ನಟಿ ಸುಮಲತಾ ಅವರ ತಂದೆ ಯಾರು ಗೊತ್ತಾ? ಇಡೀ ಚಿತ್ರರಂಗ ಅವರ ಕೈಯಲ್ಲಿ ಇತ್ತು

ಕನ್ನಡ ಹಾಗೂ ತೆಲುಗು ಚಿತ್ರರಂಗದ ಸ್ಟಾರ್ ನಟಿ,ಸಂಸದೆ ಸುಮಲತಾ ಅಂಬರೀಶ್ ಯಾರಿಗೆ ಗೊತ್ತಿಲ್ಲ ಹೇಳಿ.ಕನ್ನಡ, ತೆಲುಗು,ತಮಿಳು,ಮಲಯಾಳಂ,ಹಿಂದಿ ಸೇರಿದಂತೆ ಬರೋಬ್ಬರಿ 220 ಸಿನಿಮಾಗಳಲ್ಲಿ ಮಿಂಚಿದ ನಟಿ ಸುಮಲತಾ ಅವರು.ಪತಿ ಅಂಬರೀಶ್ ಅವರ ಸ್ಥಾನವನ್ನು ತುಂಬಲು ಪ್ರಯತ್ನಿಸುತ್ತಿರುವ ಸುಮಲತಾ ಅವರು ಭಾರೀ ಸುದ್ದಿಯಲ್ಲಿದ್ದಾರೆ.ಅವರ ತವರುಮನೆಯ ಮಾಹಿತಿ ಬಹಳ ಜನರಿಗೆ ತಿಳಿದಿಲ್ಲ.ಅವರ ತಂದೆ ಯಾರು ಎಲ್ಲಿಯವರು ನೋಡೋಣ ಬನ್ನಿ.ಸುಮಲತಾ ಅವರ ತಂದೆಯವರು ಕೂಡ ಆಗ ಸ್ಟಾರ್ ಆಗಿದ್ದರು.

ಸುಮಲತಾ ಅವರು 1963ರಲ್ಲಿ ಮದನ್ ಮೋಹನ್ ಹಾಗೂ ರೂಪ ಅವರ ನಾಲ್ಕನೆಯ ಮಗುವಾಗಿ ಜನಿಸಿದರು.ಸುಮಲತಾ ಅವರ ತಂದೆ ತಾಯಿಗಳಿಗೆ ಐದು ಜನ ಮಕ್ಕಳು.ಮೊದಲನೆಯವರು ರೇಣುಕಾ,ಎರಡನೆಯವರು ರೋಹಿಣಿ,ಮೂರನೆಯವರು ರಾಜೇಂದ್ರ ಪ್ರಸಾದ್,ನಾಲ್ಕನೆಯವರು ಸುಮಲತಾ,ಕೊನೆಯವರು ಕೃಷ್ಣಪ್ರಿಯ.ಸುಮಲತಾ ಅವರ ತಂದೆ ಮದನ್ ಮೋಹನ್ ಅವರು ಆಗಿನ ಸಮಯದಲ್ಲೇ ವಿಎಫ್ಎಕ್ಸ್ ಪರಿಣಿತರು‌.ಯುಕೆ ಇಂದ ತರಬೇತಿ ಪಡೆದು ಬಂದ ಏಕೈಕ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು ಮದನ್ ಮೋಹನ್.

ಅಂದಿನ ಸಮಯದಲ್ಲಿ ವಿಎಫ್ಎಕ್ಸ್ ಹಾಗೂ ಸಿರಿ ಕೆಲಸಗಳನ್ನು ಸ್ಪೆಷಲ್ ಎಫೆಕ್ಟ್ಸ್ ಅಂತ ಕರೆಯುತ್ತಿದ್ದರು.ಅಂದಿನ ದಿನಗಳಲ್ಲಿ ಹಿಂದಿ ಸೇರಿದಂತೆ ತಮಿಳಿನ ಅನೇಕ ಚಿತ್ರಗಳಿಗೆ ಟೈಟಲ್ ಮತ್ತು ಸ್ಪೆಷಲ್ ಎಫೆಕ್ಟ್ಸ್ ಕೆಲಸ ಮಾಡುತ್ತಿದ್ದರು.ಅಂದಿನ ಸಮಯದಲ್ಲಿ ಈ ಕೆಲಸದಲ್ಲಿ ಪರಿಣತಿ ಹೊಂದಿದ್ದವರು ಚಿತ್ರರಂಗದಲ್ಲಿ ಬೇರೆ ಯಾರೂ ಇರಲಿಲ್ಲ.ಮದನ್ ಮೋಹನ್ ಏಕೈಕ ವ್ಯಕ್ತಿಯಾಗಿದ್ದರು.ಹೀಗಾಗಿ ಮದನ್ ಮೋಹನ್ ಅವರು ಆಗಿನ ತಾಂತ್ರಿಕ ವರ್ಗದ ಸ್ಟಾರೇ ಆಗಿದ್ದರು.ಸುಮಲತಾ ಅವರಿಗೆ ಹಾಗೂ ಅವರ ಅಭಿಮಾನಿಗಳಿಗೆ ಇದು ಹೆಮ್ಮೆಯ ವಿಷಯ ಅಲ್ಲವೇ.

Leave a Reply

%d bloggers like this: