ನಟಿ ಮಾರಿಮುತ್ತು ಅವರ ಮೊಮ್ಮಗಳು ಯಾರು ಗೊತ್ತಾ? ನೋಡಿ ಒಮ್ಮೆ

ಸ್ಯಾಂಡಲ್ ವುಡ್ ಮಾರಿ ಮುತ್ತು ಮೊಮ್ಮಗಳು ಇತ್ತೀಚೆಗೆ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಫ್ಯಾನ್ ಫಾಲೋವರ್ಸ್ ಹೊಂದುತ್ತಿದ್ದಾರೆ.ಹೌದು ರಿಯಲ್ ಸ್ಟಾರ್ ಉಪೇಂದ್ರ ಅಭಿನಯದಲ್ಲಿ ಮೂಡಿಬಂದ ಸೂಪರ್ ಹಿಟ್ ಸಿನಿಮಾ ಉಪೇಂದ್ರ ಚಿತ್ರದಲ್ಲಿ ಮಾರಿಮುತ್ತು ಎಂಬ ಪಾತ್ರದ ಮೂಲಕ ಖಳ ನಾಯಕಿಯಾಗಿ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ನಟಿ ಸರೋಜಮ್ಮ ಅವರ ಮೊಮ್ಮಗಳು ಜಯಶ್ರೀ ಕೂಡ ಕನ್ನಡ ಸಿನಿಮಾ ಲೋಕದಲ್ಲಿ ಮಿಂಚುತ್ತಿದ್ದಾರೆ. ಹೌದು ಕನ್ನಡ ಚಿತ್ರರಂಗದಲ್ಲಿ ಇದೀಗ ಹೊಸ ತಲೆಮಾರಿನ ಪರ್ವ ಆರಂಭವಾಗಿದೆ ಎನ್ನಬಹುದು. 90 ರ ದಶಕದಲ್ಲಿ ಕನ್ನಡ ಚಿತ್ರರಂಗವನ್ನು ಆಳಿದ ಅನೇಕ ಕಲಾವಿದರ ಮಕ್ಕಳು ಇದೀಗ ಸ್ಯಾಂಡಲ್ ವುಡ್ ಪ್ರವೇಶ ಪಡೆಯುತ್ತಿದ್ದಾರೆ.ಅಂತಹವರಲ್ಲಿ ಮಾರಿಮುತ್ತು ಖ್ಯಾತಿಯ ನಟಿ ಸರೋಜಮ್ಮ ಅವರ ಮೊಮ್ಮಗಳು ನಟಿ ಜಯಶ್ರೀ ಕೂಡ ಒಬ್ಬರು.

ಜಯಶ್ರೀ ಅವರ ಬಗ್ಗೆ ತಿಳಿದುಕೊಳ್ಳುವ ಮೊದಲು ಅವರ ಅಜ್ಜಿ ಖ್ಯಾತ ಕಲಾವಿದೆ ಸರೋಜಮ್ಮ ಅವರ ಬಗ್ಗೆ ತಿಳಿಯುವುದಾದರೆ ಸರೋಜಮ್ಮ ಅವರು ನಟ, ನಿರ್ದೇಶಕ ಉಪೇಂದ್ರ ಅಭಿನಯದ ಉಪೇಂದ್ರ ಚಿತ್ರದ ಮೂಲಕ ಸ್ಯಾಂಡಲ್ ವುಡ್ ಗೆ ಪ್ರವೇಶ ಪಡೆಯುತ್ತಾರೆ. ಈ ಉಪೇಂದ್ರ ಚಿತ್ರದಲ್ಲಿ ಇವರ ನಟನೆಗೆ ಅಪಾರ ಮೆಚ್ಚುಗೆ ವ್ಯಕ್ತವಾಗುತ್ತದೆ.ಇದಾದ ಬಳಿಕ ನಟಿ ಸರೋಜಮ್ಮ ಅವರು ಮಾರಿಮುತ್ತು ಎಂದೇ ಹೆಸರುವಾಸಿಯಾದರು.ಉಪೇಂದ್ರ ಸಿನಿಮಾದ ನಂತರ ರೌಡಿ ಅಳಿಯ,ನಗೆ ಹಬ್ಬ,ಸ್ನೇಹಿತರು, ನಗೆ ಹಬ್ಬ,ಬರ್ಫಿ, ಸುಂಟರಗಾಳಿ,ಕೋತಿಗಳು ಸರ್ ಕೋತಿಗಳು ಸೇರಿದಂತೆ ಅನೇಕ ಸಿನಿಮಾಗಳಲ್ಲಿ ಜನ ಮನಗೆದ್ದಿದ್ದಾರೆ. ಇನ್ನು ನಟಿ ಸರೋಜಮ್ಮ ಅವರು 2016 ರಲ್ಲಿ ಹೃದಯಾಘಾತದಿಂದ ನಿಧನರಾದರು.

ಇದೀಗ ದಿವಂಗತ ನಟಿ ಸರೋಜಮ್ಮ ಅವರ ಮೊಮ್ಮಗಳಾದ ನಟಿ ಜಯಶ್ರೀ ಅವರು ಕೂಡ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟಿದ್ದಾರೆ. ನಟಿ ಜಯಶ್ರೀ ಅವರು ಸಹದೇವ್ ನಿರ್ದೇಶನದಲ್ಲಿ ಮೂಡಿಬಂದಂತಹ ಪುಟ್ಟರಾಜು ಲವರ್ ಆಫ್ ಶಶಿಕಲಾ ಚಿತ್ರದಲ್ಲಿ ನಾಯಕಿ ನಟಿಯಾಗಿ ಅಭಿನಯಿಸಿದ್ದಾರೆ. ತನ್ನ ಮೊದಲ ಚಿತ್ರದಲ್ಲೇ ತನ್ನ ಅಭಿನಯದ ಮೂಲಕ ಕನ್ನಡ ಸಿನಿ ಪ್ರೇಕ್ಷಕರಿಗೆ ಮೋಡಿ ಮಾಡಿದ್ದರು. ನಟಿ ಜಯಶ್ರೀ ಅವರು ಇತ್ತೀಚೆಗೆ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಆಕ್ಟಿವ್ ಆಗಿದ್ದು,ತಮ್ಮ ಹೊಸ ಫೋಟೋಗಳನ್ನು ಅಪ್ ಲೋಡ್ ಮಾಡುತ್ತಿರುತ್ತಾರೆ. ಈಗಾಗಲೇ ಒಂದಷ್ಟು ಕಥಗಳನ್ನು ಕೇಳಿರುವ ಜಯಶ್ರೀ ಅವರು ಒಂದೊಳ್ಳೆಯ ಪಾತ್ರಕ್ಕಾಗಿ ಕಾಯುತ್ತಿದ್ದಾರಂತೆ.

Leave a Reply

%d bloggers like this: