ನಟಿ ಆಗಲು ಬಂದ ಈಕೆ! ಕೊನೆಗೂ ಆರು ಸಾವಿರ ರುಪಾಯಿಗೆ ಈ ಖ್ಯಾತ ನಟಿ ಏನಾದಳು ಗೊತ್ತಾ

ಬಣ್ಣದ ಲೋಕ ಎಲ್ಲರನ್ನು ಆಕರ್ಷಿಸಿ ಕೈ ಬೀಸಿ ಕರೆಯುತ್ತದೆ. ಆದರೆ ಈ ಬಣ್ಣದ ಜಗತ್ತಿನಲ್ಲಿ ಎಲ್ಲರಿಗೂ ಕೂಡ ನೆಲೆ ಸಿಗುವುದಿಲ್ಲ. ಜೀವನದಲ್ಲಿ ಏನಾದರೊಂದು ಸಾಧನೆ ಮಾಡಬೇಕು. ಅದೂ ಕೂಡ ಸಿನಿಮಾ ಕ್ಷೇತ್ರದಲ್ಲೇ ನಾನು ನಟ ನಾಗಿ, ನಟಿಯಾಗಿ, ನಿರ್ದೇಶಕನಾಗಿ ಮಿಂಚಬೇಕು ಅಂತ ದೊಡ್ಡ ದೊಡ್ಡ ಕನಸುಗಳನ್ನು ಹೊತ್ತು ಹಳ್ಳಿಗಳಿಂದ ಎಷ್ಟೋ ಜನರು ನಗರಗಳತ್ತ ಮುಖ ಮಾಡುತ್ತಾರೆ. ಆದರೆ ಬಣ್ಣದ ಲೋಕ ಈ ಸಿನಿಮಾ ಎಂಬುದು ಒಂದು ಮಾಯಾಲೋಕ ಅಂದುಕೊಂಡಷ್ಟು ಸುಲಭದ ಮಾತಲ್ಲ. ಅದೊಂದು ರೀತಿಯ ತಪಸ್ಸು ಹೌದು.ಅಂತೆಯೇ ಬಣ್ಣದ ಲೋಕದಲ್ಲಿ ಮಿಂಚಬೇಕು ಎಂದು ನೂರಾರು ಕನಸುಗಳನ್ನು ಹೊತ್ತು ಬಾಲಿವುಡ್ ನ ಖ್ಯಾತ ರೂಪದರ್ಶಿ ಕಮ್ ನಟಿ ಕೃತಿಕಾ ಹರಿದ್ವಾರದಿಂದ ಮುಂಬೈಗೆ ಬರುತ್ತಾರೆ.

ಕೃತಿಕಾ ಮುಂಬೈಗೆ ಬರುವಾಗ ಕೇವಲ ಇಪ್ಪತ್ತೊಂದು ವರ್ಷ. ಕೃತಿಕಾ ವಿಧ್ಯಾವಂತೆ ಆಗಿದ್ದರಿಂದ ಮುಂಬೈಗೆ ಬಂದಾಗ ಆದಷ್ಟು ಬೇಗನೇ ಉದ್ಯೋಗ ಸಿಗುತ್ತದೆ. ಖಾಸಗಿ ಕಂಪನಿಯಲ್ಲಿ ಉದ್ಯೋಗ ಮಾಡಿಕೊಂಡು ತನ್ನ ಕನಸನ್ನ ಸಾಕಾರಗೊಳಿಸಿಕೊಳ್ಳುವಲ್ಲಿ ಗಮನಹರಿಸಿದ್ದ ಕೃತಿಕಾಳಿಗೆ ಅದೃಷ್ಟ ಎಂಬಂತೆ ಮಾಡೆಲಿಂಗ್ ಕ್ಷೇತ್ರದಲ್ಲಿ ಕೂಡ ಅವಕಾಶ ಸಿಗುತ್ತದೆ. ನೋಡಲು ಸೌಂದರ್ಯವತಿ ಆಗಿದ್ದ ಕೃತಿಕಾಳಿಗೆ ಮಾಡೆಲಿಂಗ್ ನಲ್ಲಿ ಉತ್ತಮ ಹೆಸರು ಸಿಗುತ್ತದೆ. ಅದರ ಜೊತೆಗೆ ಸಿನಿಮಾಗಳಲ್ಲಿಯೂ ಕೂಡ ಅವಕಾಶ ಸಿಗುತ್ತದೆ. ಹೀಗೆ ಸಿನಿಮಾಗಳಲ್ಲಿ ಸಿಕ್ಕ ಸಣ್ಣ ಪುಟ್ಟ ಪಾತ್ರಗಳನ್ನ ಮಾಡುತ್ತಿದ್ದ ಕೃತಿಕಾಳಿಗೆ ಪೋಷಕ ನಟಿಯಾಗಿ ಉತ್ತಮ ಜನಪ್ರಿಯತೆ ಮತ್ತು ಬೇಡಿಕೆ ಹೆಚ್ಚಾಗುತ್ತದೆ.

ಈ ಸಮಯದಲ್ಲಿ ಕೃತಿಕಾ ಹಿಂದಿ ಸಿನಿಮಾಗಳಲ್ಲಿ ಕೊಂಚ ಬಿಝಿ಼ ತೊಡಗಿಸಿಕೊಂಡು ಗಳಿಕೆ ಕೂಡ ಚೆನ್ನಾಗಿ ಮಾಡಿಕೊಳ್ಳುತ್ತಾರೆ. ಹಣ ಹೆಚ್ಚಾದಂತೆ ನಟಿ ಕೃತಿಕಾರಿಗೆ ದೊಡ್ಡ ಶ್ರೀಮಂತರ ಮಕ್ಕಳ ಪರಿಚಯ ಆಗುತ್ತದೆ. ಐಷಾರಾಮಿ ಜೀವನಕ್ಕೆ ಒಳಗಾದ ಕೃತಿಕಾ ದುಬಾರಿ ಬೆಲೆಯ ಫ್ಲಾಟ್ ಖರೀದಿಸುತ್ತಾರೆ. ಸ್ನೇಹಿತರೊಟ್ಟಿಗೆ ರಾತ್ರಿ ಡಿನ್ನರ್ ಪಾರ್ಟಿ ಜೊತೆಗೆ ಒಂದಷ್ಟು ದುಶ್ಚಟಗಳಿಗೂ ಕೂಡ ದಾಸರಾಗುತ್ತಾರೆ. ತದ ನಂತರ. ಇದರ ನಡುವೆಯೇ ವಿಜಯ್ ಎಂಬುವರನ್ನು ಮದುವೆ ಆಗುತ್ತಾರೆ. ದುರಾದೃಷ್ಟವಶಾತ್ ಪ್ರೀತಿಸಿ ಮದುವೆ ಆಗಿದ್ದ ಪತಿ ವಿಜಯ್ ಅವರು ಕೂಡ ಕೃತಿಕಾರಿಂದ ದೂರವಾಗುತ್ತಾರೆ.

ತನ್ನ ದಾಂಪತ್ಯ ಬದುಕು ದಾರಿ ತಪ್ಪಿದ ಬಳಿಕ ನಟಿ ಕೃತಿಕಾ ಮತ್ತಷ್ಟು ಖಿನ್ನತೆಗೆ ಒಳಗಾಗಿ ಮಾದಕ ವಸ್ತುಗಳತ್ತ ಮನಸ್ಸನ್ನ ಹರಿ ಬಿಡುತ್ತಾಳೆ. ಈ ಮಾದಕ ವಸ್ತುಗಳಿಗೆ ಸಂಪೂರ್ಣವಾಗಿ ಅಡಿಕ್ಟ್ ಆದ ಕೃತಿಕಾ ಡ್ರಗ್ಸ್ ಇಲ್ಲದೇ ಜೀವನ ಇಲ್ಲ ಎಂಬಂತಹ ಪರಿಸ್ಥಿತಿಗೆ ತಲುಪುತ್ತಾರೆ. ಅಪಾರ್ಟ್ ಮೆಂಟ್ ನಲ್ಲಿ ಕೃತಿಕಾದ ದುರ್ವರ್ತನೆ ಕಂಡು ಆ ಸಮುಚ್ಚಯದ ನಿವಾಸಿಗಳು ಪೊಲೀಸರಿಗೆ ದೂರು ನೀಡುತ್ತಾರೆ. ಇದರಿಂದ ಮಾನಸಿಕವಾಗಿ ಕೊಂಚ ಅಸ್ತವ್ಯಸ್ಥರಾದಂತೆ ವರ್ತಿಸುತ್ತಿದ್ದ ಕೃತಿಕಾ ರನ್ನ ಅಪಾರ್ಟ್ ಮೆಂಟ್ ನಿಂದ ಹೊರ ಕಳಿಸುತ್ತಾರೆ.

ಹೀಗೆ ಬಣ್ಣದ ಲೋಕದಲ್ಲಿ ಮಿಂಚಬೇಕು ಎಂದು ಬಂದ ಈ ಯುವ ನಟಿ ಮೋಜು ಮಸ್ತಿ ದುಶ್ಚಟಗಳಿಗೆ ಬಲಿಯಾಗಿ ತನ್ನ ಜೀವನವನ್ನೇ ಬಲಿಯಾಗಿಸಿಕೊಳ್ಳುತ್ತಾರೆ. ಈ ನಮ್ಮ ಲೇಖನ ನಿಮಗೆ ಇಷ್ಟವಾದಲ್ಲಿ ಶೇರ್ ಮಾಡಿ ಮತ್ತು ಲೈಕ್ ಮಾಡಿ. ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಮೂಲಕ ನಮಗೆ ತಿಳಿಸಿ. ಮತ್ತಷ್ಟು ಹೊಸ ಹೊಸ ಸುದ್ದಿಗಳಿಗಾಗಿ ನಮ್ಮ ಪೇಜ್ ನ್ನು ತಪ್ಪದೆ ಲೈಕ್ ಮಾಡಿ.