ನನ್ನ ತಂದೆ ಸತ್ತ ನಂತರ ದರ್ಶನ್ ಕಾಲ್ ಮಾಡಿ ನಿಮ್ಮ ಮಗಳ ಜವಾಬ್ದಾರಿ ನನ್ನದು ಅಂದಿದ್ರು, ಆದ್ರೆ ಈಗ -ಬುಲೆಟ್ ಪ್ರಕಾಶ್ ಪುತ್ರ ಹೇಳಿದ್ದೇನು

ಸ್ಯಾಂಡಲ್ ವುಡ್ ಹಾಸ್ಯ ಕಲಾವಿದರ ಪೈಕಿ ದಿವಂಗತ ನಟ ಬುಲೆಟ್ ಪ್ರಕಾಶ್ ಕೂಡ ಒಬ್ಬರಾಗಿದ್ದರು.ತನ್ನ ಡೈಲಾಗ್ ಡೆಲಿವರಿ ಮೂಲಕ ಹಾಸ್ಯ ಪ್ರಜ್ಞೆ ಮೂಲಕ ಕನ್ನಡ ಸಿನಿ ರಸಿಕರನ್ನು ಎರಡು ದಶಕಗಳಿಗಿಂತ ಹೆಚ್ಚು ಕಾಲ ರಂಜಿಸಿದ ನಟ ಬುಲೆಟ್ ಪ್ರಕಾಶ್ 325 ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ.ಬುಲೆಟ್ ಪ್ರಕಾಶ್ ಅವರು ಸ್ವತಃ ತಾವೇ ರಂಗಾಯಣ ರಘು ಅವರೊಟ್ಟಿಗೆ ಐತಲಕ್ಕಡಿ ಎಂಬ ಸಿನಿಮಾ ನಿರ್ಮಾಣ ಕೂಡ ಮಾಡಿದ್ದರು.ದೇಹದ ತೂಕ ಕಡಿಮೆ ಗೊಳಿಸಿದ ನಂತರ ನಟ ಬುಲೆಟ್ ಪ್ರಕಾಶ್ ಅವರ ಆರೋಗ್ಯದಲ್ಲಿ ಏರು ಪೇರಾಗಿತ್ತು.ಒಂದಷ್ಟು ವರ್ಷಗಳ ಕಾಲ ಉಸಿರಾಟ ಸಮಸ್ಯೆ ಕಾಣಿಸಿಕೊಂಡಿತ್ತು.ಇದರ ನಡುವೆ ಆರ್ಥಿಕವಾಗಿ ನಷ್ಟವೊಂದಿದ್ದ ಬುಲೆಟ್ ಪ್ರಕಾಶ್ ಅವರಿಗೆ ಇತ್ತ ಸಿನಿಮಾಗಳಲ್ಲಿ ಅವಕಾಶ ಕಡಿಮೆ ಆಗಿತ್ತು.ಒಟ್ಟಾರೆಯಾಗಿ ಇಂತಹ ಸಂಕಷ್ಟದ ಸಂಧರ್ಭದಲ್ಲಿ ಬುಲೆಟ್ ಪ್ರಕಾಶ್ ಅವರ ಆರೋಗ್ಯ ಗಂಭೀರ ಸ್ಥಿತಿ ತಲುಪಿ ಕಳೆದ ಡಿಸೆಂಬರ್ 6 ರ 2020 ರಲ್ಲಿ ನಿಧನರಾದರು.

ಕನ್ನಡ ಚಿತ್ರರಂಗದಲ್ಲಿ ಅಪಾರ ಜನಪ್ರಿಯತೆ ಪಡೆದಿದ್ದ ನಟನಿಗೆ ಅವರ ಅಭಿಮಾನಿಗಳು, ಸ್ನೇಹಿತರು, ಬಂಧು ಬಳಗ ಅವರ ನಿಧನಕ್ಕೆ ಕಂಬನಿ ಮಿಡಿಯಿತು.ಬುಲೆಟ್ ಪ್ರಕಾಶ್ ಅವರ ಅಂತ್ಯ ಕ್ರಿಯೆಯು ಕೋವಿಡ್ ಇದ್ದ ಕಾರಣ ಸೀಮಿತ ಕುಟುಂಬ ಸದಸ್ಯರ ಒಳಗೊಂಡಂತೆ ನೆರೆವೇರಿತು. ನಟ ದುನಿಯಾ ವಿಜಯ್, ಪ್ರೇಮ್ ಸೇರಿದಂತೆ ಅನೇಕರು ಆ ಸಂಧರ್ಭದಲ್ಲಿ ಸಾಕಷ್ಟು ಓಡಾಡಿದ್ದರು.ಬುಲೆಟ್ ಪ್ರಕಾಶ್ ಅವರಿಗೆ ಇಬ್ಬರು ಮಕ್ಕಳು ಮೋನಿಕಾ ವರ್ಷಿಣಿ ಮತ್ತು ರಕ್ಷಕ್ ಸೇನಾ.ಬುಲೆಟ್ ಪ್ರಕಾಶ್ ನಿಧನದ ಬಳಿಕ ಆಪ್ತರಾಗಿದ್ದ ದರ್ಶನ್ ಅವರು ಬುಲೆಟ್ ಪ್ರಕಾಶ್ ಅವರ ಪತ್ನಿ ಮಂಜುಳ ಅವರಿಗೆ ಕರೆ ಮಾಡಿ ನಿಮ್ಮ ಮಗಳ ಜವಾಬ್ದಾರಿ ನಾನು ತೆಗೆದುಕೊಳ್ಳುತ್ತೇನೆ.ಧೈರ್ಯವಾಗಿರಿ ಎಂದು ತಿಳಿಸಿದ್ದರಂತೆ.ಈ ವಿಚಾರವಾಗಿ ಖಾಸಗಿ ಸಂದರ್ಶನವೊಂದರಲ್ಲಿ ಸ್ವತಃ ಪ್ರಕಾಶ್ ಪುತ್ರ ರಕ್ಷಕ್ ಸೇನಾ ತಿಳಿಸಿದ್ದಾರೆ.

ಇದರ ಜೊತೆಗೆ ದರ್ಶನ್ ಅಂಕಲ್ ನಮ್ಮ ತಂದೆಯ ಆಪ್ತ ಸ್ನೇಹಿತರು ಅವರ ಗೆಳೆತನದಲ್ಲಿ ನಮ್ಮ ಕುಟುಂಬಕ್ಕೆ ಎಷ್ಟಾದರು ಸಹಾಯ ಮಾಡಬಹುದು.ಆದರೆ ಮನೆಯ ಮಗವಾಗಿ ನನಗೂ ಜವಾಬ್ದಾರಿ ಇವೆ ಎಂದು ತಿಳಿಸಿದ್ದಾರೆ.ಇನ್ನು ರಕ್ಷಕ್ ಸೇನಾ ಸಿನಿಮಾ ಕ್ಷೇತ್ರಕ್ಕೆ ಬರಲು ಎಲ್ಲಾ ರೀತಿಯ ತಯಾರಿ ನಡೆಸಿದ್ದಾರೆ.ಈಗಾಗಲೇ ತರುಣ್ ಸುಧೀರ್ ಕ್ರಿಯೆಟಿವ್ ಹೆಡ್ ಆಗಿ ಜಡೇಶ್ ಕುಮಾರ್ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಗುರು ಶಿಷ್ಯರು ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.ನಟ ಶರಣ್ ಮತ್ತು ನಿಶ್ವಿಕಾ ನಾಯ್ಡು ಅವರ ಮುಖ್ಯ ಭೂಮಿಕೆಯ ಈ ಚಿತ್ರದಲ್ಲಿ ರಕ್ಷಕ್ ಸೇನಾ ವಿಶೇಷ ಪಾತ್ರದಲ್ಲಿ ನಟಿಸುವ ಮೂಲಕ ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಡುತ್ತಿದ್ದಾರೆ.