ನಾಳೆ ಹಿಂದಿಯಲ್ಲಿ ಕಾಂತಾರ ಚಿತ್ರ ಬಿಡುಗಡೆ, ಹಿಂದಿಯಲ್ಲಿ ಎಷ್ಟು ಥಿಯೇಟರ್ ಗಳು ಸಿಕ್ಕಿವೆ ಗೊತ್ತಾ

ರಿಷಬ್ ಶೆಟ್ಟಿ ಅವರ ಕಾಂತಾರ ಸಿನಿಮಾ ಮತ್ತೊಂದು ದಾಖಲೆ ಮಾಡಲು ಹೊರಟಿದೆ. ಈಗ ಎಲ್ಲೆಲ್ಲೂ ಕಾಂತಾರ ಸಿನಿಮಾದ್ದೇ ಮಾತು‌. ಕಳೆದ ಸೆಪ್ಟೆಂಬರ್ 30ರಂದು ಅದ್ದೂರಿಯಾಗಿ ರಿಲೀಸ್ ಆದ ಕಾಂತಾರ ಸಿನಿಮಾ ಪ್ರೇಕ್ಷಕರಿಂದ ನಿರೀಕ್ಷೆಗೂ ಮೀರಿ ಅಭೂತಪೂರ್ವ ಯಶಸ್ಸನ್ನ ಪಡೆದುಕೊಂಡಿದೆ. ಸಿನಿಮಾ ನೋಡಿದ ಪ್ರತಿಯೊಬ್ಬ ಪ್ರೇಕ್ಷಕರು ಕೂಡ ರಿಷಬ್ ನಟನೆಯ ಬಗ್ಗೆ ಪ್ರಶಂಸೆಯ ಮಾತುಗಳನ್ನಾಡುತ್ತಿದ್ದಾರೆ. ಕಾಂತಾರ ಸಿನಿಮಾದ ವಿಶೇಷತೆ ನೋಡೋದಾದ್ರೆ ಈ ಸಿನಿಮಾವನ್ನ ಮೊದಲು ಕನ್ನಡದಲ್ಲಿ ಮಾತ್ರ ರಿಲೀಸ್ ಮಾಡಲಾಗಿತ್ತು. ಕರ್ನಾಟಕದಾದ್ಯಂತ ಸರಿ ಸುಮಾರು 250ಕ್ಕೂ ಹೆಚ್ಚು ಸಂಖ್ಯೆಯ ಥಿಯೇಟರ್ ಗಳಲ್ಲಿ ರಿಲೀಸ್ ಮಾಡಲಾಗಿತ್ತು.

ಆದರೆ ಸಿನಿಮಾ ಒಳ್ಳೆಯ ಓಪನಿಂಗ್ ಪಡೆದುಕೊಂಡು ಕರ್ನಾಟಕ ಮಾತ್ರ ಅಲ್ಲದೆ ಪರಭಾಷಿಕರಿಂದಲೂ ಕೂಡ ಅದ್ಭುತ ಪ್ರತಿಕ್ರಿಯೆ ಪಡೆದುಕೊಂಡಿತು. ಕಾಂತಾರ ಸಿನಿಮಾ ಹತ್ತರಿಂದ ಹನ್ನೆರಡು ಕೋಟಿಯಲ್ಲಿ ತಯಾರಾದ ಸಿನಿಮಾ. ಆದರೆ ಬಾಕ್ಸ್ ಆಫೀಸ್ ನಲ್ಲಿ ಬರೋಬ್ಬರಿ ಅರವತ್ತರಿಂದ ಎಂಭತ್ತು ಕೋಟಿಯಷ್ಟು ಗಳಿಕೆ ಮಾಡಿದೆ. ಈ ಹಿನ್ನೆಲೆಯಲ್ಲಿ ಕಾಂತಾರ ಸಿನಿಮಾ ನಿರ್ಮಾಣ ಮಾಡಿರುವ ಹೊಂಬಾಳೆ ಫಿಲಂಸ್ ಸಂಸ್ಥೆ ಕಾಂತಾರ ಸಿನಿಮಾವನ್ನ ಇದೀಗ ತೆಲುಗು, ತಮಿಳು, ಮಲೆಯಾಳಂ ಹಾಗೂ ಹಿಂದಿ ಸೇರಿದಂತೆ ಪಂಚಭಾಷೆಗಳಲ್ಲಿ ಪ್ಯಾನ್ ಇಂಡಿಯಾ ಆಗಿ ಮತ್ತೇ ರಿಲೀಸ್ ಮಾಡಲು ಮುಂದಾಗಿದೆ.

ಈಗಾಗಲೇ ಹಿಂದಿ ಸೇರಿದಂತೆ ವಿವಿಧ ಭಾಷೆಗಳಲ್ಲಿ ಕಾಂತಾರ ಸಿನಿಮಾದ ಟ್ರೇಲರ್ ರಿಲೀಸ್ ಆಗಿದ್ದು, ನಾಳೆಯಿಂದಾನೇ ಅಂದರೆ ಶುಕ್ರವಾರದಿಂದ ಪಂಚಭಾಷೆಯಲ್ಲಿ ಕಾಂತಾರ ಸಿನಿಮಾ ರಿಲೀಸ್ ಆಗಲಿದೆ.ಮೂಲಗಳ ಪ್ರಕಾರ ಕಾಂತಾರ ಸಿನಿಮಾ ಬರೋಬ್ಬರಿ 2500ಕ್ಕೂ ಹೆಚ್ಚು ಸ್ಕ್ರೀನ್ ಗಳಲ್ಲಿ ತೆರೆ ಕಾಣಲಿದೆ ಎಂದು ತಿಳಿದು ಬಂದಿದೆ. ಇನ್ನೂರೈವತ್ತು ಚಿತ್ರಮಂದಿರಗಳಿಂದ ಆರಂಭವಾದ ಕಾಂತಾರ ಸಿನಿಮಾ ಇಂದು ಎರಡೂವರೆ ಸಾವಿರ ಪರದೆಗಳಲ್ಲಿ ಮಿಂಚಲು ಸಜ್ಜಾಗಿದೆ. ಇನ್ನು ನೂರು ಕೋಟಿ ಕ್ಲಬ್ ಸೇರುವ ಹೊಸ್ತಿಲಲ್ಲಿ ಇರೋ ಕಾಂತಾರ ಸಿನಿಮಾ ಪಂಚಭಾಷೆಗೆ ಡಬ್ ಆಗ್ತಿರೋದ್ರಿಂದ ಮುನ್ನೂರು ಕೋಟಿಗೂ ಅಧಿಕ ಕಲೆಕ್ಷನ್ ಮಾಡ್ಬೋದು ಎಂದು ಸಿನಿ ಪಂಡಿತರು ಲೆಕ್ಕಾಚಾರ ಹಾಕುತ್ತಿದ್ದಾರೆ.

Leave a Reply

%d bloggers like this: