ನಟಿ ಅಂಕಿತಾ ಜೊತೆ ಲವ್ವಲ್ಲಿ ಬಿದ್ದ ಚಂದನ್ ಕುಮಾರ್, ಲವ್ವಿ ಡವ್ವಿ ಶುರು ಮಾಡಲು ಕಾರಣವೇನು ಗೊತ್ತಾ

ಕನ್ನಡ ಕಿರುತೆರೆಯ ಜನಪ್ರಿಯ ನಾಯಕ ನಟ ಚಂದನ್ ಕುಮಾರ್ ಅವರಿಗೆ ಇದೀಗ ಅಂಕಿತಾ ಅವರ ಮೇಲೆ ಪ್ರೀತಿ ಉಂಟಾಗಿದೆ. ಹೌದು ಇತ್ತೀಚೇಗೆ ಕಳೆದ ಕೆಲವು ತಿಂಗಳುಗಳ ಹಿಂದೆಯಷ್ಟೇ ಲಕ್ಷ್ಮಿ ಬಾರಮ್ಮಾ ಧಾರಾವಾಹಿ ಖ್ಯಾತಿಯ ಚಂದನ್ ಮತ್ತು ಅದೇ ಧಾರಾವಾಹಿಯಲ್ಲಿ ಚಿನ್ನು ಪಾತ್ರದ ಮೂಲಕ ಅಪಾರ ಜನಪ್ರಿಯತೆ ಪಡೆದ ನಟಿ ಕವಿತಾ ಗೌಡ ಪ್ರೀತಿಸಿ ದಾಂಪತ್ಯ ಜೀವನಕ್ಕೆ ಹೆಜ್ಜೆ ಇಟ್ಟಿದ್ದಾರೆ. ಆಗಾಗ ದಂಪತಿಗಳಿಬ್ಬರು ಕೂಡ ಸೋಶಿಯಲ್ ಮೀಡಿಯಾದಲ್ಲಿ ಒಂದಷ್ಟು ಫೋಟೋ ಮತ್ತು ದಂಪತಿಗಳಿಬ್ಬರು ಹೊರ ದೇಶ ಅಥವಾ ಯಾವುದಾದರು ಪ್ರವಾಸ ತಾಣಗಳಿಗೆ ಹೋಗಿರುವ ಫೋಟೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಇನ್ನು ನಟ ಚಂದನ್ ಮತ್ತು ಕವಿತಾ ಇಬ್ಬರು ಕೂಡ ಸಿನಿಮಾಗಳಲ್ಲಿಯೂ ನಟಿಸಿದ್ದಾರೆ. ನಟಿ ಕವಿತಾ ಶ್ರೀನಿವಾಸ ಕಲ್ಯಾಣ, ಫಸ್ಟ್ ಲವ್, ಗುಬ್ಬಿ ಮೇಲೆ ಬ್ರಹ್ಮಾಸ್ತ್ರ ಎಂಬ ಸಿನಿಮಾಗಳಲ್ಲಿ ನಟಿಸಿದ್ದಾರೆ.

ಇತ್ತ ಚಂದನ್ ಕುಮಾರ್ ಕೂಡ ಲವ್ ಯೂ ಆಲಿಯಾ, ಬೆಂಗಳೂರು 85 ಮತ್ತು ಅರ್ಜುನ್ ಸರ್ಜಾ ಅವರ ನಿರ್ದೇಶನದ ಪ್ರೇಮ ಬರಹ ಚಿತ್ರದಲ್ಲಿ ನಾಯಕ ನಟರಾಗಿ ನಟಿಸಿದ್ದಾರೆ. ನಟ ಚಂದನ್ ಕುಮಾರ್ ಅವರಿಗೆ ಧಾರಾವಾಹಿಗಳಲ್ಲಿ ಸಿಕ್ಕಂತಹ ಪ್ರೋತ್ಸಾಹ ಜನ ಮೆಚ್ಚುಗೆ ಸಿನಿಮಾಗಳಲ್ಲಿ ಸಿಗಲಿಲ್ಲ. ಆದ ಕಾರಣ ನಟ ಚಂದನ್ ಕುಮಾರ್ ಮತ್ತೆ ಕಿರುತೆರೆಗೆ ಮರಳಿ ಮನಸ್ಸಾಗಿದೆ ಎಂಬ ಧಾರಾವಾಹಿಯ ಮೂಲಕ ಮರಳಿದ್ದಾರೆ. ಸ್ಟಾರ್ ಸುವರ್ಣದಲ್ಲಿ ಪ್ರಸಾರವಾಗುತ್ತಿರುವ ಮರಳಿ ಮನಸ್ಸಾಗಿದೆ ಧಾರಾವಾಹಿಯಲ್ಲಿ ನಟ ಚಂದನ್ ಪೊಲೀಸ್ ಪಾತ್ರದಲ್ಲಿ ನಟಿಸುತ್ತಿದ್ದಾರೆ.

ಇನ್ನು ಇದೀಗ ಹೊಸ ಸುದ್ದ ಏನಪ್ಪಾ ಅಂದರೆ ನಟ ಚಂದನ್ ಕುಮಾರ್ ಅವರು ನಟಿ ಕವಿತಾ ಗೌಡ ಅವರನ್ನು ಪ್ರೀತಿಸಿ ಮದುವೆ ಆಗಿದ್ದಾರೆ. ಆಗಿದ್ದರು ಕೂಡ ನಟ ಚಂದನ್ ಅವರಿಗೆ ಅಂಕಿತ ಅವರ ಮೇಲೆ ಲವ್ ಆಗಿದೆಯಂತೆ. ಅಂಗಂತ ಇದು ನಿಜ ಜೀವನದಲ್ಲಿ ಅಲ್ಲ.ಚಂದನ್ ಅವರಿಗೆ ಈಗ ತೆಲುಗಿನ ಹೊಸ ಧಾರಾವಾಹಿಯೊಂದರಲ್ಲಿ ಅವಕಾಶ ಸಿಕ್ಕಿದೆ. ಈ ಧಾರಾವಾಹಿಯ ಹೆಸರು ಶ್ರೀ ಮತಿ ಶ್ರೀನಿವಾಸ್. ಈ ಧಾರಾವಾಹಿಯಲ್ಲಿ ನಟ ಚಂದನ್ ಅವರದ್ದು ಮೆಕ್ಯಾನಿಕ್ ಪಾತ್ರವಾಗಿದೆ. ಇವರಿಗೆ ಹಳ್ಳಿ ಹುಡುಗಿಯ ಮೇಲೆ ಲವ್ ಆಗುತ್ತದಂತೆ. ಈ ಹಳ್ಳಿ ಹುಡುಗಿಯ ಪಾತ್ರದಲ್ಲಿ ನಟಿ ಅಂಕಿತಾ ಅಮರ್ ನಟಿಸಿದ್ದಾರೆ.

Leave a Reply

%d bloggers like this: