ನನ್ನ ಕ್ರಿಕೆಟ್ ವೃತ್ತಿ ಜೀವನ ಹಾಳಾಗುವುದಕ್ಕೆ ಎ ಬಿ.ಡಿವಿಲಿಯರ್ಸ್ ಅವರೇ ನೇರ ಕಾರಣ: ಖ್ಯಾತ ಆಟಗಾರ

ನನ್ನ ಅಂತರಾಷ್ಟ್ರೀಯ ಕ್ರಿಕೆಟ್ ವೃತ್ತಿ ಜೀವನ ಹಾಳಾಗುವುದಕ್ಕೆ ಎ ಬಿ.ಡಿವಿಲಿಯರ್ಸ್ ಅವರೇ ನೇರ ಕಾರಣ ಎಂದ ದಕ್ಷಿಣ ಆಫ್ರಿಕಾದ ಮಾಜಿ ಆಟಗಾರ! ವಿಶ್ವದ ಸಾರ್ವಕಾಲಿಕ ಶ್ರೇಷ್ಠ ಬ್ಯಾಟ್ಸ್ ಮನ್ ಎಂದು ಕರೆಸಿಕೊಳ್ಳುವ ಅಬ್ರಹಾಂ ಬೆಂಜಮಿನ್ ಡಿವಿಲಿಯರ್ಸ್ ವಿರುದ್ದ ಸೌತ್ ಆಫ್ರಿಕಾದ ಖ್ಯಾತ ಮಾಜಿ ಆಟಗಾರ ಗಂಭೀರ ಆರೋಪ ಮಾಡಿದ್ದಾರೆ. ಹೌದು ಎಬಿಡಿ ಅಂದಾಕ್ಷಣ ತಟ್ಟನೆ ನೆನಪಾಗುವುದು ಐಪಿಎಲ್ ಕ್ರಿಕೆಟ್, ಅದರಲ್ಲಿಯೂ ರಾಯಲ್ ಚಾಲೇಂಜರ್ಸ್ ಬೆಂಗಳೂರು ತಂಡದ ಅದ್ಭುತ ಬ್ಯಾಟ್ಸ್ ಮನ್ ಎಂಬುದು.ಆಪತ್ಭಾಂಧವ,ಮಿಸ್ಟರ್ 360* ಡಿಗ್ರಿ , ಸೂಪರ್ ಮ್ಯಾನ್ ಎಂಬೆಲ್ಲ ಬಿರುದು ಹೊಂದಿರುವ ಎಬಿಡಿ ಡಿವಿಲಿಯರ್ಸ್ ಅವರು ನನ್ನ ಅಂತರಾಷ್ಟ್ರೀಯ ಕ್ರಿಕೆಟ್ ಜೀವನಕ್ಕೆ ಮುಳ್ಳಾದರು ಎಂದು ಸೌತ್ ಆಫ್ರಿಕಾದ ಮಾಜಿ ಆಟಗಾರ ಥಾಮಿ ತ್ಸೋಲೆಕಿಲ್ ತಮ್ಮ ನೋವನ್ನು ತೋಡಿಕೊಂಡಿದ್ದಾರೆ.2004-05 ರ ಅವಧಿಯಲ್ಲಿ ಸೌತ್ ಆಫ್ರಿಕಾದ ತಂಡದಲ್ಲಿ ವಿಕೆಟ್ ಕೀಪರ್ ಆಗಿ ಮೂರು ಟೆಸ್ಟ್ ಪಂದ್ಯ ಆಡಿರುವ ಥಾಮಿ ತ್ಸೋಲೆಕಿಲೆ ಉತ್ತಮ ಆಟಗಾರರಾಗಿದ್ದರು.

ಆದರೆ ದುರಾದೃಷ್ಟವಶಾತ್ ಇವರು ಆಗಸ್ಟ್ 2016 ರಂದು 2015 ರ ಹಲವಾರು ದೇಶಿಯ ಕ್ರಿಕೆಟ್ ಗಳಲ್ಲಿ ಮ್ಯಾಚ್ ಫಿಕ್ಸಿಂಗ್ ಆರೋಪದಡಿ ಬರೋಬ್ಬರಿ ಹನ್ನೆರಡು ವರ್ಷಗಳ ಕಾಲ ಯಾವುದಕ್ಕೆ ಕ್ರಿಕೆಟ್ ಪಂದ್ಯಗಳಲ್ಲಿ ಭಾಗವಹಿಸದಂತಾಗಿ ನಿಷೇಧಕ್ಕೆ ಒಳಪಟ್ಟರು.ಇದೀಗ ಇವರು ಎಬಿಡಿ ಅವರ ಮೇಲೆ ಗಂಭೀರ ಆರೋಪ ಮಾಡುವುದರ ಮೂಲಕ ಸುದ್ದಿ ಆಗಿದ್ದಾರೆ. ಥಾಮಿ ತ್ಸೋಲೆಕಿಲ್ ಅವರೇ ಹೇಳುವಂತೆ ಎಬಿ ಡಿವಿಲಯರ್ಸ್ 2004 ರಲ್ಲಿ ಟೆಸ್ಟ್ ಕ್ರಿಕೆಟ್ ಗೆ ಪಾದಾರ್ಪಣೆ ಮಾಡುವ ಮೂಲಕ ಅಂತರಾಷ್ಟ್ರೀಯ ಪಂದ್ಯಕ್ಕೆ ಹೆಜ್ಜೆ ಇಟ್ಟರು.ಆದರೆ ಇತ್ತ,ನನಗೆ ಅದೇ ಪಂದ್ಯವೇ ಕೊನೆಯಾಯಿತು.ಪ್ರಮುಖವಾಗಿ ಥಾಮಿ ಹೇಳುವಂತೆ ಸೌತ್ ಆಫ್ರಿಕಾದ ನಾಯಕ ಮಾರ್ಕ್ ಚಾಚರ್ ಸಕ್ರೀಯವಾಗಿದ್ದ ಕಾಲದಿಂದಲೂ ಕೂಡ ಒಂದು ದಿನವೂ ವಿಕೆಟ್ ಕೀಪಿಂಗ್ ಬಗ್ಗೆ ಆಸಕ್ತಿ ತೊರದ ಎಬಿಡಿ ನಾನು ಎಂಟ್ರಿ ಆದ ಕೂಡಲೇ ವಿಕೆಟ್ ಕೀಪಿಂಗ್ ಜವಾಬ್ದಾರಿ ನಾನೇ ತೆಗೆದುಕೊಳ್ಳುತ್ತೇನೆ ಎಂದರು.

ಅಷ್ಟೇ ಅಲ್ಲದೇ ಮಾರ್ಕ್ ಚೌಚರ್ ನಿವೃತ್ತಿಯ ನಂತರ ನಾನು ವಿಕೆಟ್ ಕೀಪಿಂಗ್ ಮಾಡುವುದಾಗಿ ತಿಳಿಸಿದರು ಸಹ ನನಗೆ ಅವಕಾಶ ಕೊಡದೇ ಮೂಲೆಗುಂಪಾಗಿಸಿ ತಾವೇ ವಿಕೆಟ್ ಕೀಪಿಂಗ್ ಮಾಡಿದರು.ದೇಶಿಯ ಕ್ರಿಕೆಟ್ ಲೀಗ್ ನಲ್ಲಿ ನಾನೇ ಅತಿ ಹೆಚ್ಚು ರನ್ ಗಳಿಸಿದ್ದೇನೆ,ಆದರೆ ಎಬಿ ಡಿವಿಲಿಯರ್ಸ್ ವಿಕೆಟ್ ಕೀಪಿಂಗ್ ಮಾಡುತ್ತಿದ್ದ ಕಾರಣ ನನ್ನನ್ನ ಅಲಕ್ಷ್ಯ ಮಾಡಲಾಯಿತು.ಹೀಗೆ ನನಗೆ ದೊರಕಬೇಕಿದ್ದ ಅಂತರಾಷ್ಟ್ರೀಯ ಪಂದ್ಯಗಳ ಅವಕಾಶ ತಪ್ಪಿಸಿ ನನಗೆ ಅನ್ಯಾಯವಾಗಲು ಕಾರಣಕರ್ತವಾಗಿದ್ದು ಇದೇ ಎಬಿಡಿವಿಲಿಯರ್ಸ್ ಎಂದು ಎಬಿಡಿ ವಿರುದ್ದ ಸೌತ್ ಆಫ್ರಿಕಾದ ಮಾಜಿ ಆಟಗಾರ ಥಾಮಿ ತ್ಸೋಲೆಕಿಲ್ ಅಸಮಾಧಾನ ಹೊರ ಹಾಕಿದ್ದಾರೆ. ಈ ವಿಚಾಯ ಇದೀಗ ಸೌತ್ ಆಫ್ರಿಕಾ ಕ್ರಿಕೆಟ್ ನಲ್ಲಿ ಭಾರಿ ಸುದ್ದಿಯಾಗಿದೆ.

Leave a Reply

%d bloggers like this: