ಮೂರುವರೆ ಎತ್ತರವಿರುವ ಈಕೆ ಎಷ್ಟು ಪವರ್ ಫುಲ್ ಮಹಿಳೆ ಗೊತ್ತಾ? ಯಾರು ಅಂತ ಗೊತ್ತಾದರೆ ಮೈ ನಡಗತ್ತೆ

ತಮ್ಮ ದೈಹಿಕ ನ್ಯೂನತೆ ಮೀರಿ ಐಎಎಸ್ ಉತ್ತೀರ್ಣರಾದ ಈ ಸಾಧಕಿ ಇಂದು ಗ್ರಾಮೀಣ ಭಾಗಗಳಲ್ಲಿ ಜನ ಸಾಮಾನ್ಯರ ಅಚ್ಚು-ಮೆಚ್ಚಿನ ಜನ ಸೇವಕಿಯಾಗಿ ಮನೆ ಮಾತಾಗಿದ್ದಾರೆ.ನಮ್ಮಲ್ಲಿಅನೇಕರು ಎಲ್ಲಾ ರೀತಿಯ ಸೌಲಭ್ಯ ಸೌಕರ್ಯಗಳನ್ನು ಹೊಂದಿದ್ದರು ಕೂಡ ಕುಂಟು ನೆಪವೊಡ್ಡಿ ಸೋಮಾರಿಗಳಾಗಿ ಕೆಲಸ ಕಾರ್ಯಗಳಲ್ಲಿ ತೊಡಗದೆ ಅನಾವಶ್ಯಕವಾಗಿ ಸಮಯ ಹಾಳು ಮಾಡುವವರಿದ್ದಾರೆ.ಕೆಲವರು ತಮ್ಮ ನಿರ್ಲಕ್ಷ್ಯತನದಿಂದಾಗಿ ಜೀವನದಲ್ಲಿ ಮಾಡಬೇಕಾದ ಬಹುತೇಕ ಕೆಲಸಗಳನ್ನ ಬಿಟ್ಟು ಕಾಲಹರಣ ಮಾಡುತ್ತಾರೆ.ಇಂದು ಬಹುತೇಕ ಯುವ ಜನರು ಆಧುನಿಕ ಜೀವನಶೈಲಿಗೆ ಒಳಗಾಗಿ ಕೇವಲ ಆಸೆಗಳಿಗೆ ತಮ್ಮ ಬದುಕನ್ನ ಮುಡಿಪಾಗಿಸಿಕೊಂಡಿರುತ್ತಾರೆ.ಬದುಕಿಗೆ ಕೇವಲ ಅಂದ-ಚಂದ ಬಾಹ್ಯ ಸೌಂದರ್ಯಕ್ಕಿಂತ ಮುಖ್ಯವಾಗಿ ಸಾಧನೆ ಅತಿ ಮುಖ್ಯವಾಗಿರುತ್ತದೆ.ಅದರಂತೆ ಕೇವಲ ಮೂರಡಿ ಎತ್ತರದ ಈ ಮಹಿಳೆ ಇಂದು ಐಎಎಸ್ ಪರೀಕ್ಷೆಯಲ್ಲಿ ಮೊದಲನೇ ಪ್ರಯತ್ನದಲ್ಲೇ ಯಶಸ್ಸು ಪಡೆದು ಸಿವಿಲ್ ಸರ್ವೀಸ್ ನಲ್ಲಿದ್ದಾರೆ.

ಉತ್ತರಾಖಂಡದ ಡೆಹ್ರಾಡೂನಿನ ಆರತಿ ಡೋಗ್ರಾ ಎಂಬ ಯುವತಿಯು ದೈಹಿಕ ಬೆಳವಣಿಗೆ ಕಾಣದೇ ಕುಬ್ಜರಾಗಿರುತ್ತಾರೆ.ಆದರೆ ಇವರ ಮಾನಸಿಕ ಬೌದ್ದಿಕ ಸಾಮರ್ಥ್ಯದಲ್ಲಿ ಅಗಾದ ಪ್ರತಿಭೆಯನ್ನ ಹೊಂದಿರುತ್ತಾರೆ.ಭಾರತೀಯ ಸೇನೆಯಲ್ಲಿ ಕರ್ನಲ್ ಆಗಿ ಕಾರ್ಯನಿರ್ವಹಿಸುತ್ತಿದ್ದ ನರೇಂದ್ರ ಡೋಗ್ರಾ ಮತ್ತು ಯೂನಿವರ್ಸಿಟಿವೊಂದರಲ್ಲಿ ಪ್ರಾಧ್ಯಾಪಕಿಯಾಗಿದ್ದ ಕುಮ್ ಕುಮ್ ಡೋಗ್ರಾ ದಂಪತಿಗಳ ಏಕೈಕ ಪುತ್ರಿ ಆರತಿ ಡೋಗ್ರಾ ಅವರು ದೈಹಿಕ ನ್ಯೂನತೆಗೆ ಒಳಗಾಗಿ ಕುಬ್ಜರಾಗಿರುತ್ತಾರೆ.ಕುಮ್ ಕುಮ್ ಅವರು ಆರತಿಗೆ ಜನ್ಮನೀಡಿದಾಗ ಈ ಮಗು ದೈಹಿಕ ಸಮಸ್ಯೆಗೆ ತುತ್ತಾಗಿದೆ ಎಂದು ಹೇಳಿದಾಗ ಕುಮ್ ಕುಮ್ ಅವರು ಮತ್ತೊಂದು ಮಗು ಮಾಡಿಕೊಳ್ಳುವ ಆಲೋಚನೆ ಬಿಟ್ಟು ಸಂಪೂರ್ಣವಾಗಿ ತಮ್ಮ ಪ್ರೀತಿ,ಆರೈಕೆಯನ್ನ ಆರತಿ ಅವರ ಮೇಲೆಯೇ ಕಾಳಜಿ ವಹಿಸುತ್ತಾರೆ. ತನ್ನ ಮಗಳು ಆರತಿ ಅವರಿಗೆ ಉತ್ತಮವಾದ ಗುಣಮಟ್ಟ ಶಿಕ್ಷಣ ಕೊಡಿಸಬೇಕೆಂದು ಡೆಹ್ರಾಡೂನಿನ ಪ್ರತಿಷ್ಟಿತ ಶಾಲೆಯಲ್ಲಿ ವಿಧ್ಯಾಭ್ಯಾಸ ಕೊಡಿಸುತ್ತಾರೆ.

ತದ ನಂತರ ಆರತಿ ಅವರು ದೆಹಲಿಯ ಯೂನಿವರ್ಸಿಟಿಯಲ್ಲಿ ಪರಿಧಿಯ ಶ್ರೀರಾಮ್ ಕಾಲೇಜೊಂದರಲ್ಲಿ ವಾಣಿಜ್ಯ ವಿಭಾಗದಲ್ಲಿ ಪದವಿಯನ್ನ ಪಡೆಯುತ್ತಾರೆ.ತದ ನಂತರ ತಾನು ಯುಪಿಎಸ್ಸಿ ಪರೀಕ್ಷೆ ಬರೆದು 2006 ರಲ್ಲಿ ತಮ್ಮ ಚೊಚ್ಚಲ ಪ್ರಯತ್ನದಲ್ಲಿಯೇ ಯಶಸ್ಸು ಪಡೆಯುತ್ತಾರೆ.ಬಳಿಕ ಆರತಿ ಅವರಿಗೆ ಬಿಕಾನೇರ್ ನಲ್ಲಿ ಪೋಸ್ಟಿಂಗ್ ಆಗುತ್ತದೆ.ಬಿಕಾನೇರ್ ನಲ್ಲಿ ಆರತಿ ಅವರು ಜನರಿಗೆ ನೈರ್ಮಲ್ಯದ ಬಗ್ಗೆ ಬಂಕೋ ಬಿಕಾಣೋ ಎಂಬ ಅಭಿಯಾನ ಆರಂಭಿಸುತ್ತಾರೆ. ಈ ಮೂಲಕ ಸರಿ ಸುಮಾರು 195 ಗ್ರಾಮಗಳಲ್ಲಿ ಬಯಲು ಮುಕ್ತಮಾಡಿ ಎಲ್ಲ ಮನೆಯವರಿಗೂ ಶೌಚಾಲಯ ನಿರ್ಮಾಣ ಮಾಡಿಸಿಕೊಡುತ್ತಾರೆ.ಜನರೊಂದಿಗೆ ಬೆರೆತು ತಾವು ಅವರಲ್ಲಿ ಒಬ್ಬರಾಗುತ್ತಾರೆ.ಒಟ್ಟಾರೆಯಾಗಿ ತನ್ನನ್ನು ಕುಬ್ಜಳೆಂದು ಜರಿದ ಜನರೇ ಅಚ್ಚರಿಯಾಗಿ ನೋಡುವಂತೆ ಉತ್ತಮ ಮಾದರಿ ಬದುಕನ್ನ ಕಟ್ಟಿಕೊಂಡಿರುವ ಆರತಿ ಡೋಗ್ರಾ ನಿಜಕ್ಕೂ ಕೂಡ ಅಸಹಾಯಕರಿಗೆ ಸಣ್ಣ ಪುಟ್ಟ ನ್ಯೂನತೆಗಳಿಗೆ ಹೆದರಿ ತಮ್ಮ ಕನಸನ್ನ ಅರ್ಧಕ್ಕೆ ಮೊಟಕುಗೊಳಿಸುವ ಅನೇಕ ಮಂದಿಗೆ ಆದರ್ಶವಾಗಿದ್ದಾರೆ.

Leave a Reply

%d bloggers like this: