಚಿ,ರಾಷ್ಟ್ರ ಪ್ರಶಸ್ತಿ ಪಡೆದು ಸಾಧನೆ ಮಾಡಿದ್ದಾರೆ ನಟಿ ಉಮಾಶ್ರೀ. ಕೇವಲ ನಟನಾ ಕ್ಷೇತ್ರ ಮಾತ್ರ ಅಲ್ಲದೆ ರಾಜಕೀಯ ಕ್ಷೇತ್ರದಲ್ಲಿಯೂ ಕೂಡ ತೊಡಿಗಿಸಿಕೊಂಡು ಸಚಿವೆಯಾಗಿ ಸೇವೆ ಸಲ್ಲಿಸಿದ್ದಾರೆ. ಉಮಾಶ್ರೀ ಅವರ ಬಗ್ಗೆ ತಿಳಿಯುವುದಾದರೆ ಇವರು ತಮಕೂರು ಜಿಲ್ಲೆ ನೊಣವಿನಕೆರೆ ಎಂಬ ಗ್ರಾಮದಲ್ಲಿ ಜನಿಸುತ್ತಾರೆ. ಕಡು ಬಡತನದ ಕುಟುಂಬದಲ್ಲಿ ಜನಿಸಿದ ಉಮಾಶ್ರೀ ಅವರಿಗೆ ರಂಖಭೂಮಿ ಆಶ್ರಯ ನೀಡುತ್ತದೆ‌. ನಾಟಕಗಳಲ್ಲಿ ಅ‌ಭಿನಯಿಸುತ್ತಲೇ 1980 ರಲ್ಲಿ ಬಂಗಾರದ ಜಿಂಕೆ ಎಂಬ ಸಿನಿಮಾದ ಮೂಲಕ ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಡುತ್ತಾರೆ ನಟಿ ಉಮಾಶ್ರೀ.

ಬಂಗಾರದ ಜಿಂಕೆ ಚಿತ್ರದ ಪುಟ್ಟ ಪಾತ್ರವೊಂದರಲ್ಲಿ ಗಮನ ಸೆಳೆದಿದ್ದ ಉಮಾಶ್ರೀ ಅವರಿಗೆ ಉತ್ತಮ ಅವಕಾಶ ದೊರೆತು ಹೆಸರು ತಂದು ಕೊಟ್ಟದ್ದು ನೀಡಿದ್ದು ಕಾಶೀನಾಥ್ ಅವರ ಅನುಭವ ಸಿನಿಮಾ. ಅನುಭವ ಚಿತ್ರದಲ್ಲಿ ಉಮಾಶ್ರೀ ಅವರ ಬೋಲ್ಡ್ ನಟನೆಗೆ ಅಂದಿನ ದಿನಮಾನಗಳಲ್ಲಿ ಅಪಾರ ಪ್ರಶಂಸೆ ವ್ಯಕ್ತವಾಗಿತ್ತು. ಇವರ ನಟನೆಗೆ ತಕ್ಕಂತೆ ಈ ಚಿತ್ರವಾದ ಬಳಿಕ ಅನೇಕ ಸಾಲು ಸಾಲು ಸಿನಿಮಾಗಳು ಇವರಿಗೆ ಸಿಕ್ಕಿತು. ವಿಶೇಷ ಅಂದರೆ ನಟಿ ಉಮಾಶ್ರೀ ಅವರು ಮತ್ತು ಎನ್.ಎಸ್.ರಾವ್ ಅವರ ಜೋಡಿ ಸೂಪರ್ ಹಿಟ್ ಅಗಿತ್ತು. ಇವರಿಬ್ಬರು ಜೊತೆಯಾಗಿ ನಟಿಸಿದ್ದಾರೆ ಅಂದರೆ ಆ ಚಿತ್ರ ಸೂಪರ್ ಹಿಟ್ ಎನ್ನುವಂತಿತ್ತು. ರವಿ ಚಂದ್ರನ್ ಅವರ ಪುಟ್ನಂಜ ಸಿನಿಮಾದಲ್ಲಿನ ಪುಟ್ಮಲ್ಲಿ ಪಾತ್ರ, ದಿಗ್ಗಜರು ಚಿತ್ರದಲ್ಲಿನ ವಿಷ್ಣು ವರ್ಧನ್ ಅವರ ತಾಯಿಯ ಪಾತ್ರ ಇಂದಿಗೂ ಕೂಡ ಕನ್ನಡ ಸಿನಿ ಪ್ರೇಕ್ಷಕರ ಮನದಲ್ಲಿ ಶಾಶ್ವತವಾಗಿ ಉಳಿದಿದೆ.

ನಟಿ ಉಮಾಶ್ರೀ ಅವರ ಅಧ್ಬುತ ನಟನೆಗೆ ಸಾಕ್ಷಿಯಾಗಿ ಅವರಿಗೆ ಗುಲಾಬಿ ಟಾಕೀಸ್ ಚಿತ್ರದ ನಟನೆಗೆ ರಾಷ್ಟ್ರ ಪ್ರಶಸ್ತಿ ಕೂಡ ಲಭಿಸಿದೆ. ಇನ್ನೂ ರಾಜಕೀಯವಾಗಿ ಉಮಾಶ್ರೀ ಅವರ ಸೇವೆ ಗಮನಿಸುವುದಾದರೆ 2013 ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಗೆದ್ದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವೆಯಾಗಿ ಕಾರ್ಯ ನಿರ್ವಹಿಸಿದ್ದಾರೆ. ಉಮಾಶ್ರೀ ಅವರಿಗೆ ಇಬ್ಬರು ಮಕ್ಕಳಿದ್ದಾರೆ. ಒಬ್ಬ ಮಗ ವಿಜಯ್ ಕುಮಾರ್ ಇವರು ವಕೀಲರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇನ್ನು ಮಗಳು ದಂತ ವೈದ್ಯೆಯಾಗಿದ್ದಾರೆ. ಒಟ್ಟಾರೆಯಾಗಿ ಬಡ ಕುಟುಂಬದಲ್ಲಿ ಹುಟ್ಟಿ ಬೆಳೆದು ನಾಟಕ ಸಿನಿಮಾದಲ್ಲಿ ನಟಿಸಿ ಗಂಡನಿಲ್ಲದೆ ಒಂಟಿ ದಿಟ್ಟ ಹೆಣ್ಣಾಗಿ ತನ್ನಿಬ್ಬರ ಮಕ್ಕಳನ್ನ ಸಾಕಿ ಸಲುಹಿ ಇಂದು ಸಮಾಜದಲ್ಲಿ ಉನ್ನತ ಸ್ದಾನ ಮಾನ ದೊರಕಿಸಿಕೊಟ್ಟು ತಾವು ಅನೇಕ ಒಂಟಿ ಮಹಿಳೆಯರಿಗೆ ಆದರ್ಶವಾಗಿ ನಿಂತಿದ್ದಾರೆ.

Leave a Reply

%d bloggers like this: