ನಟ ಭಯಂಕರ ರವಿಶಂಕರ್ ಅವರ ಮಗ ಯಾರು ಗೊತ್ತಾ? ಇವರ ಮಗ ಕೂಡ ದೊಡ್ಡ ನಟ

ತನ್ನ ಆಕ್ರಮಣಕಾರಿ ನಟನೆಯ ಮೂಲಕ ಕನ್ನಡ ಸಿನಿ ಪ್ರೇಕ್ಷಕರಿಗೆ ಮೋಡಿ ಮಾಡಿರುವ ಆರ್ಮುಗಂ ಖ್ಯಾತಿಯ ನಟ ರವಿ ಶಂಕರ್ ಅವರ ಪುತ್ರ ಸ್ಯಾಂಡಲ್ ವುಡ್ ಗೆ ಎಂಟ್ರಿಕೊಡಲು ಸಜ್ಜಾಗುತ್ತಿದ್ದಾರೆ. ಹೌದು ಖಳ ನಟ ರವಿಶಂಕರ್ ಕಂಠದಾನ ಕಲಾವಿದನಾಗಿ ಭಾರತೀಯ ಚಿತ್ರರಂಗದಲ್ಲಿ ಅಪಾರ ಪ್ರಸಿದ್ದತೆ ಗಳಿಸಿದ್ದರು‌. ತೆರೆಯ ಹಿಂದೆ ಹೆಸರು ಮಾಡಿದ್ದ ರವಿಶಂಕರ್ ಅವರಿಗೆ ತೆರೆಯ ಮೇಲೆ ಮಿಂಚಲು ಅವಕಾಶ ಮಾಡಿಕೊಟ್ಟಿದ್ದು ಸ್ಯಾಂಡಲ್ ವುಡ್ ಬಾದ್ ಶಾ ಕಿಚ್ಚ ಸುದೀಪ್. ಸುದೀಪ್ ಅವರು ತಮ್ಮ ನಿರ್ದೇಶನದ ಕೆಂಪೇಗೌಡ ಚಿತ್ರದಲ್ಲಿ ತಮ್ಮ ಎದುರು ಘರ್ಜಿಸಲು ಆರ್ಮುಗಂ ಪಾತ್ರಕ್ಕಾಗಿ ನಟ ರವಿಶಂಕರ್ ಅವರನ್ನ ಆಯ್ಕೆ ಮಾಡಿಕೊಂಡರು. ಸಿಕ್ಕ ಅವಕಾಶವನ್ನು ಸೂಕ್ತವಾಗಿ ಬಳಸಿಕೊಂಡು ರವಿಶಂಕರ್ ತಮ್ಮ ಚೊಚ್ಚಲ ಚಿತ್ರದಲ್ಲೇ ಘರ್ಜಿಸಿ ಕನ್ನಡ ಸಿನಿ ಪ್ರೇಕ್ಷಕರ ಮನದಲ್ಲಿ ಹೆಜ್ಜೆ ಇರಿಸೇ ಬಿಟ್ಟರು. ಕೆಂಪೇಗೌಡ ಚಿತ್ರದಲ್ಲಿ ಆರ್ಮುಗಂ ಪಾತ್ರದಲ್ಲಿ ನಟ ರವಿಶಂಕರ್ ಅವರ ಕಂಚಿನ ಕಂಠ, ಉರಿ ನೋಟದ ಕಣ್ಣುಗಳು, ಖಡಕ್ ಡೈಲಾಗ್ ಡೆಲಿವರಿ,ನಟನೆ ಸಿನಿ ಪ್ರೇಕ್ಷಕರಿಗೆ ಮೋಡಿ ಮಾಡಿತು.

ಇವರ ಅಮೋಘ ಅಭಿನಯಕ್ಕೆ ಕನ್ನಡ ಸಿನಿಮಾರಂಗದಲ್ಲಿ ಅವಕಾಶಗಳ ಸುರಿಮಳೆಯೇ ಸುರಿಯಿತು. ಸಾಲು ಸಾಲು ಸಿನಿಮಾಗಳಲ್ಲಿ ನಟಿಸುವ ಬಹುಬೇಡಿಕೆಯ ಖಳ ನಟರಾಗಿ ರವಿಶಂಕರ್ ಗುರುತಿಸಿಕೊಂಡರು. ರವಿಶಂಕರ್ ಅವರ ಬಗ್ಗೆ ತಿಳಿಯುವುದಾದರೆ ಅವರು ದಕ್ಷಿಣ ಭಾರತದ ಸುಪ್ರಸಿದ್ದ ನಟ ಸಾಯಿ ಕುಮಾರ್ ಅವರ ಸೋದರ. ನಟ ರವಿಶಂಕರ್ 1986 ರಲ್ಲಿ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟ ಕೇವಲ ಕಂಠದಾನ ಕಲಾವಿದರಾಗಿ ಗುರುತಿಸಿಕೊಳ್ಳದೇ ನಟ,ನಿ ದೇಶಕನಾಗಿಯೂ ಕೂಡ ಗಮನ ಸೆಳೆದಿದ್ದಾರೆ. ಬಹು ಮುಖ ಪ್ರತಿಭೆ ಆಗಿರುವ ನಟ ರವಿಶಂಕರ್ 1992 ರಲ್ಲಿ ಮಾಲಾಶ್ರೀ ಮತ್ತು ಸುನೀಲ್ ಅವರ ಮುಖ್ಯ ಭೂಮಿಕೆಯಲ್ಲಿ ತೆರೆ ಕಂಡ ಹಳ್ಳಿ ರಾಧಾ ಡೆಲ್ಲಿ ಕೃಷ್ಣ ಚಿತ್ರದಲ್ಲಿ ವಿಲನ್ ಆಗಿ ಚಂದನವನಕ್ಕೆ ಎಂಟ್ರಿ ಆಗುತ್ತಾರೆ.

ನಟ ರವಿಶಂಕರ್ ಅವರು ಕೇವಲ ನಟನೆ, ಡಬ್ಬಿಂಗ್ ಮಾತ್ರ ಅಲ್ಲ, ನಿರ್ದೆಶಕನಾಗಿಯೂ ಕೂಡ ಯಶಸ್ಸನ್ನು ಕಂಡವರು. ಹೌದು ನಿರ್ದೇಶಕನಾಗಿ ರವಿಶಂಕರ್ 2004 ರಲ್ಲಿ ದುರ್ಗಿ ಎಂಬ ಚಿತ್ರದಲ್ಲಿ ಮಾಲಾಶ್ರೀ ಅವರಿಗೆ ಆಕ್ಷನ್ ಕಟ್ ಹೇಳಿ ಸೈ ಎನಿಸಿಕೊಂಡಿದ್ದಾರೆ. ಇದೀಗ ನಟ ರವಿಶಂಕರ್ ಅವರು ತಮ್ಮ ಪುತ್ರ ಅದ್ವೈತ್ ಅವರನ್ನ ಸ್ಯಾಂಡಲ್ ವುಡ್ ಗೆ ಪರಿಚಯಿಸುವ ಯೋಜನೆ ಹಾಕಿಕೊಂಡಿದ್ದಾರೆ. ಈಗಾಗಲೇ ಅದ್ವೈತ್ ಮುಂಬೈ ಫಿಲ್ಮ್ ಇನ್ಸ್ಟಿಟ್ಯೂಟ್ ನಲ್ಲಿ ನಟನೆಯ ತರಬೇತಿ ಪಡೆದುಕೊಂಡಿದ್ದಾರಂತೆ. ಇನ್ನು ರವಿಶಂಕರ್ ಅವರು ತಮ್ಮ ಪುತ್ರನಿಗಾಗಿ ಒಂದು ಲವ್ ಸ್ಟೋರಿ ಸಿದ್ದಪಡಿಸಿಕೊಂಡಿದ್ದು ತಾವೇ ನಿರ್ದೇಶನ ಮಾಡುವ ಪ್ಲಾನ್ ಮಾಡಿಕೊಂಡಿದ್ದಾರಂತೆ.

Leave a Reply

%d bloggers like this: