ನನಗೆ ಏನಾದ್ರು ಆಗಿದ್ರೆ ನಿನ್ನನ್ನ ಜೀವಂತವಾಗಿ ಸುಟ್ಟು ಬಿಡುತ್ತಾರೆ ಎಂದ ಸಚಿನ್ ತೆಂಡೂಲ್ಕರ್! ನಿಜಕ್ಕೂ ಆಗಿದ್ದೇನು

ದೇಶ ದೇಶಗಳ ನಡುವೆ ಸೌಹಾರ್ದತೆಯ ಮನೋಭಾವ ಉಂಟು ಮಾಡುವ ವೇದಿಕೆಯಲ್ಲಿ ಕ್ರೀಡೆ ಕೂಡ ಒಂದು ಪ್ರಮುಖವಾದ ಪಾತ್ರ ನಿರ್ವಹಿಸುತ್ತದೆ. ಅಂತೆಯೇ ಈ ಕ್ರೀಡಾ ಕ್ಷೇತ್ರದಲ್ಲಿ ಎದುರಾಳಿ ತಂಡ ಯಾವುದೇ ದೇಶ ಆಗಿದ್ದರು ಕೂಡ ಆಟಗಾರರಲ್ಲಿ ಪರಸ್ಪರ ಪ್ರೀತಿ ವಿಶ್ವಾಸ ಇದ್ದೇ ಇರುತ್ತದೆ. ಆಟಗಾರರ ನಡುವೆ ಇಂತಹ ಭಾಂದವ್ಯವನ್ನು ಅನೇಕ ಉದಾಹರಣೆಗಳ ಮೂಲಕ ಕಾಣಬಹುದು. ಇತ್ತೀಚೆಗೆ ಸೋಶಿಯಲ್ ಮಿಡಿಯಾದಲ್ಲಿ ಪಾಕಿಸ್ತಾನದ ಪ್ರಸಿದ್ದ ಬೌಲರ್ ಆದ ಶೋಯಬ್ ಅಖ್ತರ್ ಅವರು ಮೈದಾನದಲ್ಲಿ ತಮ್ಮ ಮತ್ತು ಸಚಿನ್ ಅವರ ನಡುವೆ ನಡೆದ ಪ್ರಸಂಗವೊಂದನ್ನ ಹಂಚಿಕೊಂಡಿದ್ದಾರೆ. ಇದೀಗ ಈ ವಿಚಾರ ಸೋಶಿಯಲ್ ಮೀಡಿಯಾ ದಲ್ಲಿ ಸಖತ್ ವೈರಲ್ ಆಗಿದೆ

ಹೌದು ಪಾಕಿಸ್ತಾನದ ಖ್ಯಾತ ಆಟಗಾರ ಆದ ಶೋಯಬ್ ಅಖ್ತರ್ ಅವರು ಆಧುನಿಕತೆಗೆ ಹೆಚ್ಚು ಒಗ್ಗುಕೊಂಡಿದ್ದು ಸೋಶಿಯಲ್ ಮೀಡಿಯಾದಲ್ಲಿ ಸಖತ್ ಆಕ್ಠೀವ್ ಆಗಿರುತ್ತಾರೆ. ಅದರಂತೆ ತಮ್ಮದೇ ಯೂಟ್ಯೂಬ್ ಚಾನೆಲ್ ನಲ್ಲಿ ಒಂದಷ್ಟು ವೀಡಿಯೋಗಳನ್ನ ಅಪ್ ಲೋಡ್ ಕೂಡ ಮಾಡುತ್ತಿರುತ್ತಾರೆ. ಅಂತೆಯೇ ತಮ್ಮ ಯೂಟ್ಯೂಬ್ ನಲ್ಲಿ ಸ್ಟ್ಯಾಂಡ್ ಅಪ್ ಕಾಮಿಡಿಯನ್ ಆದಂತಹ ತನ್ಮಯ್ ಭಟ್ ಮತ್ತು ಜಾಕಿರ್ ಖಾನ್ ಮತ್ತು ಇನ್ನೊಂದಷ್ಟು ಜನರ ಜೊತೆ ಚಾಟಿಂಗ್ ಮಾಡುತ್ತಿರುತ್ತಾರೆ. ಈ ಸಂಧರ್ಭದಲ್ಲಿ ಶೋಯೆಬ್ ಅಖ್ತರ್ ಅವರು ನನ್ನ ಬಳಿ ನಡೆದಂತಹ ಒಂದಷ್ಟು ಘಟನೆಗಳಿವೆ. ಅವುಗಳನ್ನ ನಿಮ್ಮೊಂದಿಗೆ ಹಂಚಿಕೊಳ್ಳುತ್ತೇನೆ ಎಂದು ತಮ್ಮ ಮತ್ತು ಸಚಿನ್ ಅವರ ನಡುವೆ ಆದಂತಹ ಸನ್ನಿವೇಶವೊಂದನ್ನ ಹಂಚಿಕೊಂಡಿದ್ದಾರೆ.

ಲಕ್ನೋದಲ್ಲಿ ಭಾರತ ಮತ್ತು ಪಾಕಿಸ್ತಾನ ಪಂದ್ಯ ನಡೆಯುತ್ತಿರುತ್ತದೆ. ಈ ಪಂದ್ಯದ ನಂತರ ಅಂದು ರಾತ್ರಿ ಪಾರ್ಟಿ ಏರ್ಪಡಿಸಲಾಗಿರುತ್ತದೆ. ಆ ಪಾರ್ಟಿಗೆ ಭಾರತ ಮತ್ತು ಪಾಕಿಸ್ತಾನದ ಆಟಗಾರರೆಲ್ಲರು ಭಾಗವಹಿಸಿರುತ್ತಾರೆ. ಆಗ ಸಚಿನ್ ಅವರ ಸಮೀಪ ಹೋಗಿ ನೀವು ತುಂಬ ಕುಳ್ಳರಿದ್ದೀರಿ ನಿಮ್ಮನ್ನ ನಾನು ಹೊತ್ತು ಕೊಂಡು ಹೋಗುವೆ ಎಂದು ನನ್ನ ಭುಜದ ಮೇಲೆ ಹೊತ್ತು ಹೋಗುತ್ತಿರುತ್ತೇನೆ. ಆ ಸಂಧರ್ಭದಲ್ಲಿ ಆಕಸ್ಮಿಕವಾಗಿ ನಾವಿಬ್ಬರು ಕೆಳಗೆ ಬೀಳುತ್ತೇವೆ. ನಾನು ಮತ್ತು ಸಚಿನ್ ಇಬ್ಬರೂ ಪರಸ್ಪರ ನೋಡಿ ಏನಾದ್ರೂ ಗಾಯ ಆಗಿದಿಯೋ ಎಂದು ವಿಚಾರಿಸಿಕೊಳ್ಳುತ್ತೇವೆ.

ಆಗ ಸಚಿನ್ ಅವರು ನಕ್ಕು ನನಗೆ ಏನಾದ್ರು ಹೆಚ್ಚು ಕಡಿಮೆ ಆಗಿದ್ರೆ ನಿನ್ನನ್ನ ನಮ್ಮವರು ಭಾರತದವರು ಜೀವ ದಹನ ಮಾಡಿ ಬಿಡುತ್ತಿದ್ದರು ಎಂದು ಹೇಳುತ್ತಾರೆ. ಆಗ ಶೋಯೆಬ್ ಅಖ್ತರ್ ಅವರು ಎದ್ದು ಬಿದ್ದು ನಗುತ್ತಾರಂತೆ. ಸಚಿನ್ ಕೂಡ ತುಂಬಾ ಜೋರಾಗಿ ನಗುತ್ತಿರುತ್ತಾರಂತೆ. ತದ ನಂತರ ಪರಸ್ಪರ ಆಲಂಗಿಸಿಕೊಂಡು ನೀನು ಎವರ್ ಗ್ರೀನ್ ಬೆಸ್ಟ್ ಪ್ಲೇಯರ್ ಎಂದು ಮೆಚ್ಚುಗೆ ವ್ಯಕ್ತಪಡಿಸುತ್ತಾರಂತೆ. ಈ ಘಟನೆಯನ್ನು ಶೋಯೆಬ್ ಅಖ್ತರ್ ಅವರು ತಮ್ಮ ಯೂಟ್ಯೂಬ್ ಚಾಟಿಂಗ್ ನಲ್ಲಿ ನೆನೆದು ತಮ್ಮ ಮತ್ತು ಸಚಿನ್ ಅವರ ನಡುವೆ ನಡೆದ ಹಾಸ್ಯ ಪ್ರಸಂಗ ಹಂಚಿಕೊಂಡಿದ್ದಾರೆ.

Leave a Reply

%d bloggers like this: