ನಟಿ ಸೋನಾಕ್ಷಿ ಸಿನ್ಹಾ ಜೊತೆ ಸೀಕ್ರೆಟ್ ಆಗಿ ಮದುವೆ ಆದ ಸಲ್ಮಾನ್ ಖಾನ್

ಬಾಲಿವುಡ್ ಬ್ಯಾಡ್ ಬಾಯ್ ಸ್ಟಾರ್ ನಟಿಯೊಂದಿಗೆ ಗುಟ್ಟಾಗಿ ಮದುವೆ ಆಗಿ ಸಂಸಾರ ಮಾಡುತ್ತಿದ್ದಾರಾ‌‌..! ಹೌದು ಇದೀಗ ಇದೊಂದು ಹೊಸ ಸುದ್ದಿ ಹಿಂದಿ ಚಿತ್ರರಂಗದ ಗಲ್ಲಿ ಗಲ್ಲಿಗಳಲ್ಲಿ ಜೋರಾಗಿ ಸದ್ದು ಮಾಡುತ್ತಿದೆ. ಅದಕ್ಕೆ ಕಾರಣ ಸೋಶಿಯಲ್ ಮೀಡಿಯಾದಲ್ಲಿ ಬಂದಂತಹ ಒಂದು ಜೋಡಿ ಫೋಟೋ. ಈ ಜೋಡಿಯಲ್ಲಿ ಕಾಣಿಸಿಕೊಂಡಿದ್ದು ಬೇರಾವುದೂ ಅಲ್ಲ. ಬಾಲಿವುಡ್ ಬಾಕ್ಸ್ ಆಫೀಸ್ ಸುಲ್ತಾನ್ ಖ್ಯಾತಿಯ ನಟ ಸಲ್ಮಾನ್ ಖಾನ್ ಅವರ ಫೋಟೋ. ನಟ ಸಲ್ಮಾನ್ ಖಾನ್ ಐವತ್ತು ವರ್ಷ ದಾಟಿದರೂ ಕೂಡ ವೈವಾಹಿಕ ಜೀವನಕ್ಕೆ ಹೆಜ್ಜೆ ಇಟ್ಟಿಲ್ಲ. ಅದಕ್ಕೆ ಕಾರಣ ಹಲವು ಇರಬಹುದು. ಆದರೆ ನಟ ಸಲ್ಮಾನ್ ಖಾನ್ ಈಗಾಗಲೇ ಅನೇಕ ಸ್ಟಾರ್ ನಟಿಯರೊಂದಿಗೆ ಡೇಟಿಂಗ್ ನಲ್ಲಿದದ್ದು ಮಾತ್ರ ಇದೀಗ ಗುಟ್ಟಾಗಿ ಉಳಿದಿಲ್ಲ. ಇನ್ನು ಅನೇಕ ಬಾರಿ ಸಲ್ಮಾನ್ ಖಾನ್ ಮದುವೆಯ ಬಗ್ಗೆ ಸುದ್ದಿ ಆಗಿದೆ. ಇನ್ನೇನು ಆ ನಟಿಯ ಜೊತೆ ಮದುವೆ ಆಗಿ ಬಿಡುತ್ತಾರೆ ಎಂಬುವಷ್ಟರಲ್ಲಿ ಬ್ರೇಕಪ್ ಸುದ್ದಿಹೊರ ಬೀಳುತ್ತದೆ.

