ಮೈಸೂರಿನಂತೆ ಕರ್ನಾಟಕದ ಎಲ್ಲಾ ಜಿಲ್ಲೆಗಳಿಗೂ ಆಂಬುಲನ್ಸ್ ನೀಡುವುದಾಗಿ ಭರವಸೆ ಕೊಟ್ಟ ಪ್ರಕಾಶ್ ರೈ ಅವರು

ಕನ್ನಡ ಚಿತ್ರರಂಗದ ಧೃವತಾರೆ ಪುನೀತ್ ರಾಜ್ ಕುಮಾರ್ ಅವರು ಅಕಾಲಿಕ ನಿಧನರಾಗಿ ಹತ್ತು ತಿಂಗಳ ಸನಿಹವಾಗಿವೆ. ಆದರೂ ಕೂಡ ಅವರನ್ನ ಅವರು ಸಿನಿಮಾಗಳನ್ನ ಅಪ್ಪು ಅವರು ಸದ್ದಿಲ್ಲದೇ ಮಾಡಿದಂತಹ ಸಾಮಾಜಿಕ ಸೇವೆಗಳನ್ನ ಸದಾ ನೆನಪಿಸಿಕೊಂಡು ದೇಶಾದ್ಯಂತ ಇರುವ ಅವರ ಅಭಿಮಾನಿಗಳು ಭಾವುಕರಾಗಿಯೇ ಇರುತ್ತಾರೆ. ಇಂದಿಗೂ ಕೂಡ ಎಂತದ್ದೇ ಸಿನಿಮಾ ಕಾರ್ಯಕ್ರಮ ನಡೆದರು ಕೂಡ ಅಲ್ಲಿ ಅಪ್ಪು ಸ್ಮರಣೆ ಮಾಡಿಯೇ ಕಾರ್ಯಕ್ರಮ ಆರಂಭ ಆಗುತ್ತದೆ. ಅಪ್ಪು ಅವರು ಇಂದು ಅಭಿಮಾನಿಗಳಿಗೆ ದೇವರಾಗಿದ್ದಾರೆ. ಇಂದು ರಾಜ್ಯದಲ್ಲಿ ಇರುವ ಎಷ್ಟೋ ಹೋಟೆಲ್ ಗಳಲ್ಲಿ, ಇತರೆ ಅಂಗಡಿಗಳಲ್ಲಿ ಅಪ್ಪು ಅವರ ಫೋಟೋ ಹಾಕಿ ಪ್ರತಿನಿತ್ಯ ಹೂವು ಹಾಕಿ ದೇವರಂತೆ ಪೂಜೆ ಸಲ್ಲಿಸುತ್ತಾರೆ. ಕಾರಣ ಅವರು ಕೇವಲ ಸಿನಿಮಾ ನಟ ಅಂತ ಅಲ್ಲ. ಅವರ ವ್ಯಕ್ತಿತ್ವ ನುಡಿ ಸಮಾಜಕ್ಕೆ ಅವರು ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ ಮಾಡಿದ ಸೇವೆಗಾಗಿ.

ಅದರಂತೆ ಇದೀಗ ಅಪ್ಪು ಅವರನ್ನ ನೆನೆದು ಬಹುಭಾಷಾ ನಟ ಕನ್ನಡಿಗ ಪ್ರಕಾಶ್ ರಾಜ್ ಅವರು ತಮ್ಮ ಫೌಂಡೇಶನ್ ಮುಖಾಂತರ ಅಪ್ಪು ಎಕ್ಸ್ ಪ್ರೆಸ್ ಆಂಬುಲೆನ್ಸ್ ಸೇವೆ ಆರಂಭ ಮಾಡಿದ್ದಾರೆ. ನಟ ಪುನೀತ್ ರಾಜ್ ಕುಮಾರ್ ಅವರ ಅಕಾಲಿಕ ನಿಧನ ನಾಡು ಮಾತ್ರ ಅಲ್ಲದೆ ದೇಶಾದ್ಯಂತ ಇರುವ ಅವರ ಅಪಾರ ಅಭಿಮಾನಿಗಳಿಗೆ ಇಂದಿಗೂ ಕೂಡ ಅರಗಿಸಿಕೊಳ್ಳಲಾಗದ ದುಃಖದ ಸಂಗತಿ. ಈಗಾಗಲೇ ನಾಡಿನಾದ್ಯಂತ ಅಪ್ಪು ಅವರ ಹೆಸರಿನಲ್ಲಿ ರಕ್ತದಾನ, ನೇತ್ರದಾನ ಅಂತಹ ಅನೇಕ ಕಾರ್ಯಕ್ರಮಗಳು ನಡೆದಿವೆ. ಅದರಂತೆ ಇದೀಗ ನಟ ಪ್ರಕಾಶ್ ರಾಜ್ ಅವರು ಅಪ್ಪು ಅವರು ಮಾಡುತ್ತಿದ್ದಂತಹ ಸಾಮಾಜಿಕ ಸೇವೆಯಂತೆಯೇ ತಾವು ಕೂಡ ಅಪ್ಪು ಅವರನ್ನ ಸ್ಮರಿಸುತ್ತ ಅಪ್ಪು ಎಕ್ಸ್ ಪ್ರೆಸ್ ಎಂಬ ಆಂಬುಲೆನ್ಸ್ ಸೇವೆ ನೀಡುವ ಮೂಲಕ ಮೈಸೂರು ಜಿಲ್ಲೆಯಲ್ಲಿ ಬಡ ಬಗ್ಗರಿಗೆ ಅಗತ್ಯ ಇರುವವರಿಗೆ ನೆರವಾಗಲು ಒಂದು ಆಂಬುಲೆನ್ಸ್ ನೀಡಿದ್ದಾರೆ.

ಈ ಆಂಬುಲೆನ್ಸ್ ಸೇವೆಯನ್ನ ಮೊದಲು ಮೈಸೂರಿನಲ್ಲಿ ಆರಂಭ ಮಾಡಿದ್ದು ನಿರ್ದೇಶಕ ಸಂತೋಷ್ ಆನಂದ್ ರಾಮ್ ಈ ಆಂಬುಲೆನ್ಸ್ಗೆ ಚಾಲನೆ ನೀಡಿದ್ದಾರೆ. ಈ ಕುರಿತು ಪ್ರಕಾಶ್ ರಾಜ್ ಅವರು ಅಂದು ಆಂಬುಲೆನ್ಸ್ ಇದ್ದರೆ ಪುನೀತ್ ರಾಜ್ ಕುಮಾರ್ ಅವರು ಬದುಕು ಬಿಡುತ್ತಿದ್ದರು ಎಂದು ಅನಿಸಿತು. ಹಾಗಾಗಿ ಈ ಅಪ್ಪು ಎಕ್ಸ್ ಪ್ರೆಸ್ ಆಂಬುಲೆನ್ಸ್ ಆರಂಭ ಮಾಡಿದ್ದೇನೆ. ಇದು ಕೇವಲ ಮೈಸೂರಿನಲ್ಲಿ ಮಾತ್ರ ಅಲ್ಲ‌. ಮುಂದಿನ ದಿನಗಳಲ್ಲಿ ಈ ಆಂಬುಲೆನ್ಸ್ ಸೇವೆಯನ್ನ ರಾಜ್ಯದ 32 ಜಿಲ್ಲೆಗಳಿಗೂ ವಿಸ್ತರಿಸುತ್ತೇನೆ. ಪುನೀತ್ ರಾಜ್ ಕುಮಾರ್ ಅವರ ಅಗಲಿಕೆಯ ನೋವು ನನಗೆ ಮಾತ್ರ ಅಲ್ಲ ಇಡೀ ನಾಡಿನ ಜನರಿಗೆಯೇ ಅವರ ಅಗಲಿಕೆಯ ನೋವು ಕಾಡುತ್ತಿದೆ. ಅಪ್ಪು ಅವರು ಮತ್ತೊಮ್ಮೆ ಹುಟ್ಟಿ ಬರಲು ನಲವತ್ತು ವರ್ಷ ಬೇಕು ಎಂದು ತಿಳಿಸಿದ್ದಾರೆ. ನನಗೆ ಅಪ್ಪು ಅವರ ಹೆಸರಿನಲ್ಲಿ ಸಹಾಯ ಕೇಳಲು ಯಾವುದೇ ರೀತಿಯಾಗಿ ಮುಜುಗರವಿಲ್ಲ.

ನನಗೆ ಈಗ ಮಿಷನ್ ಆಸ್ಪತ್ರೆ ಬ್ಲಡ್ ಬ್ಯಾಂಕ್ ಕೇಳಿದ್ದಾರೆ. ನಾನು ಅದಕ್ಕೆ ಒಪ್ಪಿದ್ದೇನೆ. ನಾವೆಲ್ಲರೂ ಜಾತಿ, ಧರ್ಮ ಭಾಷೆ ಗಡಿ ಮೀರಿ ಕೆಲಸ ಮಾಡೋಣ ಎಂದು ಪ್ರಕಾಶ್ ರಾಜ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ. ಇನ್ನು ಪ್ರಕಾಶ್ ರಾಜ್ ಅವರ ಈ ಸೇವಾ ಮನೋಭಾವ ಮತ್ತು ಅವರ ಈ ಮಾನವೀಯ ಕಾರ್ಯಕ್ಕೆ ಸೋಶಿಯಲ್ ಮೀಡಿಯಾಗಳಲ್ಲಿ ಅಪಾರ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಇನ್ನು ಪುನೀತ್ ರಾಜ್ ಕುಮಾರ್ ಅವರ ಜೊತೆ ಪ್ರಕಾಶ್ ರಾಜ್ ಅವರು ಕೆಲವೇ ವರ್ಷಗಳಲ್ಲಿ ರಿಲೀಸ್ ಆಗಿ ಸೂಪರ್ ಹಿಟ್ ಆದಂತಹ ರಾಜಕುಮಾರ, ಯುವರತ್ನ ಸಿನಿಮಾಗಳಲ್ಲಿ ನಟಿಸಿದ್ದರು. ಪುನೀತ್ ರಾಜ್ ಕುಮಾರ್ ಅವರನ್ನ ತಿಳಿಸಿದ್ದಾರೆ. ಇನ್ನು ಅಪ್ಪು ಎಕ್ಸ್ ಪ್ರೆಸ್ ಆಂಬುಲೆನ್ಸ್ ಸೇವೆ ಆರಂಭಿಸಿರುವ ಪ್ರಕಾಶ್ ರಾಜ್ ಅವರ ಜೊತೆಗೆ ನಿರ್ದೇಶಕ ಸಂತೋಷ್ ಆನಂದ್ ರಾಮ್ ಅವರು ಕೂಡ ಕೈ ಜೋಡಿಸಿದ್ದಾರೆ.

Leave a Reply

%d bloggers like this: