ನಾಲ್ಕನೇ ಬಾರಿ ತಾತನಾದ ಸಂಭ್ರಮದಲ್ಲಿ ನಟ ರಜನಿಕಾಂತ್ ಅವರು

ಭಾರತೀಯ ಚಿತ್ರರಂಗದ ಸೂಪರ್ ಸ್ಟಾರ್ ನಟ ರಜಿನಿಕಾಂತ್ ಅವರ ಪುತ್ರಿ ಸೌಂದರ್ಯ ಅವರು ಇತ್ತೀಚೆಗೆ ತಾನೇ ತಮ್ಮ 38ನೇ ವರ್ಷದ ಜನ್ಮದಿನಾಚರಣೆಯನ್ನ ಆಚರಿಸಿಕೊಂಡಿದ್ದಾರೆ. ಇದು ಸಾಮಾನ್ಯ ವಿಷಯ. ಆದರೆ ಈ ಸುದ್ದಿ ವೈರಲ್ ಆಗಿರೋದಕ್ಕೆ ಕಾರಣ ಏನಪ್ಪಾ ಅಂದರೆ ಸೌಂದರ್ಯ ಅವರು ತಮ್ಮ ಎರಡು ವರ್ಷದ ಮಗುವನೊಟ್ಟಿಗೆ ಇರೋ ಪೋಟೋವೊಂದನ್ನ ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಸೌಂದರ್ಯ ರಜಿನಿಕಾಂತ್ ಅವರು 1999ರಿಂದ ಸಿನಿಮಾರಂಗದಲ್ಲಿ ಗ್ರಾಫಿಕ್ ಡಿಸೈನರ್ ಆಗಿ ಕೆಲಸ ಮಾಡುತ್ತಿದ್ದಾರೆ. ತಂದೆ ಒಬ್ಬ ಸೂಪರ್ ಸ್ಟಾರ್ ನಟನಾಗಿದ್ದರು ಕೂಡ ಸೌಂದರ್ಯ ಅವರು ತಮ್ಮ ಸ್ವಯಂ ಕೆಲಸದಿಂದ ಇಂಡಸ್ಟ್ರಿಯಲ್ಲಿ ಗುರುತಿಸಿಕೊಂಡಿದ್ದಾರೆ. ಈಗಾಗಲೇ ಸೌಂದರ್ಯ ಅವರು ಕೊಚ್ಚಡೈಯಾನ್, ವೆಲೈಯಿಲ್ಲ ಪಟ್ಟಧಾರಿ 2 ಸಿನಿಮಾ ನಿರ್ದೇಶನ ಮಾಡಿ ತಕ್ಕ ಮಟ್ಟಿಗೆ ಹೆಸರು ಮಾಡಿದ್ದಾರೆ.

2019ರಲ್ಲಿ ವಿಶಾಗನ್ ವನಂಗಮುಡಿ ಅವರನ್ನ ಮದುವೆ ಆಗಿದ್ದಾರೆ. ಇದು ಅವರಿಗೆ ಎರಡನೇ ಮದುವೆ. ಈ ಹಿಂದೆ ಆರ್ ಅಶ್ವಿನ್ ಅವರನ್ನ ಮದುವೆ ಆಗಿದ್ರು. ಇವರಿಬ್ಬರಿಗೂ ಏಳು ವರ್ಷದ ಒಬ್ಬ ಮಗ ಕೂಡ ಇದ್ದ. ಆದರೆ ಕೆಲವು ಭಿನ್ನಾಭಿಪ್ರಾಯಗಳಿಂದ ಡಿವೋರ್ಸ್ ಪಡೆದು ಸೌಂದರ್ಯ ಅವರು ವಿಶಾಗನ್ ಅವರನ್ನ ಮದುವೆ ಆಗಿದ್ದಾರೆ. ಇದೀಗ ಇವರಿಗೆ ಒಂದು ಮಗು ಜನಿಸಿದ್ದು, ಆ ಮಗುವಿನ ಜೊತೆ ಇರೋ ಫೋಟೋವೊಂದನ್ನ ಸೌಂದರ್ಯ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಅದೂ ಕೂಡ ತಮ್ಮ 38ನೇ ವರ್ಷದ ಬರ್ಥ್ ಡೇ ಸಂಭ್ರಮದ ದಿನದಂದು. ಆ ಪೋಟೋದಲ್ಲಿ ರಜಿನಿಕಾಂತ್ ಅವರು ಕೂಡ ಇದ್ದಾರೆ. ತಮ್ಮ ಜನ್ಮದಿನಕ್ಕೆ ಶುಭಕೋರಿದ ಎಲ್ಲರಿಗೂ ಧನ್ಯವಾದ ತಿಳಿಸಿ, ದೇವರುಗಳು ನನಗೆ ಈ ವರ್ಷ ಉತ್ತಮ ಉಡುಗೊರೆ ನೀಡಿ ಆಶೀರ್ವಾದ ಮಾಡಿದ್ದಾರೆ. ನನ್ನ ಮಗ ವೀರ್ ಈ ಅದ್ಭುತ ದೇವರ ಮಗುವನ್ನ ಸದಾ ನನ್ನ ಹಿಂದಿ ಹೊಂದಿರೋದು ಜೀವನದ ನಿಜವಾದ ಆಶೀರ್ವಾದ ಎಂದು ಬರೆದು ಪೋಸ್ಟ್ ಮಾಡಿದ್ದಾರೆ.