ಹೀಗೆ ಅನೇಕ ಬಾರಿ ಸಲ್ಲು ಬಾಯ್ ತಮ್ಮ ಸಿನಿಮಾಗಳಷ್ಟೇ ತಮ್ಮ ಮದುವೆಯ ವಿಚಾರವಾಗಿ ಸುದ್ದಿಯಾಗಿದ್ದಾರೆ. ಇದೀಗ ಮತ್ತೆ ನಟ ಸಲ್ಮಾನ್ ಖಾನ್ ಮದುವೆಯ ವಿಚಾರದಲ್ಲಿ ಸುದ್ದಿ ಆಗಿದ್ದಾರೆ. ಅದಕ್ಕೆ ಕಾರಣ ಅಂದರೆ ಇತ್ತೀಚೆಗೆ ಸೋಶಿಯಲ್ ಮೀಡಿಯಾದಲ್ಲಿ ನಟ ಸಲ್ಮಾನ್ ಖಾನ್ ಮತ್ತು ಸ್ಟಾರ್ ನಟಿ ಆಗಿರುವ ಸೋನಾಕ್ಷಿ ಸಿನ್ಮಾ ಅವರೊಟ್ಟಿಗೆ ಸತಿ-ಪತಿಗಳಂತೆಕಾಣಿಸಿಕೊಂಡಡಿರುವ ಫೋಟೋ. ಇದನ್ನ ಕಂಡ ಅನೇಕರು ನಟ ಸಲ್ಮಾನ್ ಖಾನ್ ನಟಿ ಸೋನಾಕ್ಷಿ ಸಿನ್ಮಾ ಅವರನ್ನ ಮದುವೆ ಆಗಿ ದಾಂಪತ್ಯ ಜೀವನ ನಡೆಸುತ್ತಿದ್ದಾರೆ ಎಂದು ತಿಳಿದುಕೊಂಡಿದ್ದಾರೆ. ಆದರೆ ಅಸಲಿಗೆ ಈ ಫೋಟೋ ಫೇಸ್ ಆಗಿದ್ದು, ಯಾರದ್ದೋ ಫೋಟೋಗಳಿಗೆ ಸಲ್ಮಾನ್ ಖಾನ್ ಮತ್ತು ಸೋನಾಕ್ಷಿ ಸಿನ್ಮಾ ಅವರ ಫೋಟೋ ಸೇರಿಸಿದ್ದಾರೆ. ನಟಿ ಸೋನಾಕ್ಷಿ ಸಿನ್ಹಾ ಅವರು 2010.ರಲ್ಲಿ ತೆರೆಕಂಡ ದಬಾಂಗ್ ಚಿತ್ರದಲ್ಲಿ ಸಲ್ಮಾನ್ ಖಾನ್ ಅವರ ಜೋಡಿಯಾಗಿ ನಟಿಸುವ ಮೂಲಕ ಬಾಲಿವುಡ್ ಅಂಗಳಕ್ಕೆ ಹೆಜ್ಜೆ ಇಟ್ಟಿದರು.

ಈ ದಬಾಂಗ್ ಸಿನಿಮಾ ಸೂಪರ್ ಹಿಟ್ ಆಯಿತು. ನಟಿಸಿದ ಮೊದಲ ಚಿತ್ರವೇ ಯಶಸ್ಸು ಪಡೆದ ನಂತರ ನಟಿ ಸೋನಾಕ್ಷಿ ಸಿನ್ಮಾ ಅವರಿಗೆ ಹಿಂದಿ ಚಿತ್ರರಂಗದಲ್ಲಿ ಅವಕಾಶಗಳ ಸುರಿಮಳೆಯೇ ಹರಿದು ಬಂತು. ಇನ್ನು ಸೋನಾಕ್ಷಿ ಸಿನ್ಮಾ ಅವರು ನಟ ಸಲ್ಮಾನ್ ಖಾನ್ ಅವರೊಟ್ಟಿಗೆ ಉತ್ತಮ ಬಾಂಧವ್ಯ ಹೊಂದಿದ್ದಾರೆ. ಅಷ್ಟೇ ಅಲ್ಲದೆ ಅವರ ಕುಟುಂಬದ ಅನೇಕ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿರುತ್ತಾರೆ. ಅಂತೆಯೇ ಹಾಗಾಗಿ ಜೊತೆಯಾಗಿ ಇಬ್ಬರೂ ಕೂಡ ಜೊತೆಯಾಗಿ ಕಾಣಿಸಿಕೊಳ್ಳುತ್ತಿರುತ್ತಾರೆ. ಇನ್ನು ನಟಿ ಸೋನಾಕ್ಷಿ ಸಿನ್ಹಾ ಅವರಿಗೆ ನೆಟ್ಟಿಗನೊಬ್ಬ ಸಲ್ಮಾನ್ ಖಾನ್ ಅವರು ನಿಮಗೆ ತುಂಬಾ ಆತ್ಮೀಯ ಸ್ನೇಹಿತರು. ಅವರು ಯಾಕೆ ಇನ್ನು ಮದುವೆ ಆಗಿಲ್ಲ ಎಂಬ ಪ್ರಶ್ನೆ ಕೇಳುತ್ತಾರೆ. ಅದಕ್ಕೆ ಸಲ್ಮಾನ್ ಖಾನ್ ಅವರಿಗೆ ಮದುವೆ ಆಗುವ ಬಗ್ಗೆ ನನಗೆ ಗೊತ್ತಿಲ್ಲ. ಆದರೆ ಅವರು ತಮ್ಮ ಸಿನಿಮಾಗಳಲ್ಲಿ ಸಖತ್ ಬಿಝಿ಼ ಆಗಿದ್ದಾರೆ. ಅವರು ತಮ್ಮ ಸಿಂಗಲ್ ಲೈಫಲ್ಲಿ ತುಂಬಾ ಚೆನ್ನಾಗಿದ್ದಾರೆ ಎಂದು ಪ್ರತಿಕ್ರಿಯೆ ನೀಡಿದ್ದಾರೆ.

Leave a Reply

%d bloggers like this: