ಮುಟ್ಟಾದ ಹೆಣ್ಣಿನ ಬಗ್ಗೆ ಸಾನ್ಯಾ ಮಾತನಾಡಿದ ಮಾತು ವೈರಲ್! ಏನಿದೆ ಇದರಲ್ಲಿ

ಸಾನ್ಯಾ ಅಯ್ಯರ್‌ ಹಾಗೂ ಕುಟುಂಬ ಕಾಮಾಕ್ಯ ದೇವಿಯ ಆರಾಧಕರಾಗಿದ್ದು, ಸಾನ್ಯಾ ಮೇಲೆ ಕೂಡಾ ದೇವಿ ಆವಾಹನೆಯಾಗುತ್ತಾಳೆ ಎಂಬ ಸುದ್ದಿ ಹರಿದಾಡುತ್ತಿದೆ. ಸೋಷಿಯಲ್‌ ಮೀಡಿಯಾದಲ್ಲಿ ಸಾನ್ಯ ವಿಡಿಯೋವೊಂದು ಹರಿದಾಡುತ್ತಿದೆ. ಮುಟ್ಟಿನ ಬಗ್ಗೆ ಸಾನ್ಯಾ ಮಾತನಾಡಿದ ಮಾತು ವೈರಲ್ ಆಗಿದೆ. ಮುಟ್ಟಾದ ಮಹಿಳೆಯರು ದೇವಸ್ಥಾನವನ್ನು ಪ್ರವೇಶಿಸುವಂತಿಲ್ಲ ಎಂದು ಹೇಳಿದ್ದಾರೆ. ಪ್ರಾಚೀನ ಕಾಲದಿಂದಲೂ ನಡೆದುಕೊಂಡು ಬಂದಿರುವ ನಂಬಿಕೆಗಳ ಹಿಂದೆ ಖಂಡಿತವಾಗಿಯೂ ಕೆಲವು ವೈಜ್ಞಾನಿಕ ಸತ್ಯವಿದೆ.

ಮುಟ್ಟಿನ ಸಮಯದಲ್ಲಿ ಪೂಜೆ ಮಾಡದಿರಲು ಕಾರಣವೆಂದರೆ ಆ ಸಮಯದಲ್ಲಿ ಆರಾಧನಾ ವ್ಯವಸ್ಥೆಯು ಜಪವಿಲ್ಲದೆ ಸಂಪೂರ್ಣವೆಂದು ಪರಿಗಣಿಸಲ್ಪಡುವುದಿಲ್ಲ. ಅದೇ ವೇಳೆ, ಪೂಜೆಯ ಸಮಯದಲ್ಲಿ ದೊಡ್ಡ ಆಚರಣೆಗಳನ್ನು ನಡೆಸಲಾಗುತ್ತಿತ್ತು, ಇದು ಸಾಕಷ್ಟು ಸಮಯ ಮತ್ತು ಶಕ್ತಿಯನ್ನು ತೆಗೆದುಕೊಳ್ಳುತ್ತದೆ ಎಂದಿದ್ದಾರೆ ಸಾನ್ಯಾ. ಮುಟ್ಟಿನ ಸಮಯದಲ್ಲಿ ಮಹಿಳೆಯರು ಆಯಾಸ ಮತ್ತು ನೋವಿನಲ್ಲಿರುತ್ತಾರೆ ಎನ್ನುವ ಕಾರಣದಿಂದ ಅವರಿಗೆ ಆ ಅವಧಿಯಲ್ಲಿ ಪೂಜೆ, ಧಾರ್ಮಿಕ ಕಾರ್ಯಗಳನ್ನು ನೆರವೇರಿಸಲು ಅವಕಾಶವನ್ನು ನೀಡಲಾಗಿಲ್ಲ ಎಂದಿದ್ದಾರೆ.

ಹಾಗಾಗಿ ವೈಜ್ಞಾನಿಕ ಕಾರಣಗಳನ್ನು ಅರಿತು ಮುಟ್ಟಾದ ದಿನಗಳಲ್ಲಿ ದೇವಸ್ಥಾನಕ್ಕೆ ಭೇಟಿ ನೀಡದಿರುವುದು ಒಳ್ಳೆಯದು ಎಂದಿದ್ದಾರೆ ಸಾನ್ಯಾ. ಮಂತ್ರಗಳನ್ನು ಅತ್ಯಂತ ಪರಿಶುದ್ಧತೆಯಿಂದ ಪಠಿಸಬೇಕಾಗುತ್ತದೆ. ಮುಟ್ಟಿನ ಸಮಯದಲ್ಲಿ, ಮಹಿಳೆಯರು ಹಾರ್ಮೋನ್ ಬದಲಾವಣೆಗಳಿಂದಾಗಿ ಸಾಕಷ್ಟು ನೋವು ಮತ್ತು ಆಯಾಸವನ್ನು ಅನುಭವಿಸುತ್ತಾರೆ. ಇಂತಹ ಪರಿಸ್ಥಿತಿಯಲ್ಲಿ ಮಹಿಳೆಯರು ಹೆಚ್ಚು ಹೊತ್ತು ಕೂರುವುದು, ಜಪ ಮಾಡುವುದಾಗಲಿ, ವಿಧಿವಿಧಾನಗಳನ್ನು ಮಾಡುವುದಾಗಲಿ ಸಾಧ್ಯವಾಗುತ್ತಿರಲಿಲ್ಲ. ಅದಕ್ಕಾಗಿಯೇ ಅವರು ಪೂಜೆಯಲ್ಲಿ ಕುಳಿತುಕೊಳ್ಳಲು ನಿಷೇಧಿಸಲಾಗಿದೆ ಎಂದಿದ್ದಾರೆ ಸಾನ್ಯಾ.

Leave a Reply

%d bloggers like this: