ನಟಿ ‘ಭಾವನಾ’ ಅವರನ್ನು ಅಂದು ಅಪಹರಣ ಮಾಡಿದ್ದ ಖ್ಯಾತ ನಟ ಯಾರು ಗೊತ್ತಾ? ನಂತರ ನಟ ಮಾಡಿದ್ದೇನು ಗೊತ್ತಾ, ಅಸಲಿ ಸತ್ಯ ಈಗ ಬಯಲು

ಸ್ಯಾಂಡಲ್ ವುಡ್ ಜನಪ್ರಿಯ ನಟಿಯೊಬ್ಬರು ತನಗಾದ ಕೆಟ್ಟ ಅನುಭವವನ್ನು ಇದೀಗ ಬಿಚ್ಚಿಟ್ಟಿದ್ದಾರೆ. ಸಿನಿಮಾ ಅಂದಾಕ್ಷಣ ಒಂದಷ್ಟು ಮಂದಿಗೆ ವಾವ್ ಅನ್ನೊ ಭಾವನೆ ಮೂಡುವಂತದ್ದು. ಇನ್ನೊಂದಷ್ಟು ಜನರಿಗೆ ಅಸಹನೆ. ನೋಡೋ ಭಾವನೆಯೇ ಬಹಳ ತಾತ್ಸಾರ ಅನ್ನುವ ರೀತಿಯಿರುತ್ತದೆ. ಬಣ್ಣದ ಬದುಕು ಕೆಲವರನ್ನ ನಕ್ಷತ್ರದಂತೆ ಮಿಂಚುವಂತೆ ಮಾಡಿದರೆ. ಕೆಲವರಿಗೆ ಸಿನಿಮಾದ ಸಹವಾಸವೇ ಬೇಡ ಅನ್ನಿಸುವಷ್ಟು ಅಸಮಾಧಾನವಿರುತ್ತದೆ. ಎಲ್ಲಾ ಕ್ಷೇತ್ರದಲ್ಲಿ ಇರುವಂತೆ ಸಿನಿಮಾ ಕ್ಷೇತ್ರದಲ್ಲಿಯೂ ಕೂಡ ಒಂದಷ್ಟು ಕೆಟ್ಟ ವ್ಯಕ್ತಿತ್ವ ಹೊಂದಿರುವ ಜನರಿರುತ್ತಾರೆ. ಸಿನಿಮಾದಲ್ಲಿ ಮಿಂಚಬೇಕು ಎಂದು ನೂರಾರು ಕನಸು ಹೊತ್ತು ಬರುವ ಅನೇಕ ಹೆಣ್ಣು ಮಕ್ಕಳನ್ನ ಕೆಟ್ಟ ದೃಷ್ಟಿಯಿಂದ ನೋಡುವಂತಹ ಮಂದಿ ಕೂಡ ಇರುವುದು ಜಗಜ್ಜಾಹಿರಾಗಿರುವ ವಿಚಾರವಾಗಿದೆ. ಹೀಗಿರುವಾಗ ಸ್ಯಾಂಡಲ್ ವುಡ್ ನಲ್ಲಿ ಅನೇಕ ಸೂಪರ್ ಹಿಟ್ ಚಿತ್ರಗಳಲ್ಲಿ ನಟಿಸಿರುವ ನಟಿ ಭಾವನಾ ಮೆನನ್ ಅವರನ್ನು ಕೂಡ ದುಷ್ಟರು ಬಿಟ್ಟಿಲ್ಲ.

ಸೂರಿ ನಿರ್ದೇಶನದಲ್ಲಿ ಮೂಡಿಬಂದ ಪುನೀತ್ ರಾಜ್ ಕುಮಾರ್ ಅಭಿನಯದ ಜಾಕಿ ಸಿನಿಮಾದ ಮೂಲಕ ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಟ್ಟು ಕನ್ನಡದ ಬಹುಬೇಡಿಕೆಯ ನಟಿಯಾಗಿ ಯಶಸ್ಸಿನ ಉತ್ತುಗದಲ್ಲಿ ಮಿಂಚಿದ ನಟಿ ಭಾವನಾ ಅವರನ್ನ ಸಿನಿಮೀಯ ರೀತಿಯಲ್ಲಿ ಕಿಡ್ಯಾಪ್ ಮಾಡಿ ಅನುಚಿತ ವರ್ತನೆ ತೋರಿದ್ದರಂತೆ ಕಿಡಿ ಕೇಡಿಗಳು. ಆ ಬಗ್ಗೆ ಅವರೇ ಸ್ವತಃ ಹೇಳಿಕೊಂಡಿದ್ದಾರೆ. ಅದಕ್ಕೂ ಮುನ್ನ ನಟಿ ಭಾವನಾ ಅವರ ಬಗ್ಗೆ ತಿಳಿಯುವುದಾದರೆ ಕೇರಳದ ತ್ರಿಶೂರ್ ನಲ್ಲಿ ಜನಿಸಿದ ಭಾವನಾ ಮೆನನ್ ಅವರು ತನ್ನ 16 ನೇ ವಯಸ್ಸಿಗೇನೇ ಬಣ್ಣ ಹಚ್ಚುತ್ತಾರೆ. ಇವರ ಮೂಲ ಹೆಸರು ಕಾರ್ತಿಕಾ ಮೆನನ್. ಸಿನಿಮಾ ರಂಗಕ್ಕೆ ಪರಿಚಯವಾಗಿದ್ದು ಭಾವನಾ ಮೆನನ್ ಆಗಿ. ಇನ್ನು ಭಾವನಾ ಅವರು ಮಲೆಯಾಳಂ ನ ನಮ್ಮಲ್ ಎಂಬ ಚಿತ್ರದ ಮೂಲಕ ಸಿನಿ ರಂಗಕ್ಕೆ ಎಂಟ್ರಿ ಕೊಡುತ್ತಾರೆ. ಈ ಚಿತ್ರ ಸೂಪರ್ ಹಿಟ್ ಆಗುತ್ತದೆ.

ಮಲೆಯಾಳಂ ಚಿತ್ರರಂಗದಲ್ಲಿ ಈ ಸಿನಿಮಾದ ಯಶಸ್ಸು ನಟಿ ಭಾವನಾ ಅವರಿಗೆ ಅವಕಾಶಗಳ ಸುರಿಮಳೆ ಸುರಿಯುತ್ತದೆ. ಇದಾದ ಬಳಿಕ ಕೇವಲ ಮಲೆಯಾಳಂ ಮಾತ್ರವಲ್ಲದೆ ತೆಲುಗು ಮತ್ತು ಕನ್ನಡ ಸಿನಿ ರಂಗದಲ್ಲಿಯೂ ಕೂಡ ನಟಿಸಿ ಯಶಸ್ವಿ ನಟಿಯಾಗಿ ಹೊರ ಹೊಮ್ಮುತ್ತಾರೆ. ಹೀಗೆ ಯಶಸ್ಸಿನ ಉತ್ತುಂಗದಲ್ಲಿರುವಾಗ 2017 ರಲ್ಲಿ ಸಿನಿಮಾವೊಂದರ ಚಿತ್ರೀಕರಣ ಮುಗಿಸಿ ಮನೆಗೆ ಹಿಂದಿರುಗುವಾಗ ಒಂದಷ್ಟು ಮಂದಿ ಅವರನ್ನ ಕಿಡ್ನ್ಯಾಪ್ ಮಾಡಿ ಲೈಂಗಿಕ ದೌರ್ಜನ್ಯ ಎಸುಗುತ್ತಾರಂತೆ. ಈ ಅಪಹರಣದಲ್ಲಿ ಆರೋಪಿಗಳ ಜೊತೆ ನಟ ದಿಲೀಪ್ ಅವರ ಕೈವಾಡ ಇದೆ ಎಂದು ತಿಳಿದು ಅವರನ್ನ ಅರೆಸ್ಟ್ ಕೂಡ ಮಾಡಿದ್ದರು. ಆ ದಿನಗಳಲ್ಲಿ ನಟಿ ಭಾವನಾ ಅವರು ಸಾಕಷ್ಟು ಮಾನಸಿಕವಾಗಿ ಕುಗ್ಗಿದ್ದರಂತೆ. ಈ ವಿಚಾರವನ್ನು ನಟಿ ಭಾವನಾ ಅವರು ಇತ್ತೀಚೆಗೆ ಶೇರ್ ಮಾಡಿಕೊಂಡಿದ್ದಾರೆ.

Leave a Reply

%d bloggers like this: