ನಟಿ ಸಮಂತಾ ಜೊತೆ ಡೇಟಿಂಗ್ ಮಾಡುತ್ತಿದ್ದಾರೆ ಬಾಲಿವುಡ್ ಬಾಕ್ಸ್ ಆಫೀಸ್ ಸುಲ್ತಾನ್…!

ನಟಿ ಸಮಂತಾ ಜೊತೆ ಡೇಟಿಂಗ್ ಮಾಡುತ್ತಿದ್ದಾರಂತೆ ಬಾಲಿವುಡ್ ಬಾಕ್ಸ್ ಆಫೀಸ್ ಸುಲ್ತಾನ್…! ಸಿನಿಮಾ ಸೆಲೆಬ್ರಿಟಿಗಳು ಆಂದಾಕ್ಷಣ ಅವರ ಸಿನಿಮಾಗಳ ಬಗ್ಗೆ ಹೆಚ್ಚು ಕುತೂಹಲ ಇದ್ದೇ ಇರುತ್ತದೆ. ಅಭಿಮಾನಿಗಳಿಗೆ ಅದಕ್ಕಿಂತ ಹೆಚ್ಚು ಕುತೂಹಲ ಅಂದರೆ ಅವರ ವೈಯಕ್ತಿಕ ಬದುಕಿನ ಬಗ್ಗೆ ಕ್ಯೂರಿಯಾಸಿಟಿ ಇರುತ್ತದೆ. ಇನ್ನು ಬಾಲಿವುಡ್ ನಲ್ಲಿ ಸೆಲೆಬ್ರಿಟಿಗಳ ಬಗ್ಗೆ ಗಾಸಿಪ್ ಗಳ ಬಗ್ಗೆ ಕೇಳ್ಬೇಕಾ. ಬಿ- ಟೌನ್ ಅಂಗಳದ ಗಲ್ಲಿ ಗಲ್ಲಿ ಗಳಲ್ಲಿ ಅನೇಕ ಸ್ಟಾರ್ ನಟ-ನಟಿಯರ ಬಗ್ಗೆ ಗಾಸಿಪ್ ಗಳು ಕೇಳಿ ಬರುತ್ತಲೇ ಇರುತ್ತವೆ. ಅಂತೆಯೇ ತನ್ನ ಸಿನಿ ವೃತ್ತಿ ಜೀವನದಲ್ಲಿ ಗಾಸಿಪ್ ಗಳನ್ನ, ಹೀರೋಯಿನ್ ಗಳ ಜೊತೆ ತನ್ನ ಹೆಸರಿನೊಂದಿಗೆ ತಳುಕು ಹಾಕಿಸಿಕೊಂಡ ಸದಾ ಸುದ್ದಿಯಲ್ಲಿರುವ ನಟ ಅಂದರೆ ಅದು ಸಲ್ಮಾನ್ ಖಾನ್. ಐವತ್ತು ವರ್ಷ ದಾಟಿದರು ಕೂಡ ಈಗಲೂ ಸಹ ಯಂಗ್ ಅಂಡ್ ಎನರ್ಜೆಟಿಕ್ ಆಗಿ ಬ್ಯಾಚ್ಯೂಲರ್ ಆಗಿ ಲೈಫ್ ಲೀಡ್ ಬರುತ್ತಿರುವ ಹಿಂದಿ ಚಿತ್ರರಂಗದ ಬಹು ಬೇಡಿಕೆಯ, ಅತ್ಯಂತ ಜನಪ್ರಿಯ ಸ್ಟಾರ್ ನಟರಾಗಿರುವ ಬಾಲಿವುಡ್ ಬಾಕ್ಸ್ ಆಫೀಸ್ ಸುಲ್ತಾನ್ ಖ್ಯಾತಿಯ ಸಲ್ಮಾನ್ ಖಾನ್.

ಇದೀಗ ಮತ್ತೆ ಸ್ಟಾರ್ ನಟಿಯೊಬ್ಬರ ಜೊತೆ ಡೇಟಿಂಗ್ ಮಾಡುತ್ತಿರುವ ವಿಚಾರದ ಬಗ್ಗೆ ಭಾರಿ ಸುದ್ದಿಯಾಗಿದ್ದಾರೆ. ನಟ ಸಲ್ಮಾನ್ ಖಾನ್ ಅವರೊಟ್ಟಿಗೆ ಹಿಂದಿಯ ಅನೇಕ ಜನಪ್ರಿಯ ನಟಿಯರು ಪ್ರೀತಿ- ಪ್ರೇಮ ಪ್ರಣಯ ಅಂತ ತಿರುಗಾಡಿರುವುದು ಈಗ ಇತಿಹಾಸ. ಅವರಲ್ಲಿ ಈಗಾಗಲೇ ಬಹುತೇಕ ನಟಿಯರು ತಮ್ಮ ಇಷ್ಟದ ಬಾಳ ಸಂಗಾತಿಯನ್ನ ಆಯ್ಕೆ ಮಾಡಿಕೊಂಡು ದಾಂಪತ್ಯ ಜೀವನಕ್ಕೆ ಹೆಜ್ಜೆ ಇಟ್ಟಿದ್ದಾರೆ. ಆದರೆ ಸ್ಟಿಲ್ ಬ್ಯಾಚ್ಯೂಲರ್ ಆಗಿರುವ ನಟ ಸಲ್ಮಾನ್ ಖಾನ್ ಅವರು ಆಗಾಗ ಸ್ಟಾರ್ ನಟಿರೊಟ್ಟಿಗೆ ಡೇಟಿಂಗ್ ನಡೆಸುತ್ತಿದ್ದಾರೆ ಎಂಬ ಸುದ್ದಿ ಮಾತ್ರ ಕೇಳಿ ಬರುತ್ತಿರುತ್ತದೆ. ಅದೇ ರೀತಿಯಾಗಿ ನಟ ಸಲ್ಮಾನ್ ಖಾನ್ ಜೊತೆ ಇತ್ತೀಚೆಗೆ ಕೇಳಿ ಬರುತ್ತಿರುವ ನಟಿಯ ಹೆಸರು ಸಮಂತಾ. ದಕ್ಷಿಣ ಭಾರತದ ಸುಪ್ರಸಿದ್ದ ತೆಲುಗು ನಟಿ ಸಮಂತಾ ಅವರು ಇತ್ತೀಚಿಗೆ ತಾನೇ ನಟ ನಾಗಚೈತನ್ಯ ಅವರಿಗೆ ವಿಚ್ಚೇದನ ನೀಡಿ ಸಿಂಗಲ್ ಲೈಫ್ ಲೀಡ್ ಮಾಡುತ್ತಿದ್ದಾರೆ.

ದಕ್ಷಿಣ ಭಾರತದ ಸಿನಿಮಾ ರಂಗದಲ್ಲಿ ಅಪಾರ ಜನಪ್ರಿಯತೆಯ ಜೊತೆಗೆ ಬಹು ಬೇಡಿಕೆಯ ನಟಿಯಾಗಿ ಗುರುತಿಸಿಕೊಂಡಿರುವ ಸಮಂತಾ ಅವರೊಟ್ಟಿಗೆ ಸಲ್ಮಾನ್ ಖಾನ್ ಸಂಬಂಧ ಹೊಂದಿದ್ದಾರೆ ಎಂಬ ವಿಚಾರ ಸೋಶಿಯಲ್ ಮೀಡಿಯಾ ಸೇರಿದಂತೆ ಭಾರತೀಯ ಚಿತ್ರರಂಗದ ಎಲ್ಲೆಡೆ ಭಾರಿ ಸುದ್ದಿ ಆಗುತ್ತಿದೆ. ಇದರ ಬಗ್ಗೆ ತೆಲುಗು ಸ್ಟಾರ್ ನಟಿ ಸಮಂತಾ ಅವರು ಇದೆಲ್ಲಾ ಶುದ್ದ ಸುಳ್ಳು ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಆದರೆ ಅಸಲಿಗೆ ಬಾಲಿವುಡ್ ಸ್ಟಾರ್ ನಟ ಸಲ್ಮಾನ್ ಖಾನ್ ಡೇಟಿಂಗ್ ನಡೆಸುತ್ತಿರುವುದು ಭಾರತದ ನಟಿ ಸಮಂತಾ ಅವರ ಜೊತೆ ಅಲ್ಲ. ನಟ ಸಲ್ಮಾನ್ ಖಾನ್ ಸಂಬಂಧ ಹೊಂದಿರುವುದು ಹಾಲಿವುಡ್ ಮೂಲದ ನಟಿ ಸಮಂತಾ ಎಂಬುವರೊಟ್ಟಿಗೆ. ಆ ನಟಿಯ ಹೆಸರು ಕೂಡ ಸಮಂತಾ ಎಂದು ಇದ್ದುದ್ದರಿಂದ ಬಹುತೇಕರು ತೆಲುಗಿನ ನಟಿ ಸಮಂತಾ ಅವರ ಫೋಟೋ ಜೊತೆ ಸಲ್ಮಾನ್ ಖಾನ್ ಫೋಟೋ ಹಾಕಿ ರಾದ್ದಾಂತ ಮಾಡಿದ್ದಾರೆ.