ನಟನಾಗಿ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ಜಮೀರ್ ಅಹ್ಮದ್ ಅವರ ಮಗ, ಬಿಡುಗಡೆ ದಿನಾಂಕ ಫಿಕ್ಸ್

ಬನಾರಸ್ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರೆ ಕರ್ನಾಟಕದ ಹೆಸರಾಂತ ರಾಜಕಾರಣಿಯ ಮಗ, ಹೌದು ಚಾಮರಾಜ ಪೇಟೆ ಶಾಸಕ ಜಮೀರ್ ಅಹ್ಮದ್ ಖಾನ್ ಅವರ ಪುತ್ರ ಝೈದ್ ಖಾನ್ ನಟಿಸಿರುವ ಬನಾರಸ್ ಸಿನಿಮಾ ತೆರೆಗೆ ಬರಲು ಸಿದ್ದವಾಗಿದೆ. ಒಲವೇ ಮಂದಾರ, ಟೋನಿ, ಬ್ಯೂಟಿಫುಲ್ ಮನಸುಗಳು ಅಂತಹ ವಿಭಿನ್ನ ಸೂಪರ್ ಹಿಟ್ ಸಿನಿಮಾಗಳನ್ನ ನಿರ್ದೇಶನ ಮಾಡಿರೋ ಖ್ಯಾತ ನಿರ್ದೇಶಕ ಜಯತೀರ್ಥ ಅವರು ಬನಾರಸ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ವಿಶೇಷ ಅಂದರೆ ಇದು ಝೈದ್ ಖಾನ್ ಅವರಿಗೆ ಮೊದಲ ಸಿನಿಮಾ. ಮೊದಲ ಸಿನಿಮಾನೇ ಪ್ಯಾನ್ ಇಂಡಿಯಾ ಆಗಿರೋದ್ರಿಂದ ಝೈದ್ ಖಾನ್ ತಮ್ಮ ಪಾತ್ರಕ್ಕಾಗಿ ಮತ್ತು ಸಿನಿಮಾ ಇಂಡಸ್ಟ್ರಿಗೆ ಬರುವ ಮುನ್ನ ಎಲ್ಲಾ ರೀತಿ ತಯಾರಿ ಮಾಡಿಕೊಂಡಿದ್ದಾರೆ. ಈಗಾಗಲೇ ಬನಾರಸ್ ಸಿನಿಮಾದ ಮಾಯಗಂಗೆ ಎಂಬ ಮನಮೋಹಕ ಹಾಡು ಸಿನಿ ಪ್ರೇಕ್ಷಕರನ್ನ ಮೋಡಿ ಮಾಡಿದೆ.

ಈ ಹಾಡಿನಲ್ಲಿ ನಟ ಝೈದ್ ಖಾನ್ ಅವರು ಆಕರ್ಷಕವಾಗಿ ಕಾಣಿಸಿಕೊಂಡಿದ್ದು ಸಿನಿಮಾದಲ್ಲಿ ಯಾವ ರೀತಿ ಕಾಣಿಸಿಕೊಂಡಿರಬಹುದು ಅನ್ನೋ ಕುತೂಹಲ ಮೂಡಿಸಿದ್ದಾರೆ. ನಿರ್ಮಾಪಕ ತಿಲಕ್ ರಾಜ್ ಬಲ್ಲಾಳ್ ಅವರು ಬನಾರಸ್ ಸಿನಿಮಾವನ್ನು ಬಹಳ ಅದ್ದೂರಿಯಾಗಿ ನಿರ್ಮಾಣ ಮಾಡಿದ್ದಾರೆ. ಝೈದ್ ಖಾನ್ ಅವರಿಗೆ ಜೋಡಿಯಾಗಿ ಸಯೋನ್ ರೋನ್ ಅವರು ನಟಿಸಿದ್ದಾರೆ. ತಾರಾಗಣದಲ್ಲಿ ಹಿರಿಯ ನಟ ದೇವರಾಜ್, ಸುಜಯ್ ಶಾಸ್ತ್ರಿ, ಅಚ್ಯುತ್ ಕುಮಾರ್, ಸ್ವಪ್ನಾ ಸೇರಿದಂತೆ ಮುಂತಾದ ಕಲಾವಿದರು ಇದ್ದಾರೆ. ಇನ್ನು ಬನಾರಸ್ ಸಿನಿಮಾಗೆ ಅಜನೀಶ್ ಲೋಕನಾಥ್ ರಾಗ ಸಂಯೋಜನೆ ಮಾಡಿದ್ದು, ಈಗಾಗಲೇ ಮಾಯಗಂಗೆ ಹಾಡು ಸೂಪರ್ ಹಿಟ್ ಆಗಿದೆ. ಒಟ್ಟಾರೆಯಾಗಿ ಬನಾರಸ್ ಸಿನಿಮಾ ಇದೇ ನವೆಂಬರ್ 4ರಂದು ಕನ್ನಡ ಸೇರಿದಂತೆ ಪಂಚಭಾಷೆಗಳಲ್ಲಿ ದೇಶಾದ್ಯಂತ ಅದ್ದೂರಿಯಾಗಿ ರಿಲೀಸ್ ಆಗುತ್ತಿದೆ. ಈ ಮೂಲಕ ಸೂಪರ್ ಸ್ಟಾರ್ ನಟರ ಸಿನಿಮಾಗಳು ಪ್ಯಾನ್ ಇಂಡಿಯಾ ಸಿನಿಮಾಗಳಾಗಿ ಗೆದ್ದಂತೆ ಕನ್ನಡದಲ್ಲಿ ಝೈದ್ ಖಾನ್ ಅವರು ನಟಿಸಿದ ತಮ್ಮ ಚೊಚ್ಚಲ ಚಿತ್ರವೇ ಪ್ಯಾನ್ ಇಂಡಿಯಾ ಆಗಿರೋದ್ರಿಂದ ಸಖತ್ ಖುಷಿ ಜೊತೆಗೆ ಭಾರಿ ನಿರೀಕ್ಷೆ ಇಟ್ಟುಕೊಂಡಿದ್ದಾರೆ.

Leave a Reply

%d bloggers like this: