ನಟ ಗಣೇಶ್ ‘ಗೋಲ್ಡನ್ ಗ್ಯಾಂಗ್’ ಶೋ ನ ಒಂದು ಎಪಿಸೋಡ್ ಗೆ ಪಡೆಯುವ ಸಂಭಾವನೆ ಎಷ್ಟು ಗೊತ್ತಾ? ನೋಡಿ ಒಮ್ಮೆ

ಸ್ಯಾಂಡಲ್ ವುಡ್ ಗೋಲ್ಡನ್ ಸ್ಟಾರ್ ಗಣೇಶ್ ಕಿರುತೆರೆಯ ಒಂದು ರಿಯಾಲಿಟಿ ಶೋಗೆ ನಿರೂಪಣೆ ಮಾಡಲು ಪಡೆಯುವ ಸಂಭಾವನೆ ಎಷ್ಟು ಗೊತ್ತಾ..! ಕನ್ನಡದ ಅನೇಕ ಸ್ಟಾರ್ ನಟರು ಕಿರುತೆರೆಗೆ ನಿರೂಪಕರಾಗಿ ಮತ್ತು ಒಂದಷ್ಟು ಜಾಹೀರಾತುಗಳಲ್ಲಿಯೂ ಕೂಡ ಕಾಣಿಸಿಕೊಂಡಿದ್ದಾರೆ. ನಟನೆಯ ಜೊತೆಗೆ ಕೆಲವು ಕಲಾವಿದರು ಸಿನಿಮೇತ್ತರವಾಗಿ ಕೂಡ ಆದಾಯದ ಮೂಲಗಳನ್ನು ಕಂಡುಕೊಂಡಿದ್ದಾರೆ. ಶಿವರಾಜ್ ಕುಮಾರ್, ಉಪೇಂದ್ರ, ಯಶ್, ಸುದೀಪ್, ಗಣೇಶ್ ಹೀಗೆ ಒಂದಷ್ಟು ಸ್ಟಾರ್ ನಟರು ಬೆಳ್ಳಿ ತೆರೆ ಮಾತ್ರ ಅಲ್ಲದೆ ಕಿರುತೆರೆಯಲ್ಲಿ ಕೂಡ ಕಾಣಿಸಿಕೊಂಡಿದ್ದಾರೆ. ಹೌದು ಶಿವರಾಜ್ ಕುಮಾರ್ ಅವರು ಖಾಸಗಿ ವಾಹಿನಿಯಲ್ಲಿ ನಿರೂಪಕರಾಗಿ ಕಾಣಿಸಿಕೊಂಡಿದ್ದರು.

ಇದೀಗ ಆರಂಭ ಆಗುವ ಹೊಸದೊಂದು ರಿಯಾಲಿಟಿ ಶೋ ಗೂ ಕೂಡ ಶಿವಣ್ಣ ಅವರು ಜಡ್ಜ್ ಆಗಿ ಬರಲಿದ್ದಾರೆ. ಇನ್ನು ಕಿಚ್ಚ ಸುದೀಪ್ ಅವರು ಬಿಗ್ ಬಾಸ್ ಅಂತಹ ಬಹು ದೊಡ್ಡ ರಿಯಾಲಿಟಿ ಶೋವೊಂದನ್ನ ಯಶಸ್ವಿಯಾಗಿ ನಡೆಸಿಕೊಂಡು ಬಂದಿದ್ದಾರೆ. ಅದೇ ರೀತಿಯಾಗಿ ಗೋಲ್ಡನ್ ಸ್ಟಾರ್ ಗಣೇಶ್ ಅವರು ಕೂಡ ಸೂಪರ್ ಮಿನಿಟ್ ಎಂಬ ಗೇಮ್ ಶೋ ವನ್ನು ನಿರೂಪಣೆ ಮಾಡಿದ್ದರು. ಅದರಂತೆ ಇದೀಗ ಮತ್ತೆ ನಟ ಗಣೇಶ್ ಅವರು ಗೋಲ್ಡನ್ ಗ್ಯಾಂಗ್ ಎಂಬ ರಿಯಾಲಿಟಿ ಶೋ ವೊಂದನ್ನು ನಿರೂಪಣೆ ಮಾಡುತ್ತಿದ್ದಾರೆ. ಈ ಗೋಲ್ಡನ್ ಗ್ಯಾಂಗ್ ಕಾರ್ಯಕ್ರಮದ ನಿರೂಪಣೆಗಾಗಿ ಗಣೇಶ್ ಅವರು ಎಷ್ಟು ಸಂಭಾವನೆ ಪಡೆದಿದ್ದಾರೆ ಎಂಬುದು ಇದೀಗ ಎಲ್ಲರ ಕುತೂಹಲವಾಗಿದೆ. ಏಕೆಂದರೆ ಈ ಜೀ಼ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗುತ್ತಿರುವ ಈ ಗೋಲ್ಡನ್ ಗ್ಯಾಂಗ್ ಶೋ ಭಾರಿ ಪ್ರಸಿದ್ದತೆ ಪಡೆದುಕೊಂಡು ಯಶಸ್ವಿಯಾಗಿ ಸಾಗುತ್ತಿದೆ.
ಚೆಲ್ಲಾಟ ಎಂಬ ಚಿತ್ರದ ಮೂಲಕ ಬೆಳ್ಳಿತೆರೆಗೆ ಪಾದಾರ್ಪಣೆ ಮಾಡಿದ ನಟ ಗಣೇಶ್ ಅವರು ಮುಂಗಾರು ಮಳೆ ಚಿತ್ರದ ನಂತರ ಗೋಲ್ಡನ್ ಸ್ಟಾರ್ ಗಣೇಶ್ ಆಗಿ ಮಿಂಚುತ್ತಿದ್ದಾರೆ. ಇದುವರೆಗೆ ಸುಮಾರು 35 ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸುವುದರ ಜೊತೆಗೆ ನಿರ್ದೇಶನ ಕೂಡ ಮಾಡಿದ್ದಾರೆ. ಕನ್ನಡದ ಬೇಡಿಕೆಯ ನಟರಲ್ಲಿ ಒಬ್ಬರಾಗಿರುವ ಗಣೇಶ್ ಬೆಳ್ಳಿ ತೆರೆಯ ಜೊತೆಗೆ ಕಿರು ತೆರೆಯಲ್ಲಿ ಕೂಡ ತಮ್ಮ ನಗುಮುಖದ ಭಾವ, ಹಾಸ್ಯ ಸ್ವಭಾವದ ಮೂಲಕ ತಮ್ಮ ಕಾರ್ಯಕ್ರಮಕ್ಕೆ ಬರುವ ಅತಿಥಿಗಳೊಂದಿಗೆ ತುಂಟತನ ತಮಾಷೆಯಾಗಿ ಬೆರೆತು ಗೋಲ್ಡನ್ ಗ್ಯಾಂಗ್ ಶೋ ಗೆ ಮತ್ತಷ್ಟು ಮೆರಗು ತಂದುಕೊಟ್ಟಿದ್ದಾರೆ.

ಈಗಾಗಲೇ ಈ ಗೋಲ್ಡನ್ ಗ್ಯಾಂಗ್ ಶೋ ಗೆ ಡಾಲಿ ಧನಂಜಯ್, ಶರಣ್ , ಪ್ರೇಮ್, ಜಯಂತ್ ಕಾಯ್ಕಿಣಿ ಸೇರಿದಂತೆ ಅನೇಕ ಸಿನಿಮಾ ಸೆಲೆಬ್ರಿಟಿಗಳು ಆಗಮಿಸಿದ್ದಾರೆ. ಜೊತೆಗೆ ಜನಪ್ರಿಯ ಸುದ್ದಿ ನಿರೂಪಕರು, ವಾರ್ತಾ ವಾಚಕರು ಕೂಡ ಈ ಕಾರ್ಯಕ್ರಮದಲ್ಲಿ ತಮ್ಮ ಕುಚಿಕು ಗೆಳೆಯರ ಗ್ಯಾಂಗ್ ಗಳ ಬಗ್ಗೆ ಒಂದಷ್ಟು ಮಾಹಿತಿಗಳನ್ನು ಹಂಚಿಕೊಂಡಿದ್ದಾರೆ. ಹೀಗೆ ಈ ಜನಪ್ರಿಯ ಗೋಲ್ಡನ್ ಗ್ಯಾಂಗ್ ಶೋ ನಿರೂಪಣೆಗಾಗಿ ಗಣೇಶ್ ಅವರು ಬರೋಬ್ಬರಿ ಎರಡು ವರೆ ಕೋಟಿ ರೂ. ಗಳನ್ನ ಸಂಭಾವನೆ ಪಡೆದಿದ್ದಾರೆ ಎಂದು ಆಪ್ತ ಮೂಲಗಳು ತಿಳಿಸಿದೆ. ಏನೇ ಆಗಲಿ ಸ್ಟಾರ್ ನಟರು ಬೆಳ್ಳಿ ತೆರೆಯಲ್ಲಿ ಮಿಂಚುವುದರ ಜೊತೆಗೆ ಕಿರುತೆರೆಯ ಮೂಲಕ ಕೂಡ ಆದಾಯದ ಮೂಲಗಳನ್ನು ಕಂಡುಕೊಂಡು ತಮ್ಮ ಜೀವನ ಶೈಲಿಯನ್ನು ಮತ್ತಷ್ಟು ಐಷಾರಾಮಿ ಆಗಿ ಮಾಡಿಕೊಂಡಿದ್ದಾರೆ.