ನಾಲ್ಕು ತಿಂಗಳ ಹಿಂದೆ ಮದುವೆ, ಇಂದು ಅವಳಿ ಮಕ್ಕಳಿಗೆ ತಂದೆ ತಾಯಿಯಾದ ದಕ್ಷಿಣ ಭಾರತದ ಸ್ಟಾರ್ ನಟ ನಟಿ

ತಮಿಳಿನ ಲೇಡಿ ಸೂಪರ್ ಸ್ಟಾರ್ ನಟಿ ನಯನಾತಾರಾ ಅವರು ಇದೀಗ ತಮ್ಮ ಅಭಿಮಾನಿಗಳಿಗೆ ಸಂತಸದ ಸುದ್ದಿಯೊಂದನ್ನ ಹಂಚಿಕೊಂಡಿದ್ದಾರೆ. ಹೌದು ನಟಿ ನಯನಾತಾರ ಅವರು ಕಳೆದ ಜೂನ್ ತಿಂಗಳಿನಲ್ಲಿ ತಮಿಳಿನ ಖ್ಯಾತ ನಿರ್ದೇಶಕ ವಿಘ್ನೇಶ್ ಶಿವನ್ ಅವರೊಟ್ಟಿಗೆ ದಾಂಪತ್ಯ ಜೀವನಕ್ಕೆ ಹೆಜ್ಜೆ ಇಟ್ಟಿದ್ದರು. ಆಗ ಒಂದಷ್ಟು ಸುದ್ದಿ ಆಗಿದ್ದರು. ಅದಾದ ನಂತರ ತಮ್ಮ ಸಂಭಾವನೆಯನ್ನ ಏರಿಕೆ ಮಾಡಿಕೊಳ್ಳುವ ಮೂಲಕ ಸುದ್ಥಿಯಾದ್ರು. ತಮಿಳು ಮತ್ತು ತೆಲುಗಿನ ಸೂಪರ್ ಸ್ಟಾರ್ ನಟರೊಂದಿಗೆ ನಟಿಸುವ ಮೂಲಕ ಭಾರಿ ಜನಪ್ರಿಯತೆ ಪಡೆದುಕೊಂಡಿದ್ದು, ದಕ್ಷಿಣ ಭಾರತದ ಬಹು ಬೇಡಿಕೆಯ ನಟಿಯಾಗಿ ಮಿಂಚುತ್ತಿದ್ದಾರೆ.

ಇದುವರೆಗೆ ತಮಿಳು, ತೆಲುಗು, ಕನ್ನಡ, ಮಲೆಯಾಳಂ ಇದೀಗ ಅಟ್ಲೀ ಅವರ ನಿರ್ದೇಶನ ಮಾಡುತ್ತಿರೋ ಶಾರುಖ್ ಖಾನ್ ಸಿನಿಮಾ ಸೇರಿದಂತೆ ಬರೋಬ್ಬರಿ 75ಕ್ಕಿಂತ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ. ಸಾಲು ಸಾಲು ಸೂಪರ್ ಹಿಟ್ ಚಿತ್ರಗಳನ್ನ ನೀಡಿರುವ ನಯನಾತಾರಾ ಅವರಿಗೆ ದಕ್ಷಿಣ ಭಾರತದಲ್ಲಿ ಲೇಡಿ ಸೂಪರ್ ಸ್ಟಾರ್ ಅಂತಾನೇ ಕರೆಯುತ್ತಾರೆ. ದಕ್ಷಿಣ ಭಾರತದಾದ್ಯಂತ ಕೋಟ್ಯಾಂತರ ಅಭಿಮಾನಿ ಬಳಗ ಹೊಂದಿರೋ ನಟಿ ನಯನಾತಾರಾ ಅವರು ಸೋಶಿಯಲ್ ಮೀಡಿಯಾಗಳಲ್ಲಿ ಸಖತ್ ಆಕ್ಟೀವ್ ಆಗಿದ್ದಾರೆ. ಇದೀಗ ನಯನಾ ತಾರ ಅವರು ಒಂದು ಶುಭಸುದ್ದಿಯೊಂದನ್ನ ಶೇರ್ ಮಾಡಿಕೊಂಡಿದ್ದಾರೆ.

ಅದೇನಪ್ಪಾ ಅಂದರೆ ನಟಿ ನಯನಾ ತಾರ ಅವರು ತಾಯಿ ಆಗಿದ್ದಾರೆ. ಅದೂ ಕೂಡ ಅವಳಿ ಮಕ್ಕಳಿಗೆ ಜನ್ಮ ನೀಡಿದ್ದಾರೆ. ಇದು Surogacy ಅಂದರೆ ಬಾಡಿಗೆ ತಾಯಿಯಿಂದ ಜನಿಸಿದ ಮಕ್ಕಳಾಗಿವೆ. ಈ ಮೂಲಕ ನಟಿ ನಯನಾತಾರ ಮತ್ತು ನಿರ್ದೇಶಕ ವಿಘ್ನೇಶ್ ಶಿವನ್ ದಂಪತಿಗಳು ಮುದ್ದಾದ ಎರಡು ಮಕ್ಕಳಿಗೆ ಪೋಷಕರಾಗಿದ್ದಾರೆ. ನಯನಾತಾರ ಮತ್ತು ವಿಘ್ನೇಶ್ ಶಿವನ್ ಎಳೆ ಕಂದಮ್ಮಗಳ ಕಾಲಿಗೆ ಮುತ್ತಿಡುತ್ತಿರೋ ಫೋಟೋವನ್ನ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಶೇರ್ ಮಾಡಿಕೊಂಡು ಈ ಶುಭದಿನದಂದು ನಿಮ್ಮೊಟ್ಟಿಗೆ ಸಂತಸದ ವಿಚಾರವೊಂದನ್ನ ಹಂಚಿಕೊಳ್ಳಲು ಬಯಸುತ್ತೇವೆ. ನಾವು ಅವಳಿ ಗಂಡು ಮಕ್ಕಳ ಪೋಷಕರಾಗಿದ್ದೇವೆ. ನಿಮ್ಮ ಪ್ರೀತಿ ವಿಶ್ವಾಸ ಇದೇ ರೀತಿ ನಮ್ಮೊಟ್ಟಿಗೆ ಇರಲಿ ಎಂದು ಬರೆದು ಪೋಸ್ಟ್ ಮಾಡಿದ್ದಾರೆ‌. ವಿಘ್ನೇಶ್ ಶಿವನ್ ಅವರ ಈ ಪೋಸ್ಟ್ ಗೆ ಅವರ ಅಭಿಮಾನಿಗಳು ಮತ್ತು ಚಿತ್ರೋದ್ಯಮದ ಅವರ ಸಹೋದ್ಯೋಗಿಗಳು ಶುಭ ಹಾರೈಸಿದ್ದಾರೆ.

Leave a Reply

%d bloggers like this: