ನಟ ಧ್ರುವ ಸರ್ಜಾ ಪತ್ನಿ ಪ್ರೇರಣಾ ಸರ್ಜಾ ಅವರ ಸೀಮಂತ ಕಾರ್ಯಕ್ರಮ ಹೇಗಿತ್ತು ಗೊತ್ತಾ

ಇತ್ತೀಚೆಗೆ ತಾನೇ ನಟ ಧೃವಸರ್ಜಾ ಅವರು ತಂದೆ ಆಗುತ್ತಿರೋ ಸಿಹಿ ಸುದ್ದಿ ಹೊರ ಬಿದ್ದಿತ್ತು. ಮಾರ್ಟಿನ್ ಸಿನಿಮಾದ ಶೂಟಿಂಗ್ ನಲ್ಲಿ ಸಖತ್ ಬಿಝಿಯಾಗಿದ್ದ ನಟ ಧೃವಸರ್ಜಾ ಅವರು ಇದರ ನಡುವೆಯೇ ತಮ್ಮ ವೈಯಕ್ತಿಕ ಬದುಕಿನಲ್ಲಿ ಸಂಭ್ರಮದ ಸುದ್ದಿಗೆ ಸಾಕ್ಷಿಯಾಗಿದ್ದಾರೆ. ಹೌದು ಧೃವ ಸರ್ಜಾ ಅವರು ಸಾಮಾನ್ಯವಾಗಿ ಹೆಚ್ಚಾಗಿ ಸೋಶಿಯಲ್ ಮೀಡಿಯಾಗಳಲ್ಲಿ ಕಾಣಿಸಿಕೊಳ್ಳೋದಿಲ್ಲ. ಒಂದು ವೇಳೆ ಅವರು ಸಕ್ರೀಯವಾಗಿ ತೊಡಗಿಕೊಂಡಿದ್ದಾರೆ ಅಂದ್ರೆ ಅದು ಇನ್ಸ್ಟಾಗ್ರಾಮ್ ನಲ್ಲಿ ಮಾತ್ರ. ಇನ್ಸ್ಟಾಗ್ರಾಮ್ ನಲ್ಲಿ ತಮ್ಮ ಪ್ರೀತಿಯ ಮಡದಿ ಪ್ರೇರಣಾ ತುಂಬು ಗರ್ಭಿಣಿ ಆಗಿರೋ ಅವರೊಟ್ಟಿಗೆ ಫೋಟೋ ಶೂಟ್ ಜೊತೆಗೆ ಆಲ್ಬಂ ಸಾಂಗ್ ಮಾಡಿಸಿ ತಮ್ಮ ಇನ್ಸ್ಟಾಗ್ರಾಮ್ ನಲ್ಲಿ ವೀಡಿಯೋ ಪೋಸ್ಟ್ ಮಾಡುವ ಮೂಲಕ ತಾನು ತಂದೆ ಆಗ್ತಿರೋ ಸಂತಸದ ವಿಚಾರವನ್ನು ತಿಳಿಸಿದ್ರು.

ಇದು ಸೋಶಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗಿತ್ತು. ಇದೀಗ ಧೃವಸರ್ಜಾ ಅವರು ತಮ್ಮ ಪ್ರೀತಿಯ ಮಡದಿ ಪ್ರೇರಣಾ ಅವರ ಸೀಮಂತ ಕಾರ್ಯಕ್ರಮವನ್ನು ಅದ್ದೂರಿಯಾಗಿ ಮಾಡಿದ್ದಾರೆ. ತಮ್ಮ ಪತ್ನಿ ಪ್ರೇರಣಾ ಅವರಿಗೆ ಕೇವಲ ಕುಟುಂಬದವರು, ಸ್ನೇಹಿತರು ಮಾತ್ರ ಅಲ್ಲ ಇಡೀ ಚಿತ್ರರಂಗದ ಸ್ನೇಹಿತರನ್ನೆಲ್ಲರ ಸಮ್ಮುಖದಲ್ಲಿ ತಮ್ಮ ಸೀಮಂತ ಕಾರ್ಯಕ್ರಮ ನಡೆಯಬೇಕು ಎಂಬ ಇಚ್ಚೆ ಇತ್ತಂತೆ. ಅದರಂತೆಯೇ ಧೃವಸರ್ಜಾ ಅವರು ತಮ್ಮ ಕುಟುಂಬ ಮತ್ತು ಸ್ನೇಹಿತ ವರ್ಗ, ಸಿನಿಮಾ ಸ್ನೇಹಿತರನ್ನೆಲ್ಲಾ ತಮ್ಮ ಮಡದಿ ಚೊಚ್ಚಲ ಸೀಮಂತ ಕಾರ್ಯಕ್ರಮಕ್ಕೆ ಆಹ್ವಾನ ನೀಡಿದ್ದಾರೆ. ಅದರಂತೆ ಚಿತ್ರ ನಟಿ ತಾರಾ ಅನುರಾಧಾ, ನಟ, ನಿರ್ದೇಶಕ ಪ್ರಥಮ್ ಸೇರಿದಂತೆ ಇನ್ನೊಂದಷ್ಟು ಆಪ್ತ ಸ್ನೇಹಿತರು ಸೀಮಂತ ಕಾರ್ಯಕ್ರಮದಲ್ಲಿ ಭಾಗವಹಿಸಿದರು.

ಅದರ ಜೊತೆಗೆ ಸೋದರ ಮಾವ ನಟ ಅರ್ಜುನ್ ಸರ್ಜಾ, ಅತ್ತಿಗೆ ಮೇಘನಾ ಸುಂದರ್ ರಾಜ್ ಸೇರಿದಂತೆ ಗಣ್ಯರು ಆಗಮಿಸಿ ಪ್ರೇರಣ ಅವರಿಗೆ ಶುಭ ಹರಸಿದ್ದಾರೆ. ಇನ್ನು ನಟ ಧೃವಸರ್ಜಾ ಅವರು 2019ರಲ್ಲಿ ಪ್ರೇರಣಾ ಅವರ ಜೊತೆ ಸಪ್ತಪದಿ ತುಳಿದಿದ್ದರು. ಇವರಿಬ್ಬರು ಆಪ್ತ ಗೆಳೆಯರಾಗಿ ತದ ನಂತರ ಈ ಗೆಳೆತನದ ಸಲುಗೆ ಪ್ರೀತಿಗೆ ತಿರುಗಿ ನಂತರ ಕುಟುಂಬದವರ ಒಪ್ಪಿಗೆ ಪಡೆದು ಬೆಂಗಳೂರಿನಲ್ಲಿ ಅದ್ದೂರಿಯಾಗಿ ಮದುವೆ ಆಗಿದ್ದರು. ಇವರ ವಿವಾಹವಾಗಿ ಮೂರು ವರ್ಷಕ್ಕೆ ಇದೀಗ ಇವರಿಬ್ಬರು ಪೋಷಕರಾಗುವ ಮೂಲಕ ತಮ್ಮ ದಾಂಪತ್ಯ ಭಾಂದವ್ಯವನ್ನು ಮತ್ತಷ್ಟು ಸಂತೋಷವಾಗಿಸಿಕೊಳ್ಳುತ್ತಿದ್ದಾರೆ. ಇನ್ನು ಸೀಮಂತ ಕಾರ್ಯಕ್ರಮದಲ್ಲಿ ಪ್ರೇರಣಾ ಅವರಿಗೆ ವಿಶೇಷವಾಗಿ ಮಾವ ಅರ್ಜುನ್ ಸರ್ಜಾ ಅವರು ಅತ್ಯಾಪ್ತ ತುಂಬು ಪ್ರೀತಿಯಿಂದ ಆಶೀರ್ವಾದ ಮಾಡುತ್ತಿದ್ದ ದೃಶ್ಯ ಇಡೀ ಸೀಮಂತ ಕಾರ್ಯಕ್ರಮದಲ್ಲಿ ಗಮನ ಸೆಳೆಯಿತು.

Leave a Reply

%d bloggers like this: