ನಾಯಕಿಯಾಗಿ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ನಟ ಪ್ರೇಮ್ ಅವರ ಮಗಳು

ಸ್ಯಾಂಡಲ್ ವುಡ್ ನಟ ರಾಕ್ಷಸ ಡಾಲಿ ಧನಂಜಯ್ ನಿರ್ಮಾಣದಲ್ಲಿ ತಯಾರಾಗುತ್ತಿರುವ ಹೊಸ ಸಿನಿಮಾದಲ್ಲಿ ನಾಯಕಿಯಾಗಿ ಲವ್ಲೀ ಸ್ಟಾರ್ ಪ್ರೇಮ್ ಪುತ್ರಿ ಆಯ್ಕೆ ಆಗಿದ್ದಾರೆ. ಈ ಮೂಲಕ ಪ್ರೇಮ್ ಪುತ್ರಿ ಅಮೃತಾ ಚಂದನವನದಲ್ಲಿ ನಕ್ಷತ್ರತಾರೆಯಾಗಿ ಮಿಂಚಲು ಸಿದ್ದವಾಗಿದ್ದಾರೆ. ಹೌದು ಇತ್ತೀಚೆಗೆ ತಾನೇ ಕೆಲವು ದಿನಗಳ ಹಿಂದೆಯಷ್ಟೇ ಚಂದನವನದ ಕನಸಿನ ರಾಣಿ ಮಾಲಾಶ್ರೀ ಪುತ್ರಿ ಕೂಡಾ ದರ್ಶನ್ ಅವರ ಸಿನಿಮಾಗೆ ನಾಯಕಿಯಾಗಿ ಆಯ್ಕೆಯಾಗಿ ಆಗುವ ಮುಖಾಂತರ ಬಣ್ಣದ ಲೋಕಕ್ಕೆ ಪಾದಾರ್ಪಣೆ ಮಾಡಿದ್ದಾರೆ. ಇದೀಗ ಚಂದನವನದಲ್ಲಿ ಮತ್ತೊಬ್ಬ ಸ್ಟಾರ್ ಕುಡಿ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಆಗ್ತಿದ್ದಾರೆ.

ಅವರೇ ಲವ್ಲೀ ಸ್ಟಾರ್ ಪ್ರೇಮ್ ಮಗಳು ಅಮೃತಾ. ಹೌದು ನಟ ಡಾಲಿ ಧನಂಜಯ್ ನಿರ್ಮಾಣ ಸಂಸ್ಥೆ ಡಾಲಿ ಪಿಕ್ಚರ್ಸ್ ಅಡಿ ತಯಾರಾಗುತ್ತಿರುವ ಮೂರನೇ ಸಿನಿಮಾ ಟಗರು ಪಲ್ಯ. ಈ ಟಗರು ಪಲ್ಯ ಸಿನಿಮಾದಲ್ಲಿ ನಾಯಕ ನಟರಾಗಿ ನಾಗಭೂಷಣ್ ನಟಿಸುತ್ತಿದ್ದಾರೆ. ಈಗಾಗಲೇ ಇಕ್ಕಟ್, ಬಡವ ರಾಸ್ಕಲ್ ಸೇರಿದಂತೆ ಒಂದಷ್ಟು ಸಿನಿಮಾಗಳಲ್ಲಿ ನಟಿಸಿ ತಮ್ಮ ನಟನೆಯ ಮೂಲಕ ಅಪಾರ ಜನಪ್ರಿಯತೆ ಗಳಿಸಿದ್ದಾರೆ ನಟ ನಾಗಭೂಷಣ್. ಟಗರುಪಲ್ಯ ಎಂಬ ಟೈಟಲ್ ಹೊಂದಿರೋ ಈ ಹೊಸ ಚಿತ್ರ ಬೆಂಗಳೂರಿನ ಬಂಡಿ ಮಹಾಂಕಾಳಿ ದೇವಾಲಯದಲ್ಲಿ ಮುಹೂರ್ತ ನಡೆಸಿಕೊಂಡಿದೆ. ಈ ಚಿತ್ರವನ್ನು ಉಮೇಶ್. ಕೆ.ಕೃಪ ನಿರ್ದೇಶನ ಮಾಡುತ್ತಿದ್ದಾರೆ.

ಇದು ಇವರಿಗೆ ಮೊದಲ ಸಿನಿಮಾವಾಗಿದೆ. ಎಲ್ಲವೂ ಅಂದುಕೊಂಡಂತೆ ಆದರೆ ಇದೇ ಡಿಸೆಂಬರ್ ತಿಂಗಳ ಮೊದಲ ವಾರದಿಂದ ಚಿತ್ರೀಕರಣ ಆರಂಭವಾಗಲಿದೆಯಂತೆ. ಇನ್ನು ಟಗರು ಪಲ್ಯ ಸಿನಿಮಾ ಮಂಡ್ಯ ಮಳವಳ್ಳಿ ಸುತ್ತಾ ಮುತ್ತಾ ಚಿತ್ರೀಕರಣ ಆಗಲಿದೆಯಂತೆ. ಈ ಚಿತ್ರಕ್ಕೆ ವಾಸುಕಿ ವೈಭವ್ ಸಂಗೀತ ನಿರ್ದೇಶನ ಮಾಡುತ್ತಿದ್ದು, ಎಸ್.ಕೆ ರಾವ್ ಕ್ಯಾಮೆರಾ ವರ್ಕ್, ವಿನೋದ್ ಮಾಸ್ಟರ್ ಸಾಹಸ ನಿರ್ದೇಶನವಿದೆ. ಇನ್ನು ಟಗರುಪಲ್ಯ ಅನ್ನೋ ವಿಶಿಷ್ಟ ಶೀರ್ಷಿಕೆ ಹೊತ್ತಿರೋ ಈ ಸಿನಿಮಾದಲ್ಲಿ ಪ್ರಧಾನ ಪಾತ್ರದಲ್ಲಿ ತಾರಾ ಅನುರಾಧ, ಶರತ್ ಲೋಹಿತಾಶ್ವ, ರಂಗಾಯಣ ರಘು ಸೇರಿದಂತೆ ಇನ್ನೂ ಅನೇಕ ಖ್ಯಾತ ಕಲಾವಿದರು ಇರಲಿದ್ದಾರೆ ಎಂದು ಚಿತ್ರತಂಡ ತಿಳಿಸಿದೆ.