ಮುಸಲ್ಮಾನರು ಹಂದಿ ಮಾಂಸ ತಿನ್ನಲ್ಲ ಯಾಕೆ ಅಂತ ಬಹುತೇಕ ಹಿಂದೂಗಳಿಗೆ ಗೊತ್ತಿಲ್ಲ

ಬಹಳ ಸೂಕ್ಷ್ಮವಾದ ವಿಷಯವಿದು ಬಹಳ ಜನರಿಗೆ ಗೊತ್ತಿಲ್ಲದ್ದು.ಇಸ್ಲಾಮ್ ಧರ್ಮದಲ್ಲಿ ಅಂದ್ರೆ ಜುದಾಯಿಸಂನಲ್ಲಿ ಹಂದಿಯನ್ನು ಬಳಕೆ ಮಾಡುವುದನ್ನು ನಿಷೇಧಿಸಲಾಗಿದೆ.ಯಾಕೆ ಮುಸ್ಲಿಮರು ಹಂದಿ ಮಾಂಸ ತಿನ್ನುವುದಿಲ್ಲ ಅನ್ನುವ ಪ್ರಶ್ನೆ ಮೂಡುತ್ತದೆ.ಮುಸ್ಲಿಮರಲ್ಲಿ ಕೆಲವೊಂದು ನಿಬಂಧನೆಗಳು,ನಿರ್ಬಂಧಗಳು,ವಿಧಾನಗಳು ಇವೆ.ಅವನ್ನು ಪ್ರತಿಯೊಬ್ಬ ಮುಸಲ್ಮಾನನೂ ಚಾಚೂ ತಪ್ಪದೇ ಅನುಸರಿಸುತ್ತಾನೆ. ಕುರಾನಿನಲ್ಲಿ ಹೇಳಿರುವ ಪ್ರಕಾರ ಮುಸಲ್ಮಾನನು ಹಲಾಲ್ ಅಥವಾ ಸತ್ತ ಪ್ರಾಣಿಯನ್ನು ತಿನ್ನುವ ಹಾಗಿಲ್ಲ.ಹಂದಿ ಮಾಂಸವನ್ನೂ ತಿನ್ನುವ ಹಾಗಿಲ್ಲ.ಬೈಬಲ್ಲಿನಲ್ಲೂ ಕ್ರಿಶ್ಚಿಯನ್ ಆದವನು ಹಂದಿ ಮಾಂಸ ತಿನ್ನುವಂತಿಲ್ಲ ಎಂದು ಹೇಳಲಾಗಿದೆ.ಇದಕ್ಕೆ ಕಾರಣ ಹಂದಿಯ ಬದುಕಿನ ಶೈಲಿ.ಅವು ಎಲ್ಲವನ್ನೂ ತಿಂದು ಬದುಕುತ್ತವೆ.ಉದಾಹರಣೆಗೆ ಕೆಸರು,ಕೊಳೆತ ನೀರು,ಕೆಟ್ಟ ರಕ್ತ,ಸತ್ತ ಪ್ರಾಣಿಯ ಮಲ,ಮನುಷ್ಯರ ಮಲ ಇತ್ಯಾದಿ.

ಹಾಗಾಗಿ ಅದರ ಮಾಂಸದಿಂದ ಎಪ್ಪತ್ತಕ್ಕೂ ಅಧಿಕ ಕಾಯಿಲೆಗಳು ಬರುತ್ತವೆ.ಅದನ್ನು ಸೇವಿಸಿದರೆ ಕರುಳಿನಲ್ಲಿ ಹುಳಗಳು ಉತ್ಪತ್ತಿ ಆಗುತ್ತವೆ.ದೇಹದಲ್ಲಿ ಕೆಟ್ಟ ಕೊಬ್ಬಿನ ಅಂಶ ಹೆಚ್ಚಾಗುತ್ತದೆ.ಹೀಗಾಗಿ ಕುರಾನಿನಲ್ಲಿ ಹಾಗೂ ಬೈಬಲ್ಲಿನಲ್ಲಿ ಹಂದಿ ಮಾಂಸವನ್ನು ತಿನ್ನುವುದು ನಿಷೇಧ ಅಂತ ಹೇಳಿದ್ದಾರೆ. ಹಂದಿ ವಿಶಾಲವಾದ ಪ್ರಕೃತಿಯ ಒಂದು ಜೀವ.ಅದರ ಉದ್ದೇಶ ಭೂಮಿ ಮೇಲೆ ಏನಿದಿಯೋ ಅದರ ಕೆಲಸ ಅದು ಮಾಡುತ್ತಿರಬಹುದು.ನೀವೂ ಹಂದಿ ಮಾಂಸ ಸೇವಿಸುತ್ತಿದ್ರೆ ಯೋಚಿಸಿ ಅದನ್ನು ಸೇವಿಸುವುದನ್ನು ಮುಂದುವರೆಸಬೇಕಾ ಬೇಡವಾ ಅನ್ನೋದನ್ನ